ನಗರದ ಕಲ್ಯಾಣ್ ಜ್ಯುವೆಲರ್ಸ್ ನಲ್ಲಿ ಬ್ಲಾಸ್ಟ್ ಐವರಿಗೆ ಗಾಯ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮೇ.03:  ನಗರದ ತೇರು ಬೀದಿಯಲ್ಲಿರುವ ಚಿನ್ನಾಭರಣಗಳ ಮಾರಾಟ ಮಳಿಗೆ ಕಲ್ಯಾಣ್ ಜ್ಯುವೆಲರ್ಸ್ ನಲ್ಲಿ ನಿನ್ನೆ ಸಂಜೆ  ಎಸಿ ಸಿಸ್ಟಮ್ ಬ್ಲಾಸ್ಟ್ ಆಗಿ‌ ಐವರು ಗಾಯಗೊಂಡಿದ್ದಾರೆ.
ಶಾಪಿನ ಸೆಂಟ್ರಲ್ ಎಸಿ ಗ್ಯಾಸ್ ರೀಫಿಲ್ ಮಾಡುವ ಕಾಲಕ್ಕೆ ಆಕಸ್ಮಿಕವಾಗಿ ಗ್ಯಾಸ್ ಬ್ಲಾಸ್ಟ್ ಆಗಿದೆ. ಗ್ಯಾಸ್ ಫಿಲ್ ಮಾಡಲು ಬಂದಿದ್ದ  ಟೆಕ್ನಿಷಿಯನ್‌  ಅಹಮ್ಮದ್ ಭಾಷ,  ಸೈಯ್ಯದ್ ತಬ್ರೇಜ್ ಭಾಷ ಮತ್ತು  ಸೈಯ್ಯದ್ ಜುಬೇರ್  ಮತ್ತು  ಕಲ್ಯಾಣ್ ಜ್ಯುವೆಲ್ಲರ್ಸ್ ನಲ್ಲಿ ಕೆಲಸ ಮಾಡುತ್ತಿದ್ದ  ಅರುಣ್ ಹಾಗು ನಿಂಗಪ್ಪ ಅವರಿಗೆ ತೀವ್ರ  ಸ್ವರೂಪದ ಸುಟ್ಟ ಗಾಯಗಳಾಗಿದ್ದು.  ಇವರಲ್ಲಿ ಅಹಮ್ಮದ್ ಭಾಷ ಅವರು ಗಂಭೀರವಾಗಿ ಗಾಯಗೊಂಡಿದ್ದು ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದೆ.
ಘಟನೆಯನ್ನು ನೋಡಲು ನೂರಾರು ಜನತೆ ಸೇರಿದ್ದರು.
ಈ ಬಗ್ಗೆ ಬೂಸಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ.