ದೇಶಭಕ್ತರನ್ನು ಜೈಲಿಗೆ ಕಳಿಸುವ ಕಾರ್ಯದಲ್ಲಿ ಮೋದಿ ಸರ್ಕಾರ ಬೀಜಿ: ಜಿಗ್ನೇಶ ಮೆವಾನಿ
ಬೀದರ್:ಮೇ.3: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸರ್ಕಾರ ವಿರೋಧ ಪಕ್ಷದವರಿಗೆ ಇಡಿ ಸಂಸ್ಥೆಯನ್ನು ದುರ್ಬಳಕೆ ಮಾಡಿಕೊಂಡು ಜೈಲಿಗೆ ಕಳುಹಿಸುತ್ತಿದೆ. ನನಗೂ ಆಸ್ಸಾಂ ಜೈಲಿಗೆ ಹಾಕಿದ್ರು. 1925 ರಿಂದ ಆರ್‍ಎಸ್‍ಎಸ್ ಮನುಸ್ಮøತಿಯನ್ನು ಈ ದೇಶದಲ್ಲಿ ಜಾರಿಗೆ ತರಲು ಪ್ರಯತ್ನ ಮಾಡುತ್ತಿದೆ. ಪ್ರತಿ ಬಾರಿ 400 ಸೀಟ್‍ಗಳಲ್ಲಿ ಗೆಲ್ಲುತ್ತೇವೆ ಎಂದು ಹೇಳುವ ಬಿಜೆಪಿ ಬಡವರಿಗೆ ಗ್ಯಾಸ್ ಸಿಲಿಂಡರನ್ನು 400 ರೂಪಾಯಿಗೆ ಕೊಡುತ್ತೇವೆ ಎಂದು ಹೇಳುವುದಿಲ್ಲ ಎಂದು ಗುಜರಾತ ಶಾಸಕರು ಹಾಗೂ ಕಾಂಗ್ರೇಸ್ ಪಕ್ಷದ ಸಿಡಬ್ಲೂಸಿ ಸದಸ್ಯರಾದ ಜಿಗ್ನೇಶ ಮೇವಾನಿ ತಿಳಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಗುರುವಾರ ಜರುಗಿದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಇಂದು ದೇಶದಲ್ಲಿ ಮೋದಿಯವರು ಹೇಳಿದಂತೆ 20 ಕೋಟಿ ಉದ್ಯೊಗ ಸೃಷ್ಟಿಯಾಗಬೇಕಾಗಿತ್ತು. ಆದರೆ 6 ಕೋಟಿ ಯುವಕರು ಉದ್ಯೋಗ ಕಳೆದುಕೊಂಡಿದ್ದಾರೆ. ವಿವೇಕ ದೇವರಾಯ್, ಅನಂತಕುಮಾರ ಹೆಗಡೆಯವಂಥವರು ಸಂವಿಧಾನ ಬದಲಾವಣೆ ಮಾಡ್ತಿವಿ ಎಂದು ಹೇಳುತ್ತಾರೆ ಎಂದು ಹೇಳಿದ್ರು.
ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ಮುಂದುವರೆಸಿದ ಜಿಗ್ನೇಶ ಮೇವಾನಿಯವರು ಮೋದಿ ಪರಿವಾರ ಎಂದರೆ ಪ್ರಜ್ವಲ್ ರೇವಣ್ಣನಂಥವರಾ? ಎಂದು ಪ್ರಶ್ನೆ ಮಾಡಿದ್ರು. ಮಣಪುರ ಮಹಿಳಾ ನಗ್ನ ಘಟನೆ, ಹತ್ರಾಸ್ ಮಹಿಳಾ ಶೋಷಣೆ ಘಟನೆ ಬಗ್ಗೆ ಮೋದಿಜಿ ಮಾತನಾಡುವುದಿಲ್ಲ. ಹೀಗಾಗಿ ಬಿಜೆಪಿ ಮಹಿಳಾ ವಿರೋಧಿ ಸರ್ಕಾರವಾಗಿದೆ ಎಂದು ಆರೋಪಿಸಿದರು. ಅಲ್ಲದೆ ಬಿಜೆಪಿ ಕಚೇರಿಗಳಿಗೆ ಮಹಿಳೆಯರನ್ನು ಕರೆದುಕೊಂಡು ಹೋಗಬೇಡಿ ಎಂದು ತಿಳಿಸಿದರು.
ನಮ್ಮ ಕಾಂಗ್ರೇಸ್ ಪ್ರಣಾಳಿಕೆಯಲ್ಲಿ 30 ಲಕ್ಷ ಉದ್ಯೋಗ ಸೃಷ್ಟಿ, ಮಹಿಳೆಗೆ ಒಂದು ವರ್ಷಕ್ಕೆ 1 ಲಕ್ಷ ರೂಪಾಯಿ ಸಂಭಾವನೆ, ನರೇಗಾ ಕೂಲಿ 400 ರೂಪಾಯಿಗೆ ಏರಿಕೆ, ಸೇರಿದಂತೆ ಸಹೋದರತ್ವ, ಪ್ರೀತಿ ವಿಶ್ವಾಸದಿಂದ ರಾಹುಲ್ ಗಾಂಧಿ ಮಾತನಾಡುತ್ತಾರೆ. ಆದರೆ ಬಿಜೆಪಿಗರು ದ್ವೇಷ ಭಾಷಣಗಳನ್ನು ಮಾಡುತ್ತ ಕೈಯಲ್ಲಿ ತ್ರಿಶೂಲ, ತಲವಾರ್ ಕೊಡುತ್ತಾರೆ ಎಂದು ತಮ್ಮ ಆಕ್ರೋಶ ಹೊರಹಾಕಿದರು. ಬಿಜೆಪಿಯವರು ಆಕಳನ್ನು ಕೊಲ್ಲುವ ಕಂಪನಿಯಿಂದ ಚುನಾವಣಾ ಬಾಂಡ್ ಚಂದಾ ಪಡೆದಿದ್ದಾರೆ ಎಂದು ಆರೋಪ ಮಾಡಿದ್ದಾರಲ್ಲದೆ ಪ್ರಜ್ವಲ್ ರೇವಣ್ಣ ಅವರ ಕೇಸ್‍ನಲ್ಲಿ ತನಿಖೆಯಾಗಿ, ಆರೋಪ ಸಾಬೀತಾದರೆ ಶಿಕ್ಷೆ ನೀಡುವುದರಲ್ಲಿ ಕಾಂಗ್ರೇಸ್ ಪಕ್ಷ ಕ್ಲಿಯರ್ ಆಗಿದೆ ಎಂದು ಹೇಳಿದ್ರು.
ಇದೇ ವೇಳೆ ಸುದ್ದಿಗೋಷ್ಠಿಯಲ್ಲಿ ಕಾಂಗ್ರೇಸ್ ಪಕ್ಷದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಘಟಕದ ಮುಖಂಡರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.