ಉತ್ತಮ ಸಂಸ್ಕಾರವಂತರಾಗಲು ಕರೆ
ಸಂಜೆವಾಣಿ ವಾರ್ತೆ
ಸಂಡೂರು: ಮೇ: 3:  ನೈತಿಕ ಸಂಸ್ಕಾರ ಬದುಕಿನ ಅತಿ ದೊಡ್ಡ ಅಂಶ ಅದನ್ನು ಕಲಿಯುವ ಮತ್ತು ಕಲಿಸುವ ಕಾರ್ಯವನ್ನು ಮಾಡುತ್ತಿರುವುದು ಬಹು ಮುಖ್ಯವಾದುದು ಅದನ್ನು ಕಡ್ಡಾಯವಾಗಿ ಕಲಿಯುವ ಮೂಲಕ ಉತ್ತಮ ಸಂಸ್ಕಾರವಂತರಾಗಬೇಕು ಎಂದು ಸಂಡೂರು ವಿರಕ್ತಮಠದ ಪ್ರಭುಮಹಾಸ್ವಾಮಿಗಳು ಕರೆನೀಡಿದರು.
ಅವರು ಪಟ್ಟಣದ ಶ್ರೀ ವೀರಭದ್ರಶ್ವೇರ ದೇವಸ್ಥಾನದ ಅವರಣದಲ್ಲಿ ಹಮ್ಮಿಕೊಂಡಿದ್ದ ಸಂಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಪ್ರತಿಯೊಬ್ಬರಿಗೂ ಬಹು ಮುಖ್ಯ ಅಂತಹ ಕಾರ್ಯವನ್ನು ಬೇಡಜಂಗಮ ಕ್ಷೇಮಾಭಿವೃದ್ದಿ ಸಂಘ ಹಮ್ಮಿಕೊಂಡಿದ್ದು ಉತ್ತಮ ಕಾರ್ಯ, ಇಂದು ನಾವು ವೈದ್ಯರು, ಶಿಕ್ಷಕರು, ನೌಕರನಾಗಬಹುದು, ಅದರೆ ನೈತಿಕತೆ ಹೊಂದಿದ ವ್ಯಕ್ತಿಯಾಗುವುದು ಅತಿ ಮುಖ್ಯವಾದುದು, ಸ್ವಾವಲಂಬಿ ಹಾಗೂ ಸ್ವಾಭಿಮಾನವನ್ನು ಕಲಿಸುವಂತಹ, ಸಮಾಜಕ್ಕೆ ಉತ್ತಮ ಸಂದೇಶ ಕಳುಹಿಸುವಂತಹ ವ್ಯಕ್ತಿಗಳನ್ನು ನಿರ್ಮಾಣ ಮಾಡುವ ಕಾರ್ಯ ಜಂಗಮಸಮಾಜದ ಬಹುದೊಡ್ಡ ಕಾರ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಚರಂತಯ್ಯ ಮಾತನಾಡಿ, ಮೇ 1 ರಿಂದ 16 ರವೆಗೆ ದಿನಂ ಪ್ರತಿ ಬೆಳಿಗ್ಗೆ 6 ಗಂಟೆಯಿಂದ 8 ಗಂಟೆಯವರೆಗೆ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದು ಸಾರ್ವಜನಿಕರು ಪೂರ್ಣಪ್ರಮಾಣದಲ್ಲಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮುಖಂಡರಾದ ಚರಂತಯ್ಯ ತಿಳಿಸಿದರು.
ಅವರು ಮಾಹಿತಿ ನೀಡಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗುವ ಜಂಗಮ ಸಮಾಜದ ಭಾಂದವರು ಶಿಬಿರದಲ್ಲಿ ಕಲಿಯುವ ಅಸಕ್ತರು ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕು ಸಂಪರ್ಕ ಸಂಖ್ಯೆಗಳು 9341432962,8150094109,9980210004,903635885,8310115595 ಗೆ ಸಂಪರ್ಕಿಸಿ ಬೇಕು ಅಲ್ಲದೆ ಗಣ್ಯರಾದ ವೇ.ಮೂ. ಮರಿಸ್ವಾಮಿ ಹಿರೇಮಠ, ರವಿಸ್ವಾಮಿ ಹಿರೇಮಠ, ಶರಣಬಸಪ್ಪ ಶಾಸ್ತ್ರಿ ಜೆ.ಎಂ. ಇವರು ತರಬೇತಿಯನ್ನು ನೀಡುತ್ತಿದ್ದು ನೊಂದಾಯಿಸಿಕೊಳ್ಳಿ ಎಂದರು