ಅಸೂಟಿ ಪರ ಬಿರುಸಿನ ಪ್ರಚಾರ
ಧಾರವಾಡ,ಮೇ3 : ನಮ್ಮ ರಾಜ್ಯದ ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳನ್ನು ನೋಡಿ ಕೇಂದ್ರದ ಕಾಂಗ್ರೆಸ್ ಕೂಡ ಸುಮಾರು 25 ಗ್ಯಾರಂಟಿಗಳನ್ನು ಪ್ರಣಾಳಿಕೆಯಲ್ಲಿ ನೀಡಿದೆ. ಐಐಟಿಗೆ ಐದುನೂರು ಎಕರೆ ಜಮೀನು ಕೊಡಿಸಿದ್ದು, ಬಿಆರ್‍ಟಿಎಸ್ ಕೂಡ ನಮ್ಮ ಕಾಂಗ್ರೆಸ್ ಪಕ್ಷದ ಯೋಜನೆಗಳೆ ಆದರೆ ಅವೆಲ್ಲವನ್ನೂ ಹಾಳು ಮಾಡಿದ್ದು ಪ್ರಲ್ಹಾದ ಜೋಶಿ. ಆದ್ದರಿಂದ ಈ ಬಾರಿ ವಿನೋದ ಅಸೂಟಿಯವರನ್ನು ಆಯ್ಕೆ ಮಾಡಿ ದೆಹಲಿಗೆ ಕಳಿಸಿಕೊಡಬೇಕೆಂದು ಶಾಸಕರಾದ ವಿನಯ್ ಕುಲಕರ್ಣಿ ಹೇಳಿದರು.
ಕಿತ್ತೂರಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಧಾರವಾಡ ಲೋಕಸಭಾ ವ್ಯಾಪ್ತಿಯ ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಧಾರವಾಡ ಮಹಾನಗರ ಪಾಲಿಕೆ 1-9 ವಾರ್ಡಗಳ ಮುಖಂಡರ ಹಾಗೂ ಕಾರ್ಯಕರ್ತರ ಸಾರ್ವಜನಿಕ ಬಹಿರಂಗ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ವಿನೋದ ಅಸೂಟಿ ಅವರು ಮಾತನಾಡಿ, ಹತ್ತು ವರ್ಷ ಕಳೆದರು ಬೆಲೆ ಏರಿಕೆ, ರೈತರ ಸಾಲಮನ್ನಾ, ನಿರುದ್ಯೋಗ ಇನ್ನೂ ಮುಂತಾದ ಸಮಸ್ಯೆಗಳನ್ನು ನಿಯಂತ್ರಿಸಲಾಗದ ಬಿಜೆಪಿಯನ್ನು ತಿರಸ್ಕರಿಸಿ ಕಾಂಗ್ರೆಸನ್ನು ಪುರಸ್ಕರಿಸಿ. ತಮಗೆ ಹೆಚ್ಚಿನ ಮತ ನೀಡಿ ಆಶೀರ್ವದಿಸಬೇಕೆಂದು ಮನವಿ ಮಾಡಿಕೊಂಡರು.
ಇದೇ ವೇಳೆ ಬಿಜೆಪಿಯನ್ನು ತೊರೆದು ನೂರಕ್ಕೂ ಹೆಚ್ಚು ಯುವಕರು ಕಾಂಗ್ರೆಸ್ ಪಕ್ಷವನ್ನು ಸೇರಿದರು.
ಈ ಸಂದರ್ಭದಲ್ಲಿ ಅನೀಲಕುಮಾರ ಪಾಟೀಲ, ಅಲ್ತಾಫ್ ಹಳ್ಳೂರ, ಶಿವಲೀಲಾ ಕುಲಕರ್ಣಿ, ಶಿವಾನಂದ ಮುತ್ತಣ್ಣವರ, ಅರವಿಂದ ಏಗನಗೌಡರ, ಈಶ್ವರ ಶಿವಳ್ಳಿ, ಪಾಲಿಕೆಯ ಸದಸ್ಯರು ಹಾಗು ಪರಾಜಿತ ಅಭ್ಯರ್ಥಿಗಳು, ಒಂಭತ್ತು ವಾರ್ಡಿನ ಹಿರಿಯ ನಾಯಕರು, ಮಹಿಳಾ ಮುಖಂಡರು, ಪಕ್ಷದ ಧುರೀಣರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.