ರೈತರಿಗೆ ಅನ್ಯಾಯ: ಹೋರಾಟದ ಎಚ್ಚರಿಕೆ
ನವಲಗುಂದ,ಮೇ3 : ಉತ್ತರ ಕರ್ನಾಟಕದ ಬಹುತೇಕ ತಾಲೂಕುಗಳಲ್ಲಿ ಬರಗಾಲವಿದ್ದು ಬೆಳೆಪರಿಹಾರ, ಬೆಳೆವಿಮೆಯ ಹಣವನ್ನ ಹಾಕಿಲ್ಲ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬಾಕಿ ಉಳಿದ ಹಣವನ್ನು ಶೀಘ್ರವಾಗಿ ರೈತರ ಖಾತೆಗೆ ಹಾಕ್ಬೇಕು. ಅಷ್ಟೇಅಲ್ಲದೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಳಸಾಬಂಡೂರಿ ನಾಲಾ ಜೋಡಣೆ ವಿಚಾರದಲ್ಲಿ ಒಬ್ಬರ ಮೇಲೆ ಒಬ್ಬರ ಆಪಾದನೆ ಮಾಡುತ್ತಾ ರೈತ ಕುಲಕ್ಕೆ ಅನ್ಯಾಯ ಮಾಡುತ್ತಿದ್ದಾರೆ, ಮುಂಬರುವ ದಿನಗಳಲ್ಲಿ ಯೋಜನೆ ಪ್ರಾರಂಭವಾಗದಿದ್ದರೆ ಬೀದಿಗಿಳಿದು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಕಳಸಾ ಬಂಡೂರಿ ರೈತ ಹೋರಾಟ ಸಮಿತಿ ಅಧ್ಯಕ್ಷ ಯಲ್ಲಪ್ಪ ದಾಡಿಬಾಯಿ ಆಕ್ರೋಶ ವ್ಯಕ್ತಪಡಿಸಿದರು.
ಅವರು ಕಳಸಾ ಬಂಡೂರಿ ರೈತ ಹೋರಾಟ ಸಮಿತಿ ವತಿಯಿಂದ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ನವಲಗುಂದ ತಹಸೀಲ್ದಾರ ಕಚೇರಿಯ ಪ್ರ ದ ಸಹಾಯಕ ಐ ಆರ್ ಭಜಂತ್ರಿರವರ ಮುಖಾಂತರ ಸಿಎಂ ಸಿದ್ದರಾಮಯ್ಯ ಹಾಗೂ ಕೇಂದ್ರ ಮತ್ತು ರಾಜ್ಯ ಸಚಿವರಿಗೆ ಮನವಿ ಸಲ್ಲಿಸಿ ಮಾತನಾಡಿದರು.
ನಮ್ಮ ರೈತ ಹೋರಾಟ ಒಕ್ಕೂಟ ಸಮಿತಿ ಪಕ್ಷಾತೀತವಾಗಿದ್ದು, ಯಾವುದೇ ಪಕ್ಷಕ್ಕೆ ಬೆಂಬಲಿಸಿರುವುದಿಲ್ಲ, ಯಾಕೆಂದರೆ ಮಹದಾಯಿ ಕಳಸಾ ಬಂಡೂರಿ ಹೋರಾಟ ಸಮಿತಿ ಪಕ್ಷಾತೀತ ಸಮಿತಿಯಾಗಿದೆ ಮಹದಾಯಿ ರೈತ ಹೋರಾಟಗಾರರು ಒಂದು ಪಕ್ಷಕ್ಕೆ ಸೀಮಿತವಾಗಿದ್ದಾರೆ ಎನ್ನುವ ಕೆಲ ಆಪಾದನೆಗಳು ಸುಳ್ಳು ಎಂದರು
ಈ ವೇಳೆಯಲ್ಲಿ ಸುಭಾಸಗೌಡ ಪಾಟೀಲ, ಮಲ್ಲೇಶ್ ಉಪ್ಪಾರ, ಬಸನಗೌಡ ಹುಣಸಿಕಟ್ಟಿ, ನಿಂಗಪ್ಪ ತೋಟದ, ಶಿವಪ್ಪ ಸಂಗಳದ, ಸಿದ್ದಲಿಂಗಪ್ಪ ಹಳ್ಳದ, ಬಸಪ್ಪ ಮುಪ್ಪಯ್ಯನವರ, ಗಂಗಪ್ಪ ಸಂಗಟಿ, ರವಿ ತೋಟದ, ಗೋವಿಂದರೆಡ್ಡಿ ಮೊರಬದ, ಮುರಗೆಪ್ಪ ಪಲ್ಲೇದ, ಚಾ ಹುಸೇನ್, ಬಾಂಬೆ ಮೇಸ್ತ್ರಿ, ಸಂಗಪ್ಪ ನೀಡವನಿ, ಮಲ್ಲಪ್ಪ ಬಸಗೊಣ್ಣೆನವರ ಇತರರು ಉಪಸ್ಥಿತರಿದ್ದರು.