ನಗದು ಹಾಗೂ ಚಿನ್ನಾಭರಣ ದೋಚಿದ್ದ ಮೂವರು ಖದೀಮರ ಬಂಧನ
ಸಂಜೆವಾಣಿ ನ್ಯೂಸ್
ಮೈಸೂರು.ಮೇ.03:- ಯುಕನನ್ನು ಅಪಹರಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ನಗದು ಹಾಗೂ ಚಿನ್ನಾಭರಣ ದೋಚಿದ್ದ ಮೂವರು ಖದೀಮರನ್ನ ಬಂಧಿಸುವಲ್ಲಿ ವಿವಿ ಪುರಂ ಠಾಣೆ ಪೆÇಲೀಸರು ಯಶಸ್ವಿಯಾಗಿದ್ದಾರೆ.
ಮೈಸೂರು ತಾಲೂಕಿನ ಕಾಮನಕೆರೆ ಹುಂಡಿಯ ರಾಹುಲ್(20), ಬೆಳವಾಡಿಯ ಅಖಿಲೇಶ್(19) ಮತ್ತು ಹೂಟಗಳ್ಳಿಯ ನಂದೀಶ್(19) ಬಂಧಿತರು. ನ್ಯಾಯಾಂಗ
ಈ ಮೂವರು ನಗರದ ರೇಲ್ವೆ ನಿಲ್ದಾಣದ ಬಳಿ ಕಾರಿನಲ್ಲಿ ತೆರಳುತ್ತಿದ್ದ ಯುವಕ ಚಿರಾಗ್ ಜೈನ್ ಎಂಬಾತನನ್ನ ಅಡ್ಡಗಟ್ಟಿ ಕಾರಿನ ಸಮೇತ ಅಪಹರಿಸಿ ಯಶಸ್ವಿನಿ ಕಲ್ಯಾಣ ಮಂಟಪದ ಬಳಿಗೆ ಕರೆದೊಯ್ದು. ನಗದು 2 ಸಾವಿರ ನಗದು 39 ಗ್ರಾಂ ತೂಕದ ಎರಡು ಚಿನ್ನದ ಸರ ದೋಚಿ ಇಡೀ ರಾತ್ರಿ ಬಂಧನದಲ್ಲಿರಿಸಿಕೊಂಡು ನಂತರ ಬಿಡುಗಡೆ ಮಾಡಿದ್ದಾರೆ.
ಸಿದ್ದಾರ್ಥನಗರದ ನಿವಾಸಿ ಚಿರಾಗ್ ಜೈನ್(23) ಶನಿವಾರ ತಡ ರಾತ್ರಿ ರಾಜಸ್ತಾನದಿಂದ ಆಜ್ಮೀರ್ ಎಕ್ಸ್‍ಪ್ರೈಸ್ ರೈಲಿನಲ್ಲಿ ಬಂದಿದ್ದ ತಂದೆ-ತಾಯಿಯನ್ನು ಕರೆದುಕೊಂಡು ಹೋಗಲು ರೈಲ್ವೆ ನಿಲ್ದಾಣದ ಹಿಂಭಾಗದ ಗೇಟ್ ಕಡೆ ಹೋಗುತ್ತಿದ್ದಾಗ ಸ್ಕೂಟರ್‍ನಲ್ಲಿ ನಿಂತಿದ್ದ ಈ ಮೂವರು ಅಡ್ಡಗಟ್ಟಿ ಕಾರನ್ನು ನಿಲ್ಲಿಸಿ ಗಲಾಟೆ ಮಾಡಿ ಕಾರಿನಿಂದ ಚಿರಾಗ್ ಜೈನ್ ನನ್ನು ಇಳಿಸಿದ್ದಾರೆ.
ಬಳಿಕ ಮೂವರಲ್ಲಿ ಒಬ್ಬಾತ ಚಿರಾಗ್ ಜೈನ್‍ನನ್ನು ಹೆದರಿಸಿ ಕಾರಿನಲ್ಲಿ ಕುಳಿತುಕೊಂಡು ಹುಣಸೂರು ರಸ್ತೆಯ ಮೂಲಕ ಹೂಟಗಳ್ಳಿ ಕಡೆ ಬಂದಿದ್ದಾರೆ.ಜೊತೆಗಿದ್ದವರು ಸ್ಕೂಟರ್‍ನಲ್ಲಿ ಹಿಂಬಾಲಿಸಿದ್ದಾರೆ.
ಹೂಟಗಳ್ಳಿ ಬಳಿ ಕಾರನ್ನು ನಿಲ್ಲಿಸಿ 39 ಗ್ರಾಂ ತೂಕದ 2 ಚಿನ್ನದ ಸರ, ಮೊಬೈಲ್ ಹಾಗೂ 2 ಸಾವಿರ ರೂ. ನಗದನ್ನು ಕಿತ್ತುಕೊಂಡಿದ್ದಾರೆ. ಬೆಳಗಿನ ಜಾವ 5 ಗಂಟೆಯವರೆಗೆ ಅಲ್ಲೇ ಇರಿಸಿಕೊಂಡು ಬಳಿಕ ಕಾರಿನ ಕೀ ಕೊಟ್ಟು ಕಳುಹಿಸಿದ್ದಾರೆ.
ಈ ಸಂಬಂಧ ಚಿರಾಗ್ ಜೈನ್ ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಪೆÇಲೀಸರು, ಮೂವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ ಸಂಬಂಧ ವಿವಿ ಪುರಂ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.