ಬೆಣ್ಣೆದೋಸೆ ಸವಿದ ಒಡೆಯರ್
ಸಂಜೆವಾಣಿ ವಾರ್ತೆ
ದಾವಣಗೆರೆ.ಮೇ.೩: ದಾವಣಗೆರೆ ಜನತೆ ಬೆಣ್ಣೆ ಮನಸ್ಸಿನಂತವರು ಎಂದು ಮೈಸೂರಿನ ಮಹಾರಾಜ ಯದುವೀರ ಶ್ರೀಕಂಠ ದತ್ತ ಒಡೆಯರ್ ವಿಶ್ವಾಸ ವ್ಯಕ್ತಪಡಿಸಿದರು.
ದಾವಣಗೆರೆ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಪರ ಚುನಾವಣಾ ಪ್ರಚಾರಕ್ಕೆ ದಾವಣಗೆರೆಗೆ ಆಗಮಿಸಿರುವ ಯದುವೀರ್ ಒಡೆಯರು ಬೆಳಿಗ್ಗೆಯೇ ನಗರದ ಶಕ್ತಿ ದೇವತೆ ದುರ್ಗಾಂಭಿಕ ದೇವಿಯ ಆಶೀರ್ವಾದ ಪಡೆದು ನಂತರ ದಾವಣಗೆರೆ ಕೊಟ್ಟುರೇಶ್ವರ ಬೆಣ್ಣೆ ದೋಸೆ ಸವಿದ ಯದುವೀರ ಒಡೆಯರ್ ಅವರು ದಾವಣಗೆರೆ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಪರ ಮತಯಾಚನೆ ಮಾಡಿದರು.ದಾವಣಗೆರೆಯ ಭಗತ್ ಸಿಂಗ್ ನಗರದ ಶ್ರೀ ಚೌಡೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಮತ ಯಾಚನೆ ಮಾಡಿ, ಜನಪರ ಕಾರ್ಯಗಳು, ದೇಶದ ಸುಭದ್ರತೆಗೆ ಮೋದಿ ನೇತೃತ್ವದ ಪಕ್ಷಕ್ಕೆ ಮತ ನೀಡಿ. ರಾಜ್ಯದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ನೇತೃತ್ವದ ಅಭ್ಯರ್ಥಿಗಳನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು.ಚುನಾವಣೆ ಮುಗಿದ ೧೪ ಜಿಲ್ಲೆಗಳಲ್ಲೂ ಬಿಜೆಪಿ ಗೆಲ್ಲುವ ವಾತಾವರಣ ಇದೆ. ಇದೀಗ ಮೇ೭ರಂದು ನಡೆಯಲಿರುವ ಚುನಾವಣೆಯಲ್ಲಿ ಉಳಿದ ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳು ಗೆಲ್ಲಲಿದ್ದಾರೆ. ದಾವಣಗೆರೆ ಜಿಲ್ಲೆಯಲ್ಲೂ ಬಿಜೆಪಿ ಗೆಲ್ಲೂವ ವಾತಾವರಣ ಇದೆ. ನಾನು ಒಬ್ಬ ಬಿಜೆಪಿ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ಹೀಗಾಗಿ ಗಾಯತ್ರಿ ಸಿದ್ದೇಶ್ವರ್ ಪರ ಮತಯಾಚನೆ ಮಾಡಲು ಬಂದಿರುವುದಾಗಿ ಹೇಳಿದರು.