ರಾಮಾನುಜಾ ಚಾರ್ಯರ 1007ನೇ ತಿರುನಕ್ಷತ್ರ ಮಹೋತ್ಸವ
ಸಂಜೆವಾಣಿ ನ್ಯೂಸ್
ಮೇಲುಕೋಟೆ.ಮೇ.03:- ರಾಮಾನುಜಾಚಾರ್ಯರ 1007ನೇ ತಿರುನಕ್ಷತ್ರ ಮಹೋತ್ಸವ (ಜಯಂತ್ಯುತ್ಸವ ) ಆಚಾರ್ಯರ ಕರ್ಮಭೂಮಿ ಮೇಲುಕೋಟೆಯ ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ಮೇ 12ರಂದು ವೈಭವದಿಂದ ನೆರವೇರಲಿದ್ದು, ತತ್ಸಂಬಂಧದ ಧಾರ್ಮಿಕ ಕಾರ್ಯಕ್ರಮಗಳು ಶುಕ್ರವಾರದಿಂದ ಆರಂಭವಾಗಿವೆ.
ಆರಂಭದ ದಿನದಂದು ರಾಮಾನುಜಾಚಾರ್ಯರಿಗೆ ಶುಕ್ರವಾರ ಬೆಳಿಗ್ಗೆ 8 ಗಂಟೆಗೆ ಪುಷ್ಪಾಲಂಕೃತ ಸಮರಭೂಪಾಲವಾಹನ ನಂತರ ಅಭಿಷೇಕ ವೈಭವದಿಂದ ನೆರವೇರಿತು ಹತ್ತುದಿನಗಳ ಕಾಲ ನಡೆಯುವ ತಿರುನಕ್ಷತ್ರಮಹೋತ್ಸವದ ಕಾರ್ಯಕ್ರಮದಲ್ಲಿ ಆಚಾರ್ಯರಾಮಾನುಜರಿಗೆ ವಿವಿಧ ವಾಹನೋತ್ಸವಗಳು, ಅಭಿಷೇಕ, ಪಲ್ಲಕ್ಕಿಉತ್ಸವಗಳು, ವಿಶೇಷಅಲಂಕಾರಗಳು, ನೈವೇಧ್ಯಸಮರ್ಪಣೆ, ನೇಮಿಸೇವೆಗಳು, ಮುಡಿಉತ್ಸವ, ಸ್ಥಾನೀಕರ ಬಿಕ್ಷಾಕೈಂಕರ್ಯ,ರಥೋತ್ಸವ ನೆರವೇರಲಿದೆ.
ರಾಮಾನುಜಾಚಾರ್ಯರು ಮೇಲುಕೋಟೆಯಲ್ಲಿ 12 ವರ್ಷಗಳ ಕಾಲ ವಾಸ್ತವ್ಯಮಾಡಿ ಕ್ಷೇತ್ರವನ್ನು ಜೀರ್ಣೋದ್ಧಾರ ಮಾಡಿ, ಚೆಲುವನಾರಾಯಣಸ್ವಾಮಿಗೆ ಪ್ರತಿದಿನ ಆರಾಧನೆ ಮಾಡಿದ್ದರು. ಹೀಗಾಗಿ ಕರ್ನಾಟಕದಲ್ಲಿನ ರಾಮಾನುಜರ ಕರ್ಮಭೂಮಿಯಾದ ಮೇಲುಕೋಟೆಯಲ್ಲಿ ನಡೆಯುವ ಆಚಾರ್ಯರ ತಿರುನಕ್ಷತ್ರಮಹೋತ್ಸವಕ್ಕೆ ವಿಶೇಷ ಮಹತ್ವವಿದ್ದು ಸಾವಿರಾರು ಸಂಖ್ಯೆಯ ಶ್ರೀವೈಷ್ಣವರು ಪಾಲ್ಗೊಳ್ಳಲಿದ್ದಾರೆ.
ತಿರುನಕ್ಷತ್ರ ಮಹೋತ್ಸವದ ಅಂಗವಾಗಿ ಮೇ3ರಿಂದ 12ರವರೆಗೆ ಪ್ರತಿದಿನ ಬೆಳಿಗ್ಗೆ 8ಕ್ಕೆ ವಿವಿಧ ವಾಹನೋತ್ಸವ ನೆರವೇರಲಿದೆ. ರಾಮಾನುಜರಿಗೆ ಕ್ರಮವಾಗಿ ಮಂಟಪವಾಹನ, ಹಂಸವಾಹನ, ಅಶ್ವವಾಹನ, ಗಜವಾಹನ ಚಂದ್ರಮಂಡಲವಾಹನ, ಸೂರ್ಯಮಂಡಲವಾಹನ, ನೆರವೇರಲಿದೆ ಮೇ 7ರಂದು ರಾತ್ರಿ 7ಕ್ಕೆ ಬಂಗಾರದ ಪುಷ್ಪಪಲ್ಲಕ್ಕಿ ಉತ್ಸವ 8ರಂದು ರಾತ್ರಿ 7-30ಕ್ಕೆ ಗೋವಿಂದರಾಜಮುಡಿ ಕಿರೀಟಧಾರಣಮಹೋತ್ಸವ ನಡೆಯಲಿದೆ ಮೇ11 ರಂದು ಬೆಳಿಗ್ಗೆ9 ಗಂಟೆಗೆ ರಥಾರೋಹಣ, ಪೂಜಾಕೈಂಕರ್ಯ ಮುಕ್ತಾಯವಾದ ನಂತರ 10ಗಂಟೆಗೆ ಮಹಾರಥೋತ್ಸವ ಚತುರ್ವೀದಿಗಳಲ್ಲಿ ನೆರವೇರಲಿದೆ.
ಪ್ರಮುಖ ದಿನವಾದ ಮೇ 12ರ ರಾಮಾನುಜರ ಜಯಂತ್ಯುತ್ಸವದಂದು ಬೆಳಿಗ್ಗೆ 7ಗಂಟೆಗೆ ಮಂಟಪವಾಹನೋತ್ಸವ 8ಗಂಟೆಗೆ ಕಲ್ಯಾಣಿಯಿಂದ ಅಭಿಷೇಕ ತೀರ್ಥಮೆರವಣಿಗೆ 10ಗಂಟೆಗೆ ದ್ವಾದಶಾರಾಧನೆಯೊಂದಿಗೆ ಅಭಿಷೇಕ ಮಹಾಶಾತ್ತುಮೊರೈ ಸಂಜೆ ರಾಮಾನುಜರಿಗೆ ಶ್ರೀಗಂದದ ಅಲಂಕಾರದಲ್ಲಿ ಬೆಳ್ಳಿಯಪ್ಲಕ್ಕಿಯಲ್ಲಿ ಉತ್ಸವ ರಾತ್ರಿ 10 ಚೆಲುವನಾರಾಯಣಸ್ವಾಮಿಗೆ ದಶಾವತಾರ ಉತ್ಸವ ನಡೆಯಲಿದೆ.