ಕಾರ್ಮಿಕರ ಏಳಿಗೆಗಾಗಿ ನಾವೆಲ್ಲರೂ ಅರಿವು ಮೂಡಿಸಬೇಕು:ಹಿರಿಯ ಸಿವಿಲ್ ನ್ಯಾಯಾಧೀಶ ಶ್ರೀನಿವಾಸ ನವಲೆ
ಕಲಬುರಗಿ:ಮೇ.2: ದುಡಿಯುವ ವರ್ಗದವರ ಮೇಲಿನ ದಬ್ಬಾಳಿಕೆ ತಡೆಗಟ್ಟಿ, ಅವರಿಗೆ ಅವರ ಶಕ್ತಿಯ ಅರಿವು ಮೂಡಿಸಿ, ಅವರ ಏಳಿಗೆಗೆ ಏನೆಲ್ಲ ಮಾಡಬೇಕು ಎಂಬುವುದರ ಬಗ್ಗೆ ಅರಿವು ಮೂಡಿಸಲು ಕಾರ್ಮಿಕ ದಿನಾಚರಣೆ ಆಚರಿಸಲಾಗುತ್ತಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿಗಳಾದ ಶ್ರೀ ಶ್ರೀನವಾಸ ನವಲೆ ಅವರು ತಿಳಿಸಿದರು.
ಗುರವಾರದಂದು ನಂದೂರ ಕೈಗಾರಿಕಾ ವಸಾಹತು ನಲ್ಲಿರುವ INBREW Beberages PVT LTD ನಲ್ಲಿ ಕಾರ್ಮಿಕರ ದಿನ ಆಚರಣೆ ಅಂಗವಾಗಿ ಸಸಿಗೆ ನೀರೆಯುವುದರ ಮೂಲಕ ಉದ್ಫಾಟಿಸಿದರು.
ಒಂದು ದೇಶದ ಪ್ರಗತಿಯಲ್ಲಿ ಕಾರ್ಮಿಕನ ಪಾಲು ಬಹು ದೊಡ್ಡದು. ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ದಿಗೆ ಸೇವೆ ಸಲ್ಲಿಸುವ ಕಾರ್ಮಿಕರ ಹಕ್ಕುಗಳನ್ನು ಉತ್ತೇಜಿಸುವ ಮತ್ತು ರಕ್ಷಿಸುವ ಸಲುವಾಗಿ ಈ ದಿನವನ್ನು ಆಚರಿಸಲಾಗುತ್ತದೆ ಎಂದರು.
ಮೇ.7 ರಂದು ಜರಗುವ ಲೋಕಸಭೆ ಚುನಾವಣಾ ನಿಮಿತ್ತ ಕಾರ್ಮಿಕರಿಗೆ ಕಡ್ಡಾಯ ಮತದಾನ ಮಾಡುವಂತೆ ಪ್ರತಿಜ್ಞಾ ವಿಧಿಯನ್ನು ಭೋಧಿಸಿದರು.
ಜಿಲ್ಲಾ ಕಾರ್ಮಿಕ ಅಧಿಕಾರಿ ಶರಣಮ್ಮ ಹಳ್ಳಮನಿ ಮಾತನಾಡಿ, ಕಾರ್ಮಿಕ ದಿನವು ಕಾರ್ಮಿಕರಿಗೆ ದಿನಕ್ಕೆ ಕೇವಲ 8 ಗಂಟೆಗಳ ಕಾಲ ಕೆಲಸ ಮಾಡುವ ಹಕ್ಕನ್ನು ಒದಗಿಸುತ್ತದೆ. ಇದು ಒಂದೇ ದಿನದಲ್ಲಿ ನಿರ್ವಹಿಸುವ ಸಾಕಷ್ಟು ಚಟುವಟಿಕೆಗಳಿಂದ ಒತ್ತಡ ಮತ್ತು ಒತ್ತಡದಿಂದ ಕಾರ್ಮಿಕರಿಗೆ ಪರಿಹಾರ ನೀಡುತ್ತದೆ ಎಂದರು.ಕಾರ್ಮಿಕರಿಗೆ ದೂರಕುವ ಸೌಲಭ್ಯ ಮತ್ತು ಕಾನೂನುಗಳ ಬಗ್ಗೆ ಅರಿವು ಮೂಡಿಸಿದರು.
ಕಾರ್ಯಕ್ರಮದಲ್ಲಿ INBREW Beberages PVT LTD, ಅಜಯ ಹೆಚ್.ಆರ್ ಜಿಲ್ಲಾ ಬಾಲಕಾರ್ಮಿಕ ಯೋಜನಾ ನಿರ್ದೇಶಕ ಶ್ರೀ ಸಂತೋಷ ಕುಲ್ಕರ್ಣಿ, ಕಾರ್ಮಿಕರು ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು