ಚಿತ್ರಕಲಾವಿದೆ ರಜನಿ ತಳವಾರಗೆ ನೇಪಾಳದಲ್ಲಿ ಪ್ರಶಸ್ತಿ : ಗೌರವ
ಕಲಬುರಗಿ:ಮೇ.2: ಇತ್ತಿಚಿಗೆ ನೇಪಾಳದ ಕಠ್ಮಂಡುವಿನ ಸೋಂಜಾ ಆರ್ಟ್ ಗ್ಯಾಲರಿಯಲ್ಲಿ ಜರುಗಿದ ಅಂತಾರಾಷ್ಟ್ರೀಯ ಚಿತ್ರಕಲಾ ಪ್ರದರ್ಶನದಲ್ಲಿ ಭಾಗವಹಿಸಿದ್ದ ಆಳಂದ ತಾಲೂಕಿನ ಧುತ್ತರಗಾಂ ಗ್ರಾಮದ ಯುವ ಕಲಾವಿದೆ ರಜನಿ ತಳವಾರ ಅವರ ಚಿತ್ರಕಲೆಗಾಗಿ ಅತ್ಯತ್ತಮ ಚಿತ್ರಕಲೆ ಪ್ರಶಸ್ತಿ ದೊರೆತಿರುವ ಪ್ರಯುಕ್ತ ನಗರದ ‘ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಗುರುವಾರ ಸತ್ಕರಿಸಿ, ಅಭಿನಂದಿಸಲಾಯಿತು.
ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ.ಪಾಟೀಲ, ನ್ಯಾಯವಾದಿ ಡಾ.ಸುನೀಲಕುಮಾರ ಎಚ್.ವಂಟಿ, ಗುವಿವಿ ಫೈನ್ ಆಟ್ರ್ಸ್ ವಿಭಾಗದ ಅತಿಥಿ ಉಪನ್ಯಾಸಕ ಡಾ.ರೆಹಮಾನ ಪಟೇಲ್, ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್, ಹಾಸ್ಯ ಕಲಾವಿದ ರಾಜು ಹೆಬ್ಬಾಳ, ಕಂಪ್ಯೂಟರ ಶಿಕ್ಷಕಿ ನಿಲೊಫರ್ ಶೇಖ್ ಸೇರಿದಂರೆ ಇನ್ನಿತರರಿದ್ದರು.