ಖಾದ್ರಿ ಚೌಕ್‍ನಲ್ಲಿ ಮತದಾನ ಜಾಗೃತಿ ಅಭಿಯಾನ
ಕಲಬುರಗಿ:ಮೇ.2: ನಗರದ ಆಳಂದ ರಸ್ತೆಯ ಖಾದ್ರಿ ಚೌಕ್‍ನಲ್ಲಿರ ‘ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರ’ದ ಸಹಯೋಗದೊಂದಿಗೆ ‘ಡಾ.ಬಿ.ಆರ್.ಅಂಬೇಡ್ಕರ್ ರೀಸರ್ಚ್ ಇನ್ಸ್ಟಿಟ್ಯೂಟ್’, ‘ಬಸವೇಶ್ವರ ಸಮಾಜ ಸೇವಾ ಬಳಗ’ ಹಾಗೂ ‘ಸುಜಯ್ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆ’ ಇವುಗಳ ವತಿಯಿಂದ ಗುರುವಾರ ‘ಮತದಾನ ಜಾಗೃತಿ ಅಭಿಯಾನ’ ಜರುಗಿತು. ಡಾ.ಸುನೀಲಕುಮಾರ ಎಚ್.ವಂಟಿ, ಎಚ್.ಬಿ.ಪಾಟೀಲ, ಡಾ.ರೆಹಮಾನ ಪಟೇಲ್, ಅಸ್ಲಾಂ ಶೇಖ್, ರಾಜು ಹೆಬ್ಬಾಳ, ನಿಲೊಫರ್ ಶೇಖ್, ರಜನಿ ತಳವಾರ ಸೇರಿದಂತೆ ಇನ್ನಿತರರಿದ್ದರು.