ಬಳ್ಳಾರಿ‌ಕಲ್ಯಾಣಿ ಜ್ಯುವೆಲರ್ಸ್ ನಲ್ಲಿ ಬ್ಲಾಸ್ಟ್ ನಾಲ್ವರಿಗೆ ಗಾಯ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ: ನಗರದ ತೇರು ಬೀದಿಯಲ್ಲಿರುವ ಚಿನ್ನಾಭರಣಗಳ ಮಾರಾಟ ಮಳಿಗೆ ಕಲ್ಯಾಣಿ ಜ್ಯುವೆಲರ್ಸ್ ನಲ್ಲಿ ಇಂದು ಸಂಜೆ ಬ್ಲಾಸ್ಟ್ ಆಗಿ‌ ನಾಲ್ವರ ಗಾಯಗೊಂಡಿದ್ದಾರೆ.
ಶಾರ್ಟ್ ಸರ್ಕ್ಯೂಟ್ ನಿಂದ ಎಸಿ ಯಂತ್ರ ಬ್ಲಾಸ್ಟ್ ಆಗಿ ಚೆಲ್ಲಾ ಪಿಲ್ಲಿಯಾಗಿ ಕಿಟಕಿ ಗಾಜುಗಳು ಒಡೆದಿವೆ. ಜೊತೆಗೆ ಮೂರು ಜನರಿಗೆ ಗಂಭೀರವಾದ ಸುಟ್ಡ ಗಾಯವಾಗಿದ್ದು ಒಬ್ಬರ ಸ್ಥಿತಿ ಚಿ‌ಂತಾಜನಕವಾಗಿದೆ.
ಮಳಿಗೆಯ ಸಿಬ್ಬಂದಿಯೇ ಗಾಯಗೊಂಡವರನ್ನು ಹೊರಗಡೆ ಎತ್ತಿಕೊಂಡು ತಂದು
ನಗರದ ವಿಮ್ಸ್ ಆಸ್ಪತ್ರೆಗೆ ದಾಖಲಿಸಿದೆ.
ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಆಗಮಿಸಿ. ಕ್ರಮ ಕೈಗೊಂಡಿದ್ದಾರೆ.
ಘಟನೆಯನ್ನು ನೋಡಲು ನೂರಾರು ಜನತೆ ಸೇರಿದ್ದರು.