ಮತದಾನ ಜಾಗೃತಿಗಾಗಿ ಮೇ 3 ರಂದು ನಗರದಲ್ಲಿ ಬೃಹತ್ ಮಟ್ಟದ ಬೈಕ್ ಜಾಥಾ : ಸಿಇಓ ಗರಿಮಾ ಪನ್ವಾರ್
ಯಾದಗಿರಿ : ಮೇ 02 : ಮತದಾನದ ಜಾಗೃತಿಗಾಗಿ ನಗರದ ಪ್ರಮುಖ ಬೀದಿಗಳಲ್ಲಿ ಸ್ವೀಪ್ ಕಮಿಟಿಯಿಂದ ಮೇ 03 ಶುಕ್ರವಾರದಂದು ಬೈಕ್ ಜಾಥಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಈ ಕಾರ್ಯಕ್ರಮದಲ್ಲಿ ಎಲ್ಲಾ ಇಲಾಖೆಯ ಅಧಿಕಾರಿಗಳು ಭಾಗವಹಿಸುತ್ತಿದ್ದಾರೆ ಸಾರ್ವಜನಿಕರು ಕೂಡ ಭಾಗವಹಿಸಿ ಬೈಕ್ ಜಾಥಾ ಯಶಸ್ವಿಗೊಳಸಿಬೇಕು ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿ ಗರಿಮಾ ಪನ್ವಾರ ಅವರು ತಿಳಿಸಿದರು.
ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್, ನರೇಗಾ ಕೆಲಸದ ಕಾರ್ಡ್ (ಜಾಬ್ ಕಾರ್ಡ್), ಫೋಟೊ ಲಗತ್ತಿಸಿರುವ ಬ್ಯಾಂಕ್/ಪೋಸ್ಟ್ ಆಫೀಸ್ ಪಾಸ್‌ಬುಕ್, ಕಾರ್ಮಿಕ ಸಚಿವಾಲಯದಿಂದ ನೀಡಿರುವ ಆರೋಗ್ಯ ವಿಮೆಯ ಸ್ಮಾರ್ಟ್ ಕಾರ್ಡ್, ಚಾಲನಾ ಪರವಾನಗಿ (ಡ್ರೆöÊವಿಂಗ್ ಲೆಸೆನ್ಸ್), ಎನ್‌ಪಿಆರ್ ನಡಿ ನೀಡಲಾದ ಸ್ಮಾರ್ಟ್ ಕಾರ್ಡ್. ಪಾಸ್‌ಪೋರ್ಟ್, ಫೋಟೊ ಇರುವ ಪಿಂಚಣಿ ದಾಖಲೆ. ಪಾನ್ ಕಾರ್ಡ್, ಕೇಂದ್ರ ಅಥವಾ ರಾಜ್ಯ ಸರ್ಕಾರ, ಸಾರ್ವಜನಿಕ ವಲಯದ ಉದ್ದಿಮೆ, ಸಾರ್ವಜನಿಕ ಕಂಪನಿಗಳ ಗುರುತಿನ ಚೀಟಿ. ಶಾಸಕ, ಸಂಸದರಿಗೆ ನೀಡಲಾಗಿರುವ ಅಧಿಕೃತ ಗುರುತಿನ ಚೀಟಿ. ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಇಲಾಖೆಯಿಂದ ನೀಡಲಾಗುವ ವಿಶಿಷ್ಟ ವಿಕಲ ಚೇತನರ ಗುರುತಿನ ಚೀಟಿ. ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದ್ದರೆ ಈ ದಾಖಲೆಯನ್ನು ತೋರಿಸಿ ಮತ ಚಲಾಯಿಸಬಹುದು ಎಂದು ಸಿಇಓ ಅವರು ತಿಳಿಸಿದರು.