ಸಮರ್ಪಕ ಚುನಾವಣೆ ಪ್ರಕ್ರಿಯೆ ಪೂರ್ಣ ಗೊಳಿಸಲು ಇನಾಂದಾರ ಕರೆ
ಚಿಂಚೋಳಿ,ಮೇ.2- ಲೋಕಸಭೆ ಚುನಾವಣೆಯ ಪ್ರಕ್ರಿಯೆ ಪೂರ್ಣಗೊಳಿಸಿ ಮತಯಂತ್ರಗಳ ಸಿದ್ದತೆ ಕೈಗೊಳ್ಳುವಲ್ಲಿ ಪÀ್ರತಿಯೊಬ್ಬ ಸಿಬ್ಬಂದ್ದಿಗಳು ದಕ್ಷತೆಯಿಂದ ಹಾಗೂ ಜಾಗರೂಕತೆಯಿಂದ ಕೆಲಸ ಮಾಡಬೇಕು. ನನಗೆಲ್ಲಾ ಗೊತ್ತು ಎಂಬ ಭಾವನೆ ಬಿಟ್ಟು, ಮತದಾನ ಪ್ರಕ್ರಿಯೆಗಳ ಕುರಿತು ಚೆನ್ನಾಗಿ ಅರಿತುಕೊಂಡು ಮತಯಂತ್ರ ಕಾರ್ಯವಿಧಾನದ ತರಬೇತಿ ಪಡೆದುಕೊಳ್ಳುವಂತೆ ಬೀದರ ಲೋಕಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಸಂತೋಷ ಇನಾಂದಾರ ಹೇಳಿದರು.
ಚಿಂಚೋಳಿ ಪಟ್ಟದ ಚಂದಾಪೂರದ ಪಿಯು ಕಾಲೇಜಿನಲ್ಲಿ ನಡೆದ ಮತಗಟ್ಟೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ಈ ತರಬೇತಿ ಶಿಬಿರದಲ್ಲಿ ಜಿಲ್ಲೆಯ 9 ತಾಲೂಕುಗಳಿಂದ 1150 ಸಿಬ್ಬಂದ್ದಿಗಳು ಭಾಗವಹಿಸಿ ತರಬೇತಿ ಪಡೆದರು. ಮಾಸ್ಟರ್ ಟ್ರೇನರ್ ಮಲ್ಲಿಕಾರ್ಜುನ ಪಾಲಾಮೂರ್ ಚುನಾವಣಾ ವಿಧಾನ, ಇವಿಎಂ ಕುರಿತು ತರಬೇತಿ ನೀಡಿದರು. ತಹಸೀಲ್ದಾರ ವೆಂಕಟೇಶ ದುಗ್ಗನ, ಖದೀರ ಫಾಶಾ, ಸುಭಾಸ ನಿಡಗುಂದಿ ಇತರರಿದ್ದರು.