ಗಾರಂಪಳ್ಳಿ ನಂದಿಬಸವೇಶ್ವರ ಜಾತ್ರೆ ನಾಳೆಯಿಂದ
ಚಿಂಚೋಳಿ,ಮೇ.2: ತಾಲೂಕಿನ ಗಾರಂಪಳ್ಳಿ ಗ್ರಾಮದ ಭೋಗಾವತಿ (ಮುಲ್ಲಾಮಾರಿ)ನದಿ ದಂಡೆಯಲ್ಲಿ ವೀರಾಜಮಾನವಾಗಿರುವ ನಂದಿಬಸವೇಶ್ವರರ ಜಾತ್ರಾ ಮಹೋತ್ಸವ ಮೇ 3ರಿಂದ 11ರವರೆಗೆ ನಡೆಯಲಿದೆ ಎಂದು ಬಸವೇಶ್ವರ ದೇವಸ್ಥಾನ ಟ್ರಸ್ಟ್ ತಿಳಿಸಿದೆ.
ಮೇ 3ರಿಂದ ಪ್ರತಿನಿತ್ಯ ರಾತ್ರಿ 7ರಿಂದ 10ಗಂಟೆವರೆಗೆ ಖ್ಯಾತ ವಾಗ್ಮಿ ಶಿವರುದ್ರಯ್ಯ ಶಾಸ್ತ್ರಿ ತಂಡದಿಂದ ಪ್ರವಚನ. ಪ್ರವಚನ ಕಾರ್ಯಕ್ರಮದ ಸಾನ್ನಿಧ್ಯವನ್ನು ನಿಡಗುಂದಾದ ಕಂಚಾಳಕುಂಟಿ ನಂದೀಶ್ವರ ಮಠದ ಕರುಣೇಶ್ವರ ಶಿವಾಚಾರ್ಯರು ವಹಿಸಲಿದ್ದಾರೆ. ಮೇ 7ರಂದು ರಾತ್ರಿ 7ಕ್ಕೆ ದೇವಸ್ಥಾನದಿಂದ ಗ್ರಾಮದ ಮಠಕ್ಕೆ ಪಲ್ಲಕ್ಕಿ ಆಗಮನ, 8 ಮತ್ತು 9ರಂದು ಗ್ರಾಮದಲ್ಲಿ ನಿತ್ಯ ರಾತ್ರಿ 7ರಿಂದ 10ರವರೆಗೆ ಪಲ್ಲಕ್ಕಿ ಮೆರವಣಿಗೆ. 10ರಂದು ಘೂಳಿ ಮೆರವಣಿಗೆ. 11ರಂದು ಬೆಳಗ್ಗೆ 8ಕ್ಕೆ ಉಚ್ಚಾಯಿ ಮೆರವಣಿಗೆ. ಮಧ್ಯಾಹ್ನ 12ಕ್ಕೆ ದೇವಸ್ಥಾನ ಆವರಣದಲ್ಲಿ ಅಗ್ನಿ ಪ್ರವೇಶ. (ಅಗ್ಗಿ ತುಳಿಯುವುದು). ಸಂಜೆ 6ಕ್ಕೆ ರಥೋತ್ಸವ. ನಂತರ ಧಾರ್ಮಿಕ ಸಭೆ. ಧಾರ್ಮಿಕ ಸಭೆಯ ಸಾನ್ನಿಧ್ಯವನ್ನು ಬಳ್ಳಾರಿಯ ಕಮ್ಮರಚೇಡು ಮಠದ ಕಲ್ಯಾಣ ಮಹಾಸ್ವಾಮೀಜಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದು ಟ್ರಸ್ಟ್ ಮನವಿ ಮಾಡಿದೆ.