30 ಕೆಜಿ ಅಫೀಮು,10ಕೆಜಿ ಗಾಂಜಾ ವಶ
ಇಂಡಿ,ಮೇ 2: ಇಂಡಿ ವಲಯ ವ್ಯಾಪ್ತಿಯ ಚಡಚಣ ತಾಲೂಕಿನ ಶಿರಾಡೋಣ ತನಿಖಾ ಠಾಣೆಯ ಎದುರು ಗೂಡ್ಸ್ ಕ್ಯಾರಿಯರ್ ನಲ್ಲಿ ಸಾಗಿಸುತ್ತಿದ್ದ 30 ಕೆಜಿ ಅಫೀಮು ಪೌಡರ್ ಮತ್ತು 10 ಕೆಜಿ ಗಾಂಜಾವನ್ನು ಅಬಕಾರಿ ದಾಳಿಯಲ್ಲಿ ವಶ ಪಡಿಸಿಕೊಳ್ಳಲಾಗಿದೆ.
ಸಾಗಾಣಿಕೆ ಬಳಸಿದ ಗೂಡ್ಸ್ ಮತ್ತು ವಶಪಡಿಸಿಕೊಂಡ ಅಫೀಮು ಪೌಡರ್ ಗಾಂಜಾದ ಅಂದಾಜು ಮೌಲ್ಯ 33.80 ಲಕ್ಷ ರೂ ಎಂದು ತಿಳಿದು ಬಂದಿದೆ. ಈ ಸಂಬಂಧ ದೆಹಲಿ ಮೂಲದ ಬಶೀರ್ ಅಹ್ಮದ್ ರಂಜಾನ್ ಭಟ್ ( 32) ಎಂಬಾತನನ್ನು ಬಂಧಿಸಲಾಗಿದೆ.ಅಬಕಾರಿ ಉಪ ಆಯುಕ್ತ ಶಿವಲಿಂಗಪ್ಪ ಬನಹಟ್ಟಿ ಮಾಗದರ್ಶನದಲ್ಲಿ ನಡೆದ ದಾಳಿಯಲ್ಲಿ ಅಬಕಾರಿ ಉಪ ಅಧೀಕ್ಷಕ ಎಲ್.ಎಸ್ ಸಲಗರೆ,ಅಬಕಾರಿ ನಿರೀಕ್ಷಕ ಪ್ರವೀಣ ರಂಗಸುಬೆ,ಸಿಬ್ಬಂದಿಗಳಾದ ಮೃತ್ಯಂಜಯ ಜಕಾತಿ,ಅಶೋಕ ಗೋಣಸಗಿ,ಶಿವಾನಂದ ಕೊಡತೆ,ಸಂಜೀವಕುಮಾರ ಹೂವಿನವರ,ಭೀಮರಾಯ ತಳವಾರ,ಅಜೀಮ್ ಮನಗೂಳಿ ಭಾಗವಹಿಸಿದರು.