ಅಧ್ಯಯನಕ್ಕಾಗಿ ಯೋಗ ಅಗತ್ಯ:ರಾಜಶೇಖರ ಜಂಬಗಿ
ವಿಜಯಪುರ,ಮೇ.2:ಅಧ್ಯಯನಕ್ಕಾಗಿ ಯೋಗ ಅತ್ಯವಶ್ಯವಾಗಿದೆ ಎಂದು ನವಭಾರತ ಫೌಂಡೇಶನ್ ಅಧ್ಯಕ್ಷÀ ರಾಜಶೇಖರ ಜಂಬಗಿ ಹೇಳಿದರು.
ಇಲ್ಲಿನ ನವಭಾರತ ಫೌಂಡೇಶನ್ ಮತ್ತು ವೀರೇಶ ಫಿಲ್ಮ್ ಅಕಾಡೆಮಿ ಇವರ ಸಂಯುಕ್ತ ಆಶ್ರಯದಲ್ಲಿ ಯಕ್ಕುಂಡಿ ಗ್ರಾಮದ ಶ್ರೀ ಜಗಜ್ಯೋತಿ ಬಸವೇಶ್ವರ ಆಂಗ್ಲ ಮಾಧ್ಯಮ ಪಬ್ಲಿಕ್ ಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ‘ಅಧ್ಯಯನಕ್ಕಾಗಿ ಯೋಗ’ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಮಾತನಾಡಿದರು.
ವೀರೇಶಗೌಡ ಬಿರಾದಾರ ಮತ್ತು ಅಂತರಾಷ್ಟ್ರೀಯ ಯೋಗಪಟು ಎಮ್.ಪಿ ದೊಡಮನಿ ಅತಿಥಿಗಳಾಗಿ ಭಾಗವಹಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಜಗಜ್ಯೋತಿ ಬಸವೇಶ್ವರ ಆಂಗ್ಲ ಮಾಧ್ಯಮ ಪಬ್ಲಿಕ್ ಶಾಲೆಯ ಮಲ್ಲೇಶ ನ್ಯಾಮಗೌಡ ವಹಿಸಿದ್ದರು.
ಹನಮಂತ ಯಕ್ಕುಂಡಿ, ಸಿದರಾಯ ನ್ಯಾಮಗೌಡ, ಮಲಕಾರಿ ಒಡೆಯರ್, ಗಾಯತ್ರಿ ಒಡೆಯರ್ ಉಪಸ್ಥಿತರಿದ್ದರು.
ಮಲ್ಲಿಕಾರ್ಜುನ ದಳವಾಯಿ ಸ್ವಾಗತಿಸಿ, ನಿರೂಪಿಸಿದರು. ಶ್ರೀಕಾಂತ ಮಂಗಾನವರ ವಂದಿಸಿದರು.
ಈ ಸಂದರ್ಭದಲ್ಲಿ ನವಭಾರತ ಫೌಂಡೇಷನ್ ವತಿಯಿಂದ ಮಲ್ಲೇಶ ನ್ಯಾಮಗೌಡ ಇವರಿಗೆ ‘ಯೋಗ ಪೋಷಣಾ ಮಿತ್ರ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.