ದೇಶ ಕಟ್ಟುವ ಶ್ರಮಿಕರ ದಿನಾಚರಣೆಃ ಹಾವಶೇಟ್ಟಿ ಪಾಟೀಲ್
ಬೀದರಃ ಮೇ.2:ಕರುನಾಡು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಹಾಗೂ ಗಿಲಾವ ಕಾರ್ಮಿಕರ ಸಂಘ ಬೀದರ ನಗರದ ಅಂಬೇಡ್ಕರ, ಭಗತ ಸಿಂಗ, ಬಸವೇಶ್ವರ ಮಹಾತ್ಮ ಬೋಮಗೊಂಡೇಶ್ವರ ಪತ್ರಿಮೆಗೆ ಮಾಲಾರ್ಪಣೆ ಅರ್ಪಿಸಿ, ಸಂಘದ ಕಛೇರಿಯಲ್ಲಿ ವಿಶ್ವ ಕಾರ್ಮಿಕರ ದಿನಾಚರಣೆ ಆಚರಣೆ ಮಾಡಲಾಯಿತು.
ಇಂಜಿನಿಯರ ಹಾವಶೇಟ್ಟಿ ಪಾಟೀಲ್ ಉದ್ಘಾಟಿಸಿ, ದೇಶ ಕಟ್ಟುವ ಕಾರ್ಮಿಕರ ದಿನಾಚರಣೆ ಜೋತೆಗೆ ಕಾರ್ಮಿಕ ಕುಟುಂಬಗಳ ಜೀವನ ಮಟ್ಟವನ್ನು ಸುಧಾರಿಸುವ ಕೆಲಸವನ್ನು ಸರ್ಕಾರ ಮಾಡಬೇಕು. ನಿಜವಾದ ಕಾರ್ಮಿಕ ಫಲಾನುಭವಿಗಳಿಗೆ ಸರ್ಕಾರದ ಸೌಲಭ್ಯಗಳು ಮಂಜೂರು ಮಾಡಿ ನೀಡಬೇಕು. ನಕಲಿ ಕಾರ್ಮಿಕರ ಹಾವಳಿಯನ್ನು ತಡಗಟ್ಟಬೇಕು. ಕಾರ್ಮಿಕರಿಗೆ ಜೀವನದ ಹಕ್ಕು ದುಡಿಮೆಗೆ ಪ್ರತಿಫಲ, ಸಮಾನ ದುಡಿಮೆಗೆ ಸಮಾನವೇತನ ಕೊಡಬೇಕೆಂದು ಹೇಳಿರುವ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ, ಕಾಯಕವೇ ಕೈಲಾಸ ಎಂದು ಹೇಳಿರುವ ಕರ್ನಾಟಕ ಸಾಂಸ್ಕøತಿಕ ನಾಯಕ ಬಸವಣ್ಣ ರವರು ಕಾರ್ಮಿರ ನ್ಯಾಯದ ಧ್ವನಿಯಾಗಿದರು ನಿವೃತ್ತ ಕಾರ್ಮಿಕ ಅಧಿಕಾರಿ ದಯಾನಂದ ಪಾಂಚಾಳ ಕಾರ್ಮಿಕ ಮಕ್ಕಳಿಗೆ ಸಿಗುವ ವಿದ್ಯಾರ್ಥಿವೇತನ ಮದುವೆ ಧನ ಸಹಾಯ, ವೈದ್ಯಕೀಯ ಸೇವೆ ಹಿರಿಯು ಕಾರ್ಮಿಕರಿಗೆ ಪಿಂಚಣಿ ಮನೆ ಕಟ್ಟಲು ಸಹಾಯ, ಸಾಮಗ್ರಿ ಖರಿದಿಸಲು ಲೋನ್ ಮತ್ತು ದುಡಿಯುವ ಕಾರ್ಮಿಕರಿಗೆ ಅನ್ಯಾವಾಗಿದಲ್ಲಿ ನ್ಯಾಯಕ್ಕಾಗಿ ಕಾರ್ಮಿಕರ ಕಾಯಿದೆ ಕಾನೂನುಗಳ ಬಗ್ಗೆ ತಿಳಿಸಿಕೊಟ್ಟರು ಇಂಜಿನಿಯರ್ ರವಿಂದ್ರನಾಥ ಮೂಲಗೆ ವಿಶ್ವ ಕಾರ್ಮಿಕ ದಿನಚರಣೆಯ ಮಹತ್ವ ತಿಳಿಸಿದರು ಕಾರ್ಮಿರದು ಒಂದೆ ಜಾತಿ ಒಂದೆ ಧರ್ಮವಾಗಿದೆ. ಮುಖ್ಯ ಅತಿಥಿಗಳಾಗಿ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಶಿವಕುಮಾರ ನೀಲಿಕಟ್ಟಿ, ಸಂತೋಸ ಸುಂಕದ, ರವಿ ಅಮಲಾಪೂರ ಶರಣಗೌಡ ಉಪಸ್ಥಿಯಲ್ಲಿದ್ದರು ಏಷಿಯಾ ಇಂಟರನ್ಯಾಷ್ಟನಲ್ ಕಲ್ಚರಲ್ ಸಂಶೋಧನ ವಿಶ್ವ ವಿಶ್ವವಿದ್ಯಾಲಯ ತಮಿಳುನಾಡದಲ್ಲಿ 27 ರಂದು ಸಾಹಿತ್ಯ ಸೇವೆಗಾಗಿ ಗೌರವ ಡಾಕ್ಟರೇಟ್ ಪದವಿ ಪಡೆದ ಕಾರ್ಮಿಕರ ಮಗ ಸುಬ್ಬಣ್ಣ ಕರಕನಳ್ಳಿಯವರಿಗೆ ಕಾರ್ಮಿಕರ ಸಂಘ ಮತ್ತು ಬೀದರ ಜಿಲ್ಲಾ ಇಂಜಿನಿಯರ್ ಅಸೂಷೇಶನ್ ವತಿಯಿಂದ ಗೌರವ ಸನ್ಮಾನ ಮಾಡಲಾಯಿತು. ಹಿರಿಯ ಕಾರ್ಮಿಕರಾದ ಝರೇಮ್ಮಾ ಮೈಲೂರು ಗಣಪತಿ ಶರಣಪ್ಪ ಪೀಟರ ಶಂಕರೇಪ್ಪಾ ಅರ್ಜುನ ಖಾರಿಫ್ ಕಮಳಮ್ಮಾ ಗಾದಗಿ ಕಾಶಿನಾಥ ನಾಗಪ್ಪ ಕಿರಣಕುಮಾರ ಕಾಂಬಳೆ ಶಾಭೀರ ಚಿದ್ರಿ ಅಶೋಕ ಪೇಂಟರ್ ಅಜಮೋದ್ದಿನ ಈಶ್ವರ ಮೈಲೂರು ದಸರಥ ಕುಂಬಾರ ಯಲ್ಲಪ್ಪ ಶಾಪೂರ ಮುಂತಾದವರಿಗೆ ಸನ್ಮಾನಿಸಲಾಯಿತು. ಕಾರ್ಮಿಕ ಸಂಘದ ಪದಾಧಿಕಾರಿಗಳಾದ ತುಕರಾಮ ತುಳಿಸಿರಾಮ ಅನೀಲಕುಮಾರ ಗೌತಮ ಶಿವಕುಮಾರ ನರಸಿಂಗ ಅಮಲಾಪೂರ ಸಿದ್ದಾರ್ಥ ಚಿದ್ರಿ ಜೀತು ಬಸಂತಪೂರ ಪಾಂಡುರಂಗ ಮೈಲೂರು ಯೇಶಪ್ಪಾ ಅಸ್ಟೂರು ಪ್ರವೀಣ ಮುಂತಾದವರು ಉಪಸ್ಥಿತರಿದ್ದರು..