ಡೊಣೂರು ಚಾನುಕೋಟಿ ಮಠ ಆಯೋಜಿಸಿದ ಸಾಂಸ್ಕೃತಿಕೋತ್ಸವಕ್ಕೆ ಚಾಲನೆ.
ಸಂಜೆವಾಣಿ ವಾರ್ತೆ
ಕೊಟ್ಟೂರು, ಮೇ.02: ಡೊಣೂರು ಚಾನುಕೋಟಿ ಮಠದಿಂದ ಶ್ರೀಮರುಳ ಸಿದ್ದೇಶ್ವರ ರಥೋತ್ಸವ ನಿಮಿತ್ತ ಪಟ್ಟಣದ ತೇರು ಬಯಲು ಬಸವೇಶ್ವರ ದೇವಾಲಯ ಆವರಣದಲ್ಲಿ ಸಾಂಸ್ಕೃತಿಕೋತ್ಸವಕ್ಕೆ ಚಾಲನೆ ನೀಡಲಾಯಿತು.
ಕೊಟ್ಟೂರಿನ ಹಂಸ ಪ್ರಿಯ ನೃತ್ಯನಿಕೇತನ ಕಲಾ /ಶಿಕ್ಷಣ ಟ್ರಸ್ಟ್ ನ  ವಿಧ್ಯಾರ್ಥಿನಿಯರ ಭರತನಾಟ್ಯ ನೃತ್ಯ ನೋಡುಗರನ್ನು ಜನಮನ್ನಣೆ ಗಳಿಸಿತು.
ಅರ್ ಎಂ ಸಿದ್ದೇಗೌಡ ಸಂಗಮೇಶ್ವರ  ನೀರಿನಲ್ಲಿ ಕರಗದ ರಂಗೋಲಿಯನ್ನು  ಹಾಕಿ ಮಹಿಳೆಯರಿಗೆ ವಿಶೇಷ ಅನುಭವ ತಂದರು.
ಕುಮಾರಿ ಎಂ ನಂದೀತ ಜಾನಪದ ಗೀತೆ  ಹಾಡಿದರು. ಶಿಕ್ಷಕರಾದ ರವಿ ಪವಾಡ ರಹಸ್ಯ ಬಯಲು ಮೂಡ ನಂಬಿಕೆ ಮಾರುಹೋಗುವುದನ್ನು ತೋರಿಸಿದರು, ತೆಂಗಿನ ಕಾಯಿಯಿಂದ ಹೂ, ಬಂಗಾರದ ಸರ, ರೈತರು ತಮ್ಮ ಜಮೀನಿನಲ್ಲಿ ಬೋರ್ ವೇಲ್  ಪಾಯಿಂಟ್ ಮಾಡಿಸುವಾಗ ತೆಂಗಿನ ಕಾಯಿ ಬಳಸಿ ನೀರು ಇಲ್ಲಿರುವುದು ಎನ್ನುವ ಅವೈಜ್ಞಾನಿಕ, ನಮ್ಮ ಕಷ್ಟ ಪರಿಹಾರಕ್ಕೆ
ಜ್ಯೋತಿಷ್ಯ ಕೇಳುವ ವಾಡಿಕೆ, ಹುಣ್ಣಿಮೆ  ಬಂತು ಅಂದ್ರೆ ಕೆಲವರ ಮೈಯಲ್ಲಿ ದೈವ ಬಂದಿದೆ ಅಂತ ಮಾಟ ಮಂತ್ರದಿಂದ ಸರಿಪಡುಸುತ್ತೇನೆ ಎಂದು ಮೋಸ ಮಾಡುವವರಿದ್ದಾರೆ ಎಚ್ಚರದಿಂದ ಜಾಗೃತರಾಗಿ ಎಂದು ತಿಳಿಸಿದರು.
ಮುಂಚೆ ಡಾ.ಸಿದ್ದಲಿಂಗ ಶಿವಾಚಾರ್ಯ ಶ್ರೀಗಳು, ಕೆ ಟಿ ಸಿದ್ಧರಾಮೇಶ್ , ಚಿಗಟೇರಿ ಕೊಟ್ರೇಶಿ ಹಾಗೂ ಕಲಾವಿದರು ದೀಪ ಬೆಳಗಿಸಿ ಕಾರ್ಯಕ್ರಮ ಚಾಲನೆ ನೀಡಿದರು.
ಡಾ. ಸಿದ್ದಲಿಂಗ ಶಿವಾಚಾರ್ಯರು ಡೊಣೂರು ಚಾನುಕೋಟಿ ಮಠದ ಶ್ರೀಗಳು ಸಾನಿದ್ಯ ವಹಿಸಿ ಕಲಾವಿದರಿಗೆ ಪ್ರಶಸ್ತಿ  ಹಾಗೂ ನೆನಪಿನ ಕಾಣಿಕೆ ನೀಡಿದರು. ಎಂ ಎಂ ಜೆ ಕಾವ್ಯ ಸ್ವಾಗತಿಸಿದರು. ಕೆ ಟಿ ಸಿದ್ಧರಾಮೇಶ್ ನಿರೂಪಿಸಿದರು. ಕೊಟ್ರೇಶ್ ವಂದಿಸಿದರು.
One attachment • Scanned by Gmail