ಪ್ರಯಾಣಿಕೆಯ ಬಂಗಾರ ಮತ್ತು ಹಣ ಹಿಂದಿರುಗಿಸಿ, ಪ್ರಾಮಾಣಿಕತೆ ಮೆರೆದ ಸಾರಿಗೆ ಸಿಬ್ಬಂದಿ
ಭಾಲ್ಕಿ: ಮೇ.2:ತಾಲೂಕಿನ ಆತನೂರ ದಿಂದ ಭಾಲ್ಕಿಗೆ ಬರುವ ಬಸ್ಸಿನಲ್ಲಿ, ಪ್ರಯಾಣಿಕೆಯೊಬ್ಬರು ಬಸ್ಸಿನಲ್ಲಿ ಬಿಟ್ಟುಹೋಗಿದ್ದ 50 ಸಾವಿರ ರೂ. ಮತ್ತು 10 ಗ್ರಾಂ. ಬಂಗಾರವನ್ನು ಸಾರಿಗೆ ಸಂಸ್ಥೆಯ ಬಸ್ ಚಾಲಕ ಮಾಣಿಕ ಮತ್ತು ನಿರ್ವಾಹಕ ಮಂಜಲಿಸಾಬ್ ರವರು ಪ್ರಯಾಣಿಕೆಗೆ ಹಿಂದಿರುಗಿಸಿ ಪ್ರಮಾಣಿಕತೆ ಮೆರೆದಿದ್ದಾರೆ.
ಭಾಲ್ಕಿ ಬಸ್ ಡಿಪೋಗೆ ಸೇರಿದ ಬಸ್ ಬುಧವಾರ ಆತನೂರಿ ನಿಂದ ಭಾಲ್ಕಿಗೆ ಬಂದಿದೆ, ಭಾಲ್ಕಿಯ ಭೀಮನಗರ ನಿವಾಸಿ ಛಾಯಾ ಶಾಮರಾವಗೆ ಸೇರಿದ ಬ್ಯಾಗ್‍ನಲ್ಲಿ 50 ಸಾವಿರ ರೂ. ಹಣ ಮತ್ತು 10 ಗ್ರಾಮ ಬಂಗಾರ ಮತ್ತು ಪ್ರಯಾಣಿಕೆಯ ಆಧಾರ ಕಾರ್ಡ ಬಸ್‍ನಲ್ಲಿಯೇ ಬಿಟ್ಟುಹೋಗಿದ್ದಾರೆ. ನಿರ್ವಾಹಕ ಮಂಜಲಿ ಸಾಬ್ ಮತ್ತು ಚಾಲಕ ಮಾಣಿಕ ರವರು ತಕ್ಷಣ ಘಟಕದ ವ್ಯವಸ್ಥಾಪಕರಿಗೆ ತಿಳಿಸಿ, ವಸ್ತು ಬಿಟ್ಟುಹೋದ ಪ್ರಯಾಣಿಕರನ್ನು ಪತ್ತೆಹಚ್ಚಿ, ಹಣ ಮತ್ತು ಬಂಗಾರ ಹಿಂದಿರುಗಿಸಿ ಮಾನವೀಯತೆ ಮರೆದಿದ್ದಾರೆ. ಕಂಡಕ್ಟರ್ ಮಂಜಲಿಸಾಬ್ ರವರು ಈ ಹಿಂದೆಯೂ ಕೂಡ ಉದಗೀರ ನಿಂದ ಭಾಲ್ಕಿಗೆ ಬರುವ ಬಸ್‍ನಲ್ಲಿ ಸೇವೆ ಸಲ್ಲಿಸುತ್ತಿರುವಾಗ ಪ್ರಯಾಣಿಕರೊಬ್ಬರ 10 ಸಾವಿರ ರೂ. ಮತ್ತು 10 ಗ್ರಾಂ ಬೆಳ್ಳಿ ಹಿಂದಿರುಗಿಸಿ ಮಾನವೀಯತೆ ಮರೆದಿದ್ದರು.
ಸಾರಿಗೆ ಸಿಬ್ಬಂದಿಗಳಾದ ಮಂಜಲಿಸಾಬ್ ಮತ್ತು ಮಾಣೀಕ ರವರ ಪ್ರಮಾಣಿಕತೆಗೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕರು ಅಭಿನಂದನೆ ಸಲ್ಲಿಸಿದ್ದಾರೆ.