ಮಾನವ ಸಂಕುಲಕ್ಕೆ ಒಳಿತಾಗುವ ಕೆಲಸ ಮಾಡಿ
ಸಂಜೆವಾಣಿ ವಾರ್ತೆ,
ಮರಿಯಮ್ಮನಹಳ್ಳಿ, ಮೇ.02: ಮಾನವ ಸಂಕುಲಕ್ಕೆ ಒಳಿತಾಗುವಂತಹ ಉತ್ತಮ ಕಾರ್ಯಗಳನ್ನು ಮಾಡುವುದು ದೇವರು ಮೆಚ್ಚುವಂತದ್ದಾಗಿರುತ್ತದೆ ಎಂದು ಕೂಡ್ಲಿಗಿಯ ಸ್ನೇಹಿತರ ಬಳಗದ ಅಬ್ದುಲ್ ರೆಹಮಾನ್ ಹೇಳಿದರು.
ಅವರು ಪಟ್ಟಣದ 12ನೇ ವಾರ್ಡಿನ ಖಾದರವಲಿ ದರ್ಗಾದ ಬಳಿ ಅಂಜುಮನ್ ನೌಜವಾನ್ ಕಮಿಟಿಯವರು  ಪ್ರವಾದಿ ಮಹಮದ್ ಪೈಗಂಬರರ ಜನ್ಮದಿನಾಚರಣೆ ಪ್ರಯುಕ್ತ  ಬಡ ಮುಸ್ಲಿಂ ಮಕ್ಕಳಿಗೆ ಹಮ್ಮಿಕೊಂಡ ಸಾಮೂಹಿಕ ಮುಂಜಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಬಡವರ ಕಷ್ಟಗಳಿಗೆ ಸ್ಪಂದಿಸಿದರೆ, ದೇವರು ಮೆಚ್ಚುತ್ತಾನೆ. ದೇವರು ಮೆಚ್ಚುವಂತಹ ಕಾರ್ಯಗಳಿಗೆ ಸೌಹಾರ್ದತೆಯಿಂದ ನಾವೆಲ್ಲರೂ ಮುಂದಾಗಬೇಕೆಂದರು.
ವಕೀಲ ಕುಂಚೂರು ಕಲೀಂ ಮಾತನಾಡಿ, ಉತ್ತಮ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು ಸುಸಂಸ್ಕತ ಸಮಾಜದ ಲಕ್ಷಣವಾಗಿದೆ. ಸರ್ವರೂ ಉತ್ತಮ ಸಮಾಜ ನಿರ್ಮಿಸಲು ಮುಂದಾಗಬೇಕೆಂದು ಯುವಕರಿಗೆ ಸಲಹೆ ಮಾಡಿದರು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರುಗಳಾದ ಮುತ್ತಾವಲಿ ಕಡ್ತರ ಫಕೃಸಾಬ್, ಅಡ್ಡಿಗೇರಿ ಕಾಶೀಂಸಾಬ್, ಕಮಲ್ ಸಾಬ್, ಖಾಜ ಮೋಹಿದ್ದೀನ್, ಎ.ರಹೀಮಾನ್, ಪ.ಪಂ.ಸದಸ್ಯ ಬೆಣಕಲ್ ಬಾಷ, ಎಂ.ನಜೀರ್ ಸಾಬ್, ವಿ.ಹುಸೇನ್, ಕೆ.ಹಸೇನ್, ಮೌಲಾನ ಯಾಸರ್ ಅರಾಫತ್,ಅಕ್ಬರ್ ಅಂಜುಮನ್ ನೌಜವಾನ್ ಕಮಿಟಿಯ ಅಧ್ಯಕ್ಷ ಮೆಹೆಬೂಬ್ ಬಾಷ, ಹೆಚ್.ದಾದಖಲಂದರ್, ಜಮೀರ್, ಫಕೃಸಾಬ್, ಎ.ಜಬಿವುಲ್ಲಾ, ಟಿ.ರಹಿಮಾನ್,
ರೋಶನ್ ಜಮೀರ್, ಸೈಯದ್ ಮಬ್ಬಾಷ ಸೇರಿದಂತೆ ಇತರರಿದ್ದರು.
ಈ ಸಂಧರ್ಭದಲ್ಲಿ 50ಕ್ಕೂಅಧಿಕ ಬಡ ಮಕ್ಕಳಿಗೆ ಸಮುದಾಯದ ವಿಧಿ ವಿಧಾನಗಳ ಪ್ರಕಾರ ಮುಂಜಿ ನೆರವೇರಿಸಲಾಯಿತು.