ಉಚಿತ ಸೇನಾ ಶಿಬಿರದ ಸಮಾರೋಪ
ಆಳಂದ:ಮೇ.2: ಪಟ್ಟಣದಲ್ಲಿ ಆಳಂದ ಸೈನಿಕರ ಅಭಿವೃದ್ಧಿ ಸಂಘದ ವತಿಯಿಂದ ಒಂದು ತಿಂಗಳ ಉಚಿತ ಸೇನಾ ತರಬೇತಿ ಶಿಬಿರದ ಸಮಾರೋಪ ಸಮಾರಂಭ ಏ1 ರಂದು ನಡೆಯಿತು
ದಿವ್ಯಸಾನಿಧ್ಯ ವಹಿಸಿ ಮಾತನಾಡಿದ ಷ.ಬ್ರ. ವೀರ ಮಹಾಂತ ಶಿವಾಚಾರ್ಯರು ಶ್ರೀಮಹಾಂತೇಶ್ವರ ಮಠ ಚಿಣಮಗೇರಾ ಪವಿತ್ರ ಭಾರತ ಭೂಮಿಯಲ್ಲಿ ವೀರ ಶೂರರು ಜನಿಸಿದ್ದಾರೆ ದೇಶದ ರಕ್ಷಣೆ ಮಾಡುವಲ್ಲಿ ಸೈನಿಕರ ಪಾತ್ರ ಬಹಳ ಮುಖ್ಯವಾದದ್ದು ನಮ್ಮ ಸೈನಿಕರು ತಂದೆ ,ತಾಯಿ, ಮಡದಿ, ಮಕ್ಕಳು, ಎಲ್ಲರನ್ನು ಬಿಟ್ಟು ಮಳೆ ಗಾಳಿ ಬಿಸಿಲು ಎನ್ನದೆ ನಿಶ್ವಾರ್ಥತೆಯಿಂದ ಸೇವೆ ನೀಡುತ್ತಿದ್ದಾರೆ ಸೈನಿಕರಿಗೆ ವರ್ಣಿಸಲು ಪದಗಳೇ ಸಾಲುವುದಿಲ್ಲ, ಉಚಿತ ಸೇನಾ ಶಿಬಿರ ನಡೆಸಿರುವ ಸಿದ್ಧಲಿಂಗ ಮಲಶೆಟ್ಟಿಯವರಿಗೆ ಶ್ಲಾಘಿಸಿದರು. ಮುಂದಿನ ದಿನಗಳಲ್ಲಿ ಉಚಿತ ಸೇನಾ ಶಿಬಿರ ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ನಡೆಸಿ ಬೇಕಾಗುವ ಎಲ್ಲಾ ಸೌಲಭ್ಯಗಳನ್ನು ನಾವು ಒದಗಿಸಲು ಸದಾ ಸಿದ್ಧರಿದ್ದೇವೆ ಎಂದರು. ಉದ್ಘಾಟರಾಗಿ ಶ್ರೀಯಲ್ಲಪ್ಪ ಕಲ್ಲಾಪುರ ಪ್ರಧಾನ ಸಿವಿಲ್ ನ್ಯಾಯಾಧೀಶರು ಆಳಂದ, ಮುಖ್ಯ ಅತಿಥಿಗಳಾಗಿ ಆರ್. ಕೆ. ಪಾಟೀಲ, ಕಾರ್ಯದರ್ಶಿಗಳು ಸಮತಾ ಲೋಕ ಶಿಕ್ಷಣ ಸಮಿತಿ ಆಳಂದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿದ್ಧಲಿಂಗಪ್ಪ ಮಲಶೆಟ್ಟಿ ಡಿ ನಮ್ಮ ಸೇನಾ ಶಿಬಿರ ಯಶಸ್ವಿಯಾಗಲು ತನು ಮನ ಧನದಿಂದ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು ಒಂದು ತಿಂಗಳ ಕಾಲ ನಮ್ಮ ಶಿಬಿರದಲ್ಲಿ ಶಿಬಿರಾರ್ಥಿಗಳಿಗೆ ಶಿಸ್ತಿನ ಬಗ್ಗೆ ಜೀವನ ಹೇಗೆ ರೂಪಿಸಿಕೊಳ್ಳಬೇಕು, ಸಮಾಜ ಹೇಗೆ ಪರಿವರ್ತಿಸಬೇಕು, ದೇಶದ ಸೇವೆ ಹೇಗೆ ಮಾಡಬೇಕು,ದೇಶಭಕ್ತಿ ಅಂದ್ರೆ ಏನು ಎಲ್ಲದರ ಬಗ್ಗೆ ತಿಳಿಸಿದ್ದೇವೆ ನಮ್ಮ ಶಿಬಿರಾರ್ಥಿಗಳು ಮುಂದಿನ ದಿನಗಳಲ್ಲಿ ಸೈನಿಕರಾಗಿ ಆಯ್ಕೆಯಾಗಿ ಸೇವೆ ಸಲ್ಲಿಸುತ್ತಾರೆ ನನಗೆ ನಂಬಿಕೆ ಇದೇ ಯಾವುದೇ ಸಂದರ್ಭದಲ್ಲಿ, ಮಾರ್ಗದರ್ಶನ ಬೇಕಾದರೆ ಸಂಪರ್ಕಿಸಿ ಸಹಾಯ ಮಾಡುವೆ ಈ ಶಿಬಿರ ಯಶಸ್ವಿಯಾಗಿ ನಡೆದಿದ್ದರಿಂದ ನನಗೆ ಬಹಳ ಸಂತೋಷವಾಗಿದೆ ಎಂದರು. ಶಿಬಿರಾರ್ಥಿಗಳಿಗೆ ಏರ್ಪಡಿಸಿದ ಕ್ರಿಡಾ ಚಟುವಟಿಕೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಮೋದ ಪಾಂಚಾಳ ನಿರೂಪಿಸಿದರು. ಸಿದ್ಧಾರ್ಥ ಹಸೂರೆ , ಸ್ವಾಗತಿಸಿದರು. ಸುನಂದಾ ಯಳಮೇಲಿ ವಂದಿಸಿದರು.