ಪುಣೆಯಲ್ಲಿ ನಡೆದ ನೃತ್ಯ ಪ್ರದರ್ಶನದಲ್ಲಿ ಅನಾವರ್ಣಗೊಂಡ ವಿಜಯನಗರದ ಪ್ರತಿಭೆ ಯಶಸ್ವಿನಿ
ಸಂಜೆವಾಣಿ ವಾರ್ತೆ
ಹೊಸಪೇಟೆ ಮೇ2: ಪುಣೆಯ ಶಿವಾಂಜಲಿ ನೃತ್ಯ ಅಕಾಡೆಮಿ ನಡೆಸಿದ ರಾಷ್ಟ್ರಮಟ್ಟದ ನೃತ್ಯ ಸ್ಪರ್ಧೆಯಲ್ಲಿ ವಿಜಯನಗರದ ಪ್ರತಿಭೆ ಎಚ್.ಎಸ್.ಯಶಸ್ವಿನಿ ತನ್ನ ಪ್ರತಿಭೆಯ ಅನಾವರ್ಣಗೊಂಡು ರಾಷ್ಟ್ರಮಟ್ಟದಲ್ಲಿ ವಿಜಯನಗರದ ಕೀರ್ತಿ ಪತಾಕೆ ಹಾರಿಸಿದ್ದಾಳೆ.
ಏಪ್ರೀಲ್ 30 ರಂದು ಪುಣೆಯ ಜವಾಹರ್‍ಲಾಲ್ ನೆಹರೂ ಸಭಾಂಗಣದಲ್ಲಿ ನಡೆದ ಅಂತರಾಷ್ಟ್ರೀಯ ನೃತ್ಯ ಸ್ಪರ್ಧೆಯಲ್ಲಿ ದೇಶದ ವಿವಿಧ ಭಾಗಗಳಿಂದ ಬಂದಿದ್ದ ನೃತ್ಯ ಪಟುಗಳು ತಮ್ಮ ನೃತ್ಯಕೌಶಲ್ಯದ ಜೊತೆ ಉತ್ಸಾವನ್ನು ಪ್ರದರ್ಶಿಸಿ ಮೋಡಿ ಮಾಡಿದರು.  ತೀವೃ ಪೈಪೋಟಿಯ ನಡುವೆ ನಡೆದ ಪ್ರದರ್ಶನ ಪ್ರೇಕ್ಷಕರನ್ನು ಮೋಡಿ ಮಾಡಿದೆ.
ತೀವೃ ಸ್ಪರ್ಧೆಯ ನಡುವೆ ಕಿರಿಯರ ವಿಭಾಗದ ಏಕವ್ಯಕ್ತಿ ಭರತನಾಟ್ಯ ನೃತ್ಯ ಸ್ಪರ್ಧೆಯಲ್ಲಿ ತನ್ನ ಪ್ರತಿಭಾ ಪ್ರದರ್ಶನದ ನಡುವೆ ತೃತೀಯ ಸ್ಥಾನವನ್ನು ಪಡೆಯುವಲ್ಲಿ ಎಚ್.ಎಸ್.ಯಶಸ್ವಿನಿ ಯಶಸ್ವಿಯಾಗಿದ್ದಾರೆ. ರಾಷ್ಟ್ರಮಟ್ಟದ ಸ್ಪರ್ಧೆಯಂದೊಡನೆಯೇ ಪೈಪೋಟಿ ಸಹಜವಾಗಿದ್ದರೂ ತನ್ನ ನಿಷ್ಕಳಂಕ ಪುಟ್ವರ್ಕ, ಆಕರ್ಷಕ ಚಲನವಲನಗಳು, ಭಾವನಾತ್ಮಕ ಭಂಗಿಗಳ ವರ್ತನೆ ಪ್ರೇಕ್ಷಕರ ಮಂತ್ರಮುಗ್ದರನ್ನಾಗಿಸಿತು.
ಇಂತಹ ಕಠಿಣ ಪರಿಸ್ಥಿತಿಯಲ್ಲಿ ಪ್ರತಿಹಂತದ ಪ್ರಯಾಣದಲ್ಲಿ ನಿರಂತರ ಪ್ರೋತ್ಸಾಹ ಮತ್ತು ಸ್ಪೂರ್ತಿಯ ಮಾರ್ಗದರ್ಶನ ನೀಡಿದ ಗುರುಗಳು, ಕುಟುಂಬದವರು ಮತ್ತು ಬೆಂಬಲಿಗರಿಗೆ ಕೃತಜ್ಞತೆ, ನನ್ನ ಈ ಸಾಧನೆ ಮೊದಲ ಬಾರಿಯಾಗಿದ್ದು ಹುಟ್ಟೂರಾಗಿರುವ ವಿಜಯನಗರಕ್ಕೆ ಸಲ್ಲಿಸುತ್ತೇನೆ ಎಂದು ಯಶಸ್ವಿನಿ ಎಚ್.ಎಸ್. ಪ್ರಶಸ್ತಿಯನ್ನು ಸ್ವೀಕರಿಸಿದ ನಂತರ ಮಾತನಾಡಿದರು.
ಹೊಸಪೇಟೆಯ ಉಪ ವಲಯ ಅರಣ್ಯಾಧಿಕಾರಿಯಾಗಿರುವ ಶಂಕರ್ ಎಚ್.ಬಿ ಯೋಗಪಟು ಮಂಗಳಗೌರಿಯ ಪುತ್ರಿಯಾಗಿರುವ ಇವರು ತಂದೆ ತಾಯಿ, ಬಂದು ಬಳಗದ ಜೊತೆ, ನಗರ, ಜಿಲ್ಲೆ ಹಾಗೂ ರಾಜ್ಯಕ್ಕೂ ಕೀರ್ತಿತರುವಂತಾಗಿದ್ದು ಸಾಧನೆಗೆ ಎಲ್ಲಡೆಗಳಿಂದಲೂ ಪ್ರಶಂಸೆಯ ಮಹಾಪುರವೇ ಹರಿದು ಬರುತ್ತಿದೆ. ಪತಂಜಲಿ ಯೋಗ ಸಮಿತಿ, ಫ್ರೀಡಂ ಪಾರ್ಕ್ ಯೋಗ ಕೇಂದ್ರದ ಯೋಗ ಸಾಧಕರು ಸಹ ಯಶಸ್ವಿನಿಯ ಪ್ರತಿಭೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.