ಕೂಡ್ಲಿಗಿ : 1200 ಚುನಾವಣಾ ನಿಯೋಜಿತ ಸಿಬ್ಬಂದಿಗೆ ತರಬೇತಿ.
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಮೇ.2 :- ಕೂಡ್ಲಿಗಿ ವಿಧಾನಸಭಾ ಕ್ಷೇತ್ರದಲ್ಲಿ ಮೇ 7ರಂದು ಲೋಕಸಭಾ ಚುನಾವಣಾ ಮತದಾನ ಪ್ರಕ್ರಿಯೆ  ನಡೆಯಲಿದ್ದು ಕ್ಷೇತ್ರದ 250ಮತಗಟ್ಟೆಗಳಿಗೆ ಸಂಬಂಧಿಸಿದಂತೆ 1200 ಮಂದಿ ಚುನಾವಣಾ ನಿಯೋಜಿತ ಸಿಬ್ಬಂದಿಗಳಿಗೆ ಬುಧವಾರ ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜ್ ಆವರಣದಲ್ಲಿ ಮತಗಟ್ಟೆಯಲ್ಲಿ ನಿಯೋಜಿತ ಸಿಬ್ಬಂದಿ ಕೈಗೊಳ್ಳಬೇಕಾಗಿರುವ ಕ್ರಮಗಳ ಬಗ್ಗೆ ತರಬೇತಿ ನೀಡಲಾಯಿತು.
300ಪಿಆರ್ ಓ, 300ಎಪಿಆರ್ ಓ, 300 ಪಿಓ 1 ಹಾಗೂ 300ಪಿಓ 2 ಎಂಬಂತೆ 1200ಸಿಬ್ಬಂದಿಗಳಿಗೆ 22ಸೆಕ್ಟರ್ ಅಧಿಕಾರಿಗಳು 8ಎಎಲ್ ಎಂ ಟಿ ಗಳು ಜಿಲ್ಲಾ ಡಿಎಲ್ ಎಂ ಟಿ ಸೋಮಪ್ಪ ಬಡಿಗೇರ್ ಉಸ್ತುವಾರಿ ನೇತೃತ್ವದಲ್ಲಿ 22 ಕೋಣೆಗಳಲ್ಲಿ ಬೆಳಿಗ್ಗೆ ಗಂಟೆಯಿಂದ ಸಂಜೆ 4-30ಗಂಟೆವರೆಗೆ ತರಬೇತಿ ನೀಡಿದರು. ವಿಜಯನಗರ ಜಿಲ್ಲೆಯ ಹರಪನಹಳ್ಳಿ, ಹಗರಿಬೊಮ್ಮನಹಳ್ಳಿ, ಹಡಗಲಿ ಹಾಗೂ ಹೊಸಪೇಟೆಯಿಂದ ಚುನಾವಣಾ ನಿಯೋಜಿತ ಸಿಬ್ಬಂದಿಗಳು ತರಬೇತಿಯಲ್ಲಿ ಭಾಗವಹಿಸಿದ್ದರು.
ಜಿಲ್ಲಾಧಿಕಾರಿ ದಿವಾಕರ್ ಭೇಟಿ : ಬುಧವಾರ ಪಟ್ಟಣದಲ್ಲಿ ಚುನಾವಣೆ ಸಿಬ್ಬಂದಿ ತರಬೇತಿ ಕಾರ್ಯಾಗಾರಕ್ಕೆ ವಿಜಯನಗರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಮುಖ್ಯ ಚುನಾವಣಾ ಅಧಿಕಾರಿ ಎಂ ಎಸ್ ದಿವಾಕರ್ ಭೇಟಿ ನೀಡಿ ಮತದಾನ ಶಾಂತಿಯುತವಾಗಿ ನಡೆಸಲು ತಾವು ಸಹ ಕಾರಣಿಭೂತರು ಮತಕೇಂದ್ರದಲ್ಲಿ ಯಾವುದೇ ಸಮಸ್ಯೆ ಕಂಡುಬಂದರೆ ತಕ್ಷಣ ಕೂಡ್ಲಿಗಿ ಎಆರ್ ಓ ಗಮನಕ್ಕೆ ತರುವಂತೆ ಹಾಗೂ ಶಾಂತಿಯುತ ಚುನಾವಣೆ ನಡೆಸುವಂತೆ ಚುನಾವಣಾ ನಿಯೋಜಿತ ಸಿಬ್ಬಂದಿಗಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಕೂಡ್ಲಿಗಿ ವಿಧಾನಸಭಾ ಸಹಾಯಕ ಚುನಾವಣಾಧಿಕಾರಿ ಡಾ ಹೆಚ್ ಎನ್ ರಘು, ಕೂಡ್ಲಿಗಿ ತಹಸೀಲ್ದಾರ್ ರಾಜು ಪಿರಂಗಿ ಹಾಗೂ ಕೊಟ್ಟೂರು ತಹಸೀಲ್ದಾರ್ ಅಮರೇಶ್ವರ ಸೇರಿದಂತೆ ಇತರರಿದ್ದರು.
ಕೂಡ್ಲಿಗಿ ವಿಧಾನಸಭಾ ಕ್ಷೇತ್ರದಲ್ಲಿ ಕೊನೆ ಹಂತವಾಗಿ 1,06,034 ಪುರುಷರು,1,03,951 ಮಹಿಳೆಯರು ಹಾಗೂ ಇತರೆ 11ಜನರು ಸೇರಿದಂತೆ ಒಟ್ಟು 2,09,996 ಮತದಾರರಿದ್ದಾರೆ ಅಲ್ಲದೆ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದಲ್ಲಿ ಶೇ 100ರಷ್ಟು ಮತದಾನ ಮಾಡಬೇಕೆಂದು ಜಿಲ್ಲಾ ಹಾಗೂ ತಾಲೂಕು ಸ್ವೀಪ್ ಸಮಿತಿ, ಜಿಲ್ಲಾ ಚುನಾವಣಾ ರಾಯಭಾರಿಯಾಗಿರುವ ಎರಡು ಕೈಗಳಿಲ್ಲದ ಲಕ್ಷ್ಮಿ ಸೇರಿದಂತೆ ತಾಲೂಕುವಾರು ವಿಶೇಷ ಚೇತನರ ತಂಡಗಳಿಂದ ಬೈಕ್ ರ್ಯಾಲಿ, ಪಂಜಿನ ಮೆರವಣಿಗೆ, ನರೇಗಾದಲ್ಲಿ ಮತದಾನ ಜಾಗೃತಿ ರಂಗೋಲಿ ಸ್ಪರ್ಧೆ ಸೇರಿದಂತೆ ಇತರೆ ಕಾರ್ಯಕ್ರಮ ನಡೆಸುವ ಮೂಲಕ ಮತದಾನ ಜಾಗೃತಿ ಮೂಡಿಸಿ ಸಂವಿಧಾನಿಕ ಹಕ್ಕನ್ನು ತಪ್ಪದೆ ಚಲಾಯಿಸುವಂತೆ ಮಾಡಿದ್ದಲ್ಲದೆ ವಯಸ್ಸಾದ 85 ವರ್ಷ ಮೇಲ್ಪಟ್ಟವರ ಹಾಗೂ ವಿಶೇಷಚೇತನರ ನಿಶಕ್ತರಿಗೆ ಮನೆಯಲ್ಲೇ ಮತದಾನ ಮಾಡುವ ಕುರಿತಂತೆ ಕ್ಷೇತ್ರದಲ್ಲಿ ಎಲ್ಲಾ ಕಾರ್ಯಕ್ರಮಗಳನ್ನು ಸಹಾಯಕ ಚುನಾವಣಾ ಅಧಿಕಾರಿ ಡಾ.ರಘು, ತಹಸೀಲ್ದಾರ್ ರಾಜು ಪಿರಂಗಿ, ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷ  ಹಾಗೂ ಇಓ ವೈ ರವಿಕುಮಾರ್ ಸೇರಿದಂತೆ ಇತರರು ಈ ಮತಜಾಗೃತಿ ಕಾರ್ಯಕ್ರಮ ನಡೆಸಿದ್ದಾರೆ.