ಕೂಡ್ಲಿಗಿಯಲ್ಲಿ  ನಾಟಿಕೋಳಿ ಸಾರು –  ರಾಗಿಮುದ್ದೆ  ಊಟ ಸವಿದ ಸಿಎಂ, ಡಿಸಿಎಂ.
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಮೇ.2 :- ಪಟ್ಟಣದಲ್ಲಿ ಜರುಗಿದ ಬಳ್ಳಾರಿ  ಕಾಂಗ್ರೆಸ್ ಪರ ಪ್ರಜಾಧ್ವನಿ ಸಮಾವೇಶದ ಬಹಿರಂಗ ಸಭೆಗೆ ಆಗಮಿಸಿದ್ದ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ, ವಸತಿ ಸಚಿವ ಜಮೀರ್ ಅಹಮದ್, ಮಾಜಿ ಸಚಿವ ಪಿ ಟಿ ಪರಮೇಶ್ವರ ನಾಯ್ಕ್,ಮೊಳಕಾಲ್ಮುರು ಶಾಸಕ ಎನ್ ವೈ ಗೋಪಾಲಕೃಷ್ಣ, ಕೆಎಂ ಎಫ್ ಅಧ್ಯಕ್ಷ ಭೀಮನಾಯ್ಕ್ ಸೇರಿದಂತೆ ಇತರರು ಕೂಡ್ಲಿಗಿ ಶಾಸಕ ಡಾ ಶ್ರೀನಿವಾಸ ಅವರ ಜನಸಂಪರ್ಕ ಕಚೇರಿಯಲ್ಲಿ ನಡೆಸಿದ ಭೋಜನ ಕೂಟದಲ್ಲಿ ಭಾಗವಹಿಸಿ ನಾಟಿಕೋಳಿ ಸಾರು, ರಾಗಿಮುದ್ದೆ, ಚಪಾತಿ, ಹಸಿರುಕಾಳು ಪಲ್ಯ ಸೇರಿದಂತೆ ಇತರೆ ಐಟಂನ ಊಟದ ಸವಿಯನ್ನು ಸವಿದರು ಕೂಡ್ಲಿಗಿ ಶಾಸಕ ಡಾ ಶ್ರೀನಿವಾಸ ಸಿಎಂ, ಡಿಸಿಎಂ ಸೇರಿದಂತೆ ಬಹಿರಂಗ ಸಭೆಗೆ ಆಗಮಿಸಿದ ಗಣ್ಯತಿಗಣ್ಯರಿಗೆ ಊಟವನ್ನು ತಾವೇ ನಿಂತಿದ್ದು ಉಣಬಡಿಸಿದರು.