ವೃದ್ಧಾಪ್ಯಕಾರ್ಯಕ್ರಮವನ್ನು ಸದ್ಬಳಕೆ ಮಾಡಿಕೊಳ್ಳಬೇಕು: ಸಿಇಓ ಮೋನಾರೋತ್
ಸಂಜೆವಾಣಿ ವಾರ್ತೆ
ಚಾಮರಾಜನಗರ, ಸೆ.22-ವಯೋವೃದ್ಧರಿಗೆ ನವೋಲ್ಲಾಸತುಂಬಲು ಆಯೋಜಿಸಿರುವ ಸಂತಸಮಯ ವೃದ್ಧಾಪ್ಯಕಾರ್ಯಕ್ರಮವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದುಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಮೋನಾರೋತ್ ಸಲಹೆ ನೀಡಿದರು.
ತಾಲೂಕಿನ ಸಂತೇಮರಹಳ್ಳಿಯಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದಲ್ಲಿಜಿಲ್ಲಾ ಪಂಚಾಯಿತಿ, ಸತ್ಯಎಡುಕೇರ್‍ಕಾಂಪೀಟೆನ್ಸಿಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ಸಂತಸಮಯ ವೃದ್ಧಾಪ್ಯಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದಅವರು,ರಾಜ್ಯದಲ್ಲಿಯೇ ಮೊದಲ ಬಾರಿಗೆಜಿಲ್ಲೆಯ 10 ಗ್ರಾಮಪಂಚಾಯಿತಿಗಳಲ್ಲಿ ಈ ಕಾರ್ಯಕ್ರಮವನ್ನು ಪ್ರಾಯೋಗಿಕವಾಗಿ ಪ್ರಾರಂಭಿಸಲಾಗುತ್ತಿದೆ. ನಂತರ ಹಂತ ಹಂತವಾಗಿಜಿಲ್ಲೆಯ ಬಹುತೇಕಎಲ್ಲ ಗ್ರಾಮಪಂಚಾಯಿತಿಗಳಿಗೂ ವಿಸ್ತರಿಸುವಗುರಿ ಹೊಂದಲಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದಇತರೆ ಜಿಲ್ಲೆಗಳಲ್ಲೂ ಪ್ರಾರಂಭಿಸಲಾಗುವುದು. ಈ ಕಾರ್ಯಕ್ರಮದಲ್ಲಿ ಹಿರಿಯ ಜೀವಗಳಿಗೆ ಧ್ಯಾನ, ಯೋಗ ಹೇಳಿಕೊಡಲಾಗುವುದು. ಇದಕ್ಕಾಗಿತರಬೇತಿ ಪಡೆದ ಸ್ವಯಂ ಸೇವಕರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದರು.
ಜಿ.ಪಂ. ಉಪ ಕಾರ್ಯದರ್ಶಿ ಪಿ.ಲಕ್ಷ್ಮಿಮಾತನಾಡಿ, ಹಿರಿಯ ನಾಗರಿಕರು ವೃದ್ದಾಪ್ಯವನ್ನುಚಟುವಟಿಕೆಯಿಂದ ಕಳೆಯುವ ಹಾಗೂ ವೃದ್ಧರಲ್ಲಿರುವ ಕಲೆಗಳಿಗೆ ಸೂಕ್ತ ವೇದಿಕೆ ಕೊಡುವಉದ್ದೇಶದಿಂದಕಾರ್ಯಕ್ರಮಆಯೋಜಿಸಲಾಗಿದೆ. ವೃದ್ಧರು ಹೊಲ ಗದ್ದೆಗಳಲ್ಲಿ ಇರುತ್ತಾರೆ. ವೃದ್ಧಾಪ್ಯವನ್ನುಎಂಜಾಯ್ ಮಾಡಿಕೊಂಡು ಸಮಯ ಕಳೆಯಬೇಕು. ವೇದಿಕೆಯನ್ನುಗ್ರಂಥಾಲಯದ ಮೂಲಕ ಕಲ್ಪಿಸಿಕೊಡುವ ನಿಟ್ಟಿನಲ್ಲಿಅರಿವುಕೇಂದ್ರವನ್ನಾಗಿ ಮಾಡಲಾಗಿದೆ. ಬೋಧನೆಗೆ ಮಾತ್ರಗ್ರಂಥಾಲಯ ಸೀಮಿತವಾಗಿಲ್ಲ. ಎಲ್ಲರೀತಿಯ ಚಟುವಟಿಕೆಗಳು ಗ್ರಂಥಾಲಯದಲ್ಲಿಇರಲಿದೆ. ಹಿರಿಯರುಆಟವಾಡಲು, ಜ್ಞಾನ ಪಡೆಯಲು, ಆರೋಗ್ಯಕ್ಕೆ ಸಂಬಂಧಿಸಿದಂತಹ ಚಟುವಟಿಕೆಗಳು ಪ್ರಾಯೋಗಿಕವಾಗಿ ನಡೆಯಲಿದೆಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆರಾಜಮ್ಮ, ಉಪಾಧ್ಯಕ್ಷೆ ಹೇಮಾಲತಾ, ಸದಸ್ಯರಾದಶಿವಯ್ಯ, ಶಿವಕುಮಾರ್, ಆಶಾ, ಸಂಸ್ಥೆಯ ನಾಯ್ಡು, ರತ್ನಕುಮಾರಿ, ಡಾ.ಜಿ.ಎಚ್.ವಸುಂಧರಾದೇವಿ, ಡಾ.ಪ್ರೇತೇಶ್‍ಕಿರಣ್, ಸರಸ್ವತಿ ಪದ್ಮನಾಭನ್ ಸೇರಿದಂತೆಇತರರಿದ್ದರು.