ಸಂಪನ್ಮೂಲ ಕೇಂದ್ರ ಉದ್ಘಾಟನೆ
ಲಕ್ಷ್ಮೇಶ್ವರ,ಸೆ22: ಪಟ್ಟಣದ ಸರಕಾರಿ ಕನ್ನಡ ಪ್ರಾಥಮಿಕ ಶಾಲೆ ನಂಬರ-1 ರಲ್ಲಿ ನೂತನವಾಗಿ ನವೀಕರಣಗೊಂಡ ಲಕ್ಷ್ಮೇಶ್ವರ ಉತ್ತರ ಕ್ಲಸ್ಟರ್ನ ಸಮೂಹ ಸಂಪನ್ಮೂಲ ಕೇಂದ್ರದ ಉದ್ಘಾಟನೆ ಜರುಗಿತು.
ಉದ್ಘಾಟನೆ ನೆರವೇರಿಸಿ ಮಾತನಾಡಿದ ಶಾಸಕ ಡಾ. ಚಂದ್ರು ಲಮಾಣಿ ಅವರು ಇಂದಿನ ಆಧುನಿಕ ತಾಂತ್ರಿಕ ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಶಿಕ್ಷಕರು ಅವುಗಳ ಬಗ್ಗೆ ಹೆಚ್ಚು ಜ್ಞಾನಾರ್ಜನೆ ಪಡೆದುಕೊಂಡು ಶೈಕ್ಷಣಿಕ ಗುಣಮಟ್ಟ ಸುಧಾರಣೆ ಶಿಕ್ಷಕರ ಜ್ಞಾನ ಹೆಚ್ಚಳ ಇಲಾಖೆಗಳ ಮಾಹಿತಿ ಶಿಕ್ಷಕರ ತರಬೇತಿ ಇವುಗಳಿಗೆ ಇಂತಹ ಸಂಪನ್ಮೂಲ ಕೇಂದ್ರಗಳು ಪೂರಕವಾಗಿವೆ ಎಂದರು.
ಪ್ರತಿಯೊಂದಕ್ಕೂ ಸರಕಾರದ ಕಡೆಗೆ ನೋಡದೆ ಶಿಕ್ಷಕರು ಸ್ವಯಂ ಪ್ರೇರಣೆಯಿಂದ ಕ್ಲಸ್ಟರ್ ಕೇಂದ್ರವನ್ನು ನವೀಕರಣಗೊಳಿಸಿ ಸಕಲ ಸೌಲಭ್ಯಗಳನ್ನು ಒದಗಿಸಿರುವುದು ಇತರರಿಗೆ ಮಾದರಿಯಾಗಿದೆ ಎಂದು ಪ್ರಶಂಶಿಸಿದರು.
ಕಾರ್ಯಕ್ರಮದಲ್ಲಿ ಗದಗ್ ಶಹರ ಕ್ಷೇತ್ರದ ಕ್ಷೇತ್ರ ಶಿಕ್ಷಣಾಧಿಕಾರಿ ಆರ್ ಎಸ್ ಬುರಡಿಯವರು ಮಾತನಾಡಿ ಶಿಕ್ಷಕರು ತಮ್ಮ ಸಂಘಟನೆ ಯೊಂದಿಗೆ ಶೈಕ್ಷಣಿಕ ಸೌಲಭ್ಯಗಳಿಗಾಗಿ ತಾವೇ ಒಗ್ಗೂಡಿ ಅತ್ಯಂತ ಸುಂದರವಾಗಿ ಎಲ್ಲಾ ಸೌಲಭ್ಯಗಳನ್ನು ಒಳಗೊಂಡ ಕ್ಲಸ್ಟರ್ ಮಟ್ಟದ ಸಮೂಹ ಸಂಪನ್ಮೂಲ ಕೇಂದ್ರವನ್ನು ನವೀಕರಿಸಿಕೊಂಡಿರುವುದು ಅತ್ಯಂತ ಹೆಮ್ಮೆಯ ಸಂಗತಿ ಎಂದರು. ಶಿಕ್ಷಕರು ಹೆಚ್ಚಿನ ಜ್ಞಾನಾರ್ಜನೆ ಮಾಹಿತಿ ಸಮೂಹ ಸಂಪನ್ಮೂಲ ಇವುಗಳ ಬಗ್ಗೆ ಹೆಚ್ಚು ಹೆಚ್ಚು ಅಧ್ಯಯನಕ್ಕೆ ಇದೊಂದು ಉತ್ತಮ ಪಾಠಶಾಲೆ ಎಂದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್. ಎನ್. ನಾಯಕ ಮಾತನಾಡಿದರು. ಕಾರ್ಯಕ್ರಮದಲ್ಲಿ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಡಿ ಎಚ್ ಪಾಟೀಲ್ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿಎಸ್ ಹರ್ಲಾಪುರ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಚ್‍ಎಸ್ ರಾಮನ ಗೌಡರ ಪುರಸಭಾ ಸದಸ್ಯರಾದ ಪೂರ್ಣಿಮಾ ಪಾಟೀಲ ಮಾಜಿ ಅಧ್ಯಕ್ಷ ಎಂಆರ್ ಪಾಟೀಲ್ ಚಂದ್ರಕಾಂತ್ ನೇಕಾರ ಗೀತಾ ಹಳಿಯಾಳ ಬಸವರಾಜ ಗೋಡಿ ಎಂ. ಬಿ ಹೊಸಮನಿ ಉಮೇಶ ನೇಕಾರ ಪೂರ್ಣಜಿ ಕರಾಟೆ ನಿಂಗಪ್ಪ ಬನ್ನಿ ಎನ್ ಆರ್ ಸಾತಪೂತೆ ಸೇರಿದಂತೆ ಉತ್ತರ ಕ್ಲಸ್ಟರ್ನ ಎಲ್ಲಾ ಶೈಕ್ಷಣಿಕ ಸಂಘಟನೆಗಳ ಪದಾಧಿಕಾರಿಗಳು ಮುಖ್ಯೋಪಾಧ್ಯಾಯರು ಉಪಸ್ಥಿತರಿದ್ದರು.
ಉಮೇಶ್ ನೇಕಾರ್ ರಾಜೇಶ್ವರಿ ಅಡಕಟ್ಟಿ ಎಸ್ ಎಸ್ ಮುಳುಗುಂದ ಸತೀಶ್ ಬೊಮ್ಮಲೆ ನಿರ್ವಹಿಸಿದರು.