ಮರೆಗುಳಿ ಖಾಯಿಲೆಯನ್ನುಆರೈಕೆದಾರರ ಬೆಂಬಲದಿಂದ ತಡೆಯಬಹುದು :ಡಾ. ಎಸ್. ಚಿದಂಬರ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಸೆ.22- ದಿನನಿತ್ಯ ವ್ಯಾಯಾಮ, ಔಷದ ಸೇವನೆ ಉತ್ತಮ ಪರಿಸರ ಹಾಗೂ ಆರೈಕೆದಾರರ ಬೆಂಬಲದಿಂದ ಆಲ್ಜೈಮರ್‍ಅಥವಾಡಿಮೆನ್ಸಿಯ (ಮರೆಗುಳಿತನ) ಖಾಯಿಲೆಯನ್ನು ತಡೆಗಟ್ಟಿ ಆರೋಗ್ಯವನ್ನು ಕಾಪಾಡಿಕೊಳ್ಳಬಹುದುಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಚಿದಂಬರ ಅವರು ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಸಿಮ್ಸ್) ಸಂಯುಕ್ತಾಶ್ರಯದಲ್ಲಿ ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮದಡಿಯಲ್ಲಿ ನಗರದ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿರುವ ಶ್ರೀ ವಿನಾಯಕ ಎಜುಕೇಷನ್ ಸೊಸೈಟಿ ಆವರಣದಲ್ಲಿಂದು ಹಮ್ಮಿಕೊಳ್ಳಲಾಗಿದ್ದ ವಿಶ್ವ ಆಲ್ಜೈಮರ್ (ಮರೆಗುಳಿತನ) ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆಲ್ಜೈಮರ್ ಅಥವಾಡಿಮೆನ್ಸಿಯ ಎಂದರೆ ಆಡು ಭಾμÉಯಲ್ಲಿ ಮರೆಗುಳಿ ಖಾಯಿಲೆ ಎಂದರ್ಥ. ಮರೆಗುಳಿ ಖಾಯಿಲೆಯು 60 ವರ್ಷ ಮೇಲ್ಪಟ್ಟವರಲ್ಲಿ ಕಂಡು ಬರುತ್ತದೆ. ಇದನ್ನುಇತ್ತೀಚಿನ ಸನ್ನಿವೇಶಆಹಾರ ಸೇವನೆ, ಹಾವಭಾವಚಟುವಟಿ ಕೆರಹಿತಜೀವನಇತ್ಯಾದಿ ಕಾರಣದಿಂದ 60 ರಿಂದ 70 ವರ್ಷದೊಳಗಿನ ವಯೋವೃದ್ಧರಲ್ಲಿ ಆಲ್ಜೈಮರ್ ಖಾಯಿಲೆ ಕಂಡು ಬರುತ್ತದೆ ಎಂದರು.
ವಯಸ್ಸಾದವರಲ್ಲಿಚರ್ಮ ಸುಕ್ಕುಗಟ್ಟುವಿಕೆ ,ತೊದಲು ಮಾತು, ಜ್ಞಾಪಕ ಶಕ್ತಿ ಕಡಿಮೆಯಾಗುವುದು, ದಾರಿತಪ್ಪುವುದು, ನಡವಳಿಕೆಯಲ್ಲಿ ಬದಲಾವಣೆ, ಆಹಾರ ಸೇವನೆ, ಉಡುಪುಗಳನ್ನು ಧರಿಸುವುದುಗೊತ್ತಾಗದಿರುವುದು, ಹಾಸಿಗೆ ಹಿಡಿಯುವುದು, ಮಾನಸಿಕವಾಗಿಕುಗ್ಗುವಿಕೆ ಹಾಗೂ ಮಾನಸಿಕ ಅಸ್ವಸ್ಥತೆಗಳು ಇತ್ಯಾದಿ ಸಮಸ್ಯೆಗಳು ಮರೆಗುಳಿ ಖಾಯಿಲೆಯ ಲಕ್ಷಣಗಳಾಗಿದ್ದು, ಈ ಖಾಯಿಲೆಯಿಂದ ಬೇಗ ಸಾವು ಸಂಭವಿಸುವ ಸಾಧ್ಯತೆಯಿದೆ ಎಂದು ತಿಳಿಸಿದರು.
ಮರೆಗುಳಿ ಖಾಯಿಲೆಯನ್ನು ತಡೆಗಟ್ಟಲುದಿನ ನಿತ್ಯ ಚಟುವಟಿಕೆಯಿಂದ ಇರಲು ಅವಕಾಶ ಕಲ್ಪಿಸಬೇಕು. ವ್ಯಾಯಾಮ, ಔಷದ ಸೇವನೆ, ಉತ್ತಮ ಪರಿಸರ ಹಾಗೂ ಆರೈಕೆದಾರರ ಬೆಂಬಲದಿಂದ ವಯಸ್ಸಾದವರಆರೋಗ್ಯವನ್ನುಕಾಪಾಡ ಬಹುದು. ಅವರಿಗೆ ಸೂಕ್ತ ಔಷದೋಪಚಾರ ಹಾಗೂ ಪುನರ್ ವಸತಿ ಕಲ್ಪಿಸುವುದರಿಂದ ಈ ಖಾಯಿಲೆಯಿಂದ ಪಾರುಮಾಡಬಹುದು ಎಂದು ಡಾ.ಎಸ್.ಚಿದಂಬರ ಅವರು ತಿಳಿಸಿದರು.
ಬಳಿಕ ಕಾರ್ಯಕ್ರಮದಲ್ಲಿ ಹಾಜರಿದ್ದ ಹಿರಿಯ ನಾಗರಿಕರಜೊತೆಸಂವಾದ ನಡೆಸಿ ಸಮಸ್ಯೆಗಳನ್ನು ಆಲಿಸಿ ಸಲಹೆನೀಡಿದರು.ಜಿಲ್ಲಾಆರೋಗ್ಯ ಮೇಲ್ವಿಚಾರಣಾಧಿಕಾರಿ ಆರ್.ವೆಂಕಟೇಶ್, ಪ್ರಭಾರ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿದೊರೆಸ್ವಾಮಿ ನಾಯಕ್, ಕಾರ್ಯಕ್ರಮ ಸಂಯೋಜಕರಾದ ನಾಗೇಂದ್ರ, ಫಿಜಿಯೋಥೆರಪಿಸ್ಟ್ ಸುಪ್ರೀತ್, ಮನೋರೋಗ ತಜ್ಞೆ ದೀಪಾ, ಸಾನಿಯಾಖಾನಂ, ಯೋಜನಾ ಸಂಯೋಜಕ ನಿಂಗರಾಜುಕಾರ್ಯಕ್ರಮದಲ್ಲಿ ಇದ್ದರು.