ಆರ್.ಎಚ್.ಎಂ. ತಿಪ್ಪೇಸ್ವಾಮಿ ನಿಧನ
(ಸಂಂಜೆವಾಣಿ ವಾರ್ತೆ)
ಬಳ್ಳಾರಿ, ಮೇ, ೦೨; ವೀರಶೈವ ವಿದ್ಯಾವರ್ಧಕ ಸಂಘದ ಆಜೀವ ಸಧಸ್ಯ ಆರ್.ಎಚ್.ಎಂ. ತಿಪ್ಪೇಸ್ವಾಮಿ (೫೦) ಅವರು ತೀವ್ರ ಹೃದಯಾಘಾತದಿಂದ ಬುಧವಾರ ರಾತ್ರಿ‌ ಮೃತಪಟ್ಟಿದ್ದಾರೆ.
ಮೃತರು ಪತ್ನಿ, ಒಬ್ಬ ಮಗ, ಒಬ್ಬ ಮಗಳು ಹಾಗೂ‌ ಅಪಾರ ಸಂಖ್ಯೆಯ ಬಂಧುಗಳು ‌- ಮಿತ್ರರನ್ನು, ಸ್ನೇಹಿರನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ಗುರುವಾರ ಸಂಜೆ ೪ ಗಂಟೆಗೆ ವೀರಶೈವ ರುದ್ರಭೂಮಿಯಲ್ಲಿ ವೀರಶೈವ ವಿಧಿ ಸಂಪ್ರದಾಯಗಳ ಪ್ರಕಾರ ಗುರು-ಹಿರಿಯರ ಸಮ್ಮುಖದಲ್ಲಿ ನೆರವೇರಲಿದೆ ಎಂದು ಕುಟುಂಬದ ‌ಹಿರಿಯರು ತಿಳಿಸಿದ್ದಾರೆ.