ಮತಗಟ್ಟೆ ಅಧಿಕಾರಿಗಳು ಜಾಗರುಕತೆಯಿಂದ ಕಾರ್ಯ ನಿರ್ವಹಿಸಬೇಕು

ಸಂಜೆವಾಣಿ ವಾರ್ತೆ
ಜಗಳೂರು.ಮೇ.೨ : ಮತಗಟ್ಟೆ ಅಧಿಕಾರಿಗಳು ಮತ್ತು ಸಹಾಯಕ ಮತಗಟ್ಟೆ ಅಧಿಕಾರಿಗಳು ಜಾಗರುಕತೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಸಹಾಯಕ ಚುನಾವಣಾಧಿಕಾರಿ ಶಿದ್ರಾಮ ವೈ ಮಾರಿಹಾಳ ಹೇಳಿದರು.ಪಟ್ಟಣದ ಸರಕಾರಿ ಪ್ರೌಢ ಶಾಲಾ ಆವರಣದಲ್ಲಿ 1200 ಜನ ಮತಗಟ್ಟೆ ಅಧಿಕಾರಿಗಳು ಮತ್ತು ಸಹಾಯಕ ಮತಗಟ್ಟೆ ಅಧಿಕಾರಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಎರಡನೇ ಹಂತದ ತರಬೇತಿ ಕಾರ್ಯಗಾರವನ್ನು ಉದ್ದೇಶಿಸಿ ಮಾತನಾಡಿದ ಅವರು ಮತದಾನವು ಮೇ. 7 ರಂದು ನಡೆಯಲಿದ್ದು ಮೇ 6 ರಂದು ಮಸ್ಟ್ ರಿಂಗ್ ಕಾರ್ಯ ನಡೆಯಲಿದೆ ಮತಗಟ್ಟೆ ಅಧಿಕಾರಿಗಳು ತಮ್ಮ ಮತಗಟ್ಟೆ ಸಂಖ್ಯೆ ಮತದಾನ ಪ್ರಕ್ರೀಯೆಗೆ ನೀಡಿದ ವಿವಿಪ್ಯಾಟ್ , ಮತಯಂತ್ರ ಸೇರಿದಂತೆ ಎಲ್ಲಾ ಸಾಮಾಗ್ರಿಗಳನ್ನು ಪರೀಲನೆ ಮಾಡಿಕೊಂಡು ತಮ್ಮ ತಮ್ಮ ಮತಗಟ್ಟೆ ಕೇಂದ್ರಗಳಿಗೆ ತೆಗೆದುಕೊಂಡು ತೆರಳಬೇಕು.ಚುನಾವಣಾ ಕಾರ್ಯವು ಎಲ್ಲಾರಿಗು ದೊರೆಯುವುದಿಲ್ಲ ನೀವೇ ಅದೃಷ್ಟ ಶಾಲಿಗಳು ತಮ್ಮ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಬೇಕು ಯಾವುದೇ ರೀತಿಯ ಭಯ ಪಡಬಾರದು ಎಂದು ಹೇಳಿದರು.ಈ ಸಂದರ್ಭದಲ್ಲಿ ಎಸ್ ಎಲ್ ಎ ಓ ಕುಂಬಾರ್, ತಹಶೀಲ್ದಾರ್ ಚಂದ್ರಶೇಖರ್ ನಾಯ್ಕ, ಬಿಇಓ ಹಾಲಮೂರ್ತಿ, ಬಿಆರ್ ಸಿ ಹಾಲಪ್ಪ, ಸೆಕ್ಟ್ ರ್ ಅಧಿಕಾರಿ ಪ್ರಭು ಸೇರಿದಂತೆ ಮತ್ತಿತರರು ಹಾಜರಿದ್ದರು.