11ನೇ ವಾರ್ಡಿನಲ್ಲಿ ಪಾಲಿಕೆ ಸದಸ್ಯಗೋವಿಂದರಾಜುಲು ಬಿಜೆಪಿ ಪರ ಮತಯಾಚನೆ
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮೇ.02: ಮಹಾನಗರ ಪಾಲಿಕೆಯ ಸದಸ್ಯ ಎನ್.ಗೋವಿಂದರಾಜುಲು ತಮ್ಮ 11 ನೇ ವಾರ್ಡಿನಲ್ಲಿ  ಮತದಾನ ಜಾಗೃತಿ ಹಾಗೂ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಅವರಿಗೆ ಮತ ನೀಡುವಂತೆ ಮತದಾರರಲ್ಲಿ ಮನವಿ ಮಾಡಿದರು.
ಗ್ರಹಂ ರೋಡ್,  ಸಂಕಲಮ್ಮ ಗುಡಿ ಹಿಂಭಾಗ, ಮುಚ್ಚುಗರ ಓಣಿ,  ಕುಂಬಾರ ಓಣಿ, ಸಿಡಿ ಸ್ಟ್ರೀಟ್, ಮಹಾನಂದಿ ಓಣಿ, ಪಿಂಜಾರ ಓಣಿ, ವೀರಭದ್ರೇಶ್ವರ ದೇವಸ್ಥಾನ ಮೊದಲಾದ ಪ್ರದೇಶಗಳಲ್ಲಿ ಸಂಚರಿಸಿ. ದೇಶದ ಭದ್ರತೆ ಮತ್ತು ಅಭಿವೃದ್ದಿಗಾಗಿ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲು ಬಿಜೆಪಿಯ ಕಮಲದ ಗುರ್ತಿಗೆ ಮತನೀಡಿ ಎಂದು ಕಳೆದ ಹತ್ತುವರ್ಷಗಳ ಎನ್.ಡಿ.ಎ ಸರ್ಕಾರದ ಸಾಧನೆಗಳ ಕರಪತ್ರ ನೀಡಿ  ಮೇ 7ರಂದು ಬಿಜೆಪಿಗೆ ಮತ ಹಾಕುವಂತೆ ಮನವಿ ಮಾಡಿದರು.
ಈ ವೇಳೆ ಜಿಲ್ಲಾ ಹಾಗೂ ನಗರ ಮಹಿಳಾ ಅಧ್ಯಕ್ಷರು,  ವಾರ್ಡಿನ ಪ್ರಮುಖರು, ಭೂತ್ ಅಧ್ಯಕ್ಷರು, ಮಹಿಳೆಯರು ಮತ್ತು ಯುವಕರು  ಪಾಲ್ಗೊಂಡಿದ್ದರು.