ಹಿಂದುಳಿದ ವರ್ಗಗಳಿಗೆ ಕಾಂಗ್ರೆಸ್ ಕೊಡುಗೆ ಶೂನ್ಯ-ಶರಣು ಗೋರೆಬಾಳ
ಸಂಜೆವಾಣಿ ವಾರ್ತೆ
ಸಿಂಧನೂರು.ಮೇ.೦೧- ಬಿಜೆಪಿ ನೇತೃತ್ವದ ಕೇಂದ್ರದಲ್ಲಿ ಪ್ರಧಾನಿ ಮೋದಿ ಹಾಗೂ ರಾಜ್ಯ ಬಸವರಾಜ ಬೊಮ್ಮಾಯಿ ಸರ್ಕಾರಗಳು ಈ ದೇಶದ ಬಹುಸಂಖ್ಯಾತ ವರ್ಗ ಕ್ಕೆ ಅಪಾರವಾದ ಕೊಡುಗೆಯನ್ನು ಕೊಟ್ಟಿದ್ದಾರೆ ಆದರೆ ಕಾಂಗ್ರೆಸ್ ಪಕ್ಷದ ಕೊಡುಗೆ ಮಾತ್ರ ಈ ವರ್ಗಕ್ಕೆ ಏನು ಇಲ್ಲ. ಕಾಂಗ್ರೆಸ್ ನವರ ಕೊಡುಗೆ ಶೂನ್ಯ ಎಂದು ಬಿಜೆಪಿ ಜಿಲ್ಲಾ ಒಬಿಸಿ ಮೋರ್ಚಾ ಉಪಾಧ್ಯಕ್ಷ ಶರಣು ಗೋರೆಬಾಳ ಹೇಳಿದರು.
ಪತ್ರಿಕೆಗೆ ಹೇಳಿಕೆ ನೀಡಿದ ಅವರು ಶ್ರೀ ಕನಕದಾಸರ ಜಯಂತಿ, ಶ್ರೀ ವಾಲ್ಮೀಕಿ ಜಯಂತಿ, ಶ್ರೀ ನಾರಾಯಣ ಗುರು ಜಯಂತಿ ಆಚರಣೆ ಜಾರಿ ಮಾಡಿ ಹಿಂದೂಳಿದ ವರ್ಗಗಳ ನಾಯಕರುಗಳಿಗೆ ಸಾರ್ವತ್ರಿಕ ಗೌರವ ಮನ್ನಣೆ ದೊರಕುವಂತೆ ಮಾಡಿದ್ದು, ಹಾಗೂ ಹಿಂದೂಳಿದ ವರ್ಗಗಳ ಮಠ ಮಾನ್ಯಗಳಿಗೆ ವಿಶೇಷ ಅನುದಾನ ನೀಡಿದ್ದು, ನಮ್ಮ ಬಿಜೆಪಿ ಸರ್ಕಾರ.
ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ೨ ಲಕ್ಷ ಸಹಾಯಧನ ಹಾಗೂ ಸ್ತ್ರೀ ಶಕ್ತಿ ಸಂಘಗಳಿಗೆ ೫ ಲಕ್ಷ ರೂ ವರೆಗೆ ಬಡ್ಡಿ ರಹಿತ ಸಾಲ ಮತ್ತು ಬಿ.ಪಿ.ಎಲ್ ಕಾರ್ಡ್ ಹೊಂದಿದವರಿಗೆ ವಾರ್ಷಿಕ ೫ ಲಕ್ಷ ರೂ ವರೆಗೆ ಉಚಿತ ಚಿಕಿತ್ಸೆ, ಎಪಿಎಲ್ ಕುಟುಂಬಗಳಿಗೆ ಶೇ.೩೦% ಚಿಕಿತ್ಸೆ ನೆರವು.ರಾಷ್ಟ್ರೀಯ ಗೋಕುಲ ಮಿಷನ್ ಯೋಜನೆಯಡಿಯಲ್ಲಿ ಜಾನುವಾರ ಸಾಕಣೆ, ಹಾಲು ಉತ್ಪಾದನೆಗೆ ಪ್ರೋತ್ಸಾಹ. ತರಕಾರಿ ಹಣ್ಣು ಬೆಳೆಯುವ ರೈತರಿಗೆ ತಗಲುವ ವೆಚ್ಚದ ಶೇ.೫೦ % ರಷ್ಟು ಸಹಾಯಧನ,ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ಕೊಡುತ್ತಿರುವುದು ಬಿಜೆಪಿ ಕೊಡುಗೆ.ಮಾತೃ ಶ್ರೀ ಯೋಜನೆಯಡಿಯಲ್ಲಿ ಗರ್ಭಿಣಿ ಮಹಿಳೆಯರಿಗೆ ೬ ಸಾವಿರ ರೂ ನೆರವು.
ಹೀಗೆ ಹಿಂದುಳಿದ ವರ್ಗಗಳ ಜನ ಸಾಮಾನ್ಯರಿಗೆ, ಅವರ ಉತ್ತೇಜನಕ್ಕಾಗಿ ಹಲವಾರು ಕೊಡುಗೆಗಳನ್ನು ನೀಡಿದ್ದು ಇಲ್ಲಿ ಸ್ಮರಿಸಬಹುದು. ಆದರೆ, ಕಾಂಗ್ರೆಸ್‌ನವರ ಕೊಡುಗೆ ಏನು ತಿಳಿದಿಲ್ಲ ಎಂದು ಪತ್ರಿಕೆಯೊಂದಿಗೆ ಹಂಚಿಕೊಂಡರು.