ಅಭ್ಯರ್ಥಿ ರಾಜಶೇಖರ್ ಹಿಟ್ನಾಳ ಪರ ಮತಯಾಚಿಸಿದ ಡಾ.ಯತಿಂದ್ರ ಸಿದ್ದರಾಮಯ್ಯ
ಸಂಜೆವಾಣಿ ವಾರ್ತೆ
ಸಿಂಧನೂರು.ಮೇ.೦೨- ತಾಲ್ಲೂಕಿನ ಮಸ್ಕಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕುರುಕುಂದ ಗ್ರಾಮದಲ್ಲಿ ಕೊಪ್ಪಳ ಲೋಕಸಭಾ ಅಭ್ಯರ್ಥಿ ಹಿಟ್ನಾಳ ಪರ ಬಿರುಸಿನ ಪ್ರಚಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸುಪುತ್ರರಾದ ಡಾ. ಯತಿಂದ್ರ ಸಿದ್ದರಾಮಯ್ಯ ರವರು ಪಕ್ಷದ ಅಭ್ಯರ್ಥಿ ರಾಜಶೇಖರ್ ಹಿಟ್ನಾಳ ಅವರಿಗೆ ಮತ ಹಾಕಿ, ಹಾಕಿಸಿ ಪ್ರಚಂಡ ಬಹುಮತಗಳಿಂದ ಆರಿಸಿ ತರಬೇಕೆಂದರು.
ಕಳೆದ ಹತ್ತು ವರ್ಷಗಳಿಂದ ಅಧಿಕಾರದಲ್ಲಿದ್ದ ಮೋದಿ ಆಡಳಿತದಲ್ಲಿ ಯಾವುದೇ ಅಭಿವೃದ್ಧಿ ಪರವಾದ ಕೆಲಸಗಳಾಗಿಲ್ಲ, ವಿದೇಶಿದಲ್ಲಿರುವ ಕಪ್ಪು ಹಣ ವಾಪಾಸ್ ತಂದು ದೇಶದ ಪ್ರತಿಯೊಬ್ಬರ ಖಾತೆಗೆ ೧೫ ಲಕ್ಷ ರೂ ಹಾಕ್ತೀವಿ ಎಂದ್ದಿದ್ದರೂ ೧೫ ಪೈಸೆ ಬಂದಿಲ್ಲ, ವರ್ಷಕ್ಕೆ ೨ ಕೋಟಿ ಉದ್ಯೋಗ ಸೃಷ್ಟಿಯಾಗಲಿಲ್ಲ, ನಿರುದೋಗ ಯುವಕರಿಗೆ ಪಕೋಡ ಮಾರಲು ಹೋಗಿ ಎಂದಿದ್ದಾರೆ. ದಿನ ನಿತ್ಯ ಅಗತ್ಯ ವಸ್ತುಗಳ ಬೆಲೆ ಇಳಿಸ್ತಿವಿ ಎಂದರು ಇಳಿಸಲಿಲ್ಲ, ರೈತರ ಆದಾಯ ದುಪ್ಪಟ್ಟು ಮಾಡುತಿವಿ ಅಂದ್ರು ಅದು ಆಗಲಿಲ್ಲ .ರೈತರ ಹೋರಾಟ ಹತ್ತಿಕ್ಕುವ ಕೆಲಸ ಮಾಡುತ್ತಿದೆ .ರೈತ ವಿರೋಧಿ ಕಾಯ್ದೆಗಳ ಜಾರಿಗೆ ತಂದು ರೈತರಿಗೆ ಮೋಸ ಎಸಗಿದ್ದಾರೆ ಯೋಚನೆ ಮಾಡಿ ಎಚ್ಚರಿಕೆಯಿಂದ ಮತ ನೀಡಿ.
ಈ ಬಾರಿ ಧರ್ಮ ಧರ್ಮದ ನಡುವೆ ದ್ವೇಷದ ಭಾಷಣ ಮಾಡಿ ಕೋಮು ಗಲಭೆ ಸೃಷ್ಟಿ ಮಾಡ್ತಿದ್ದಾರೆ. ಬಡವರ ಪರವಾಗಿ ಯೋಜನೆಗಳು ಜಾರಿಗೆ ತಂದಿಲ್ಲ. ಕಾರ್ಪೊರೇಟ್ ಗಳ ಪರವಾಗಿದೆ ಈ ಬಿಜೆಪಿ ಸರ್ಕಾರ ಎಂದು ಹೇಳಿದರು.
ಗ್ರಾಮದ ನಿವಾಸಿಗಳಿಗೆ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಗಳನ್ನು ಯೋಜನೆಗಳ ಬಗ್ಗೆ ಮನಮುಟ್ಟುವಂತೆ ತಿಳಿ ಹೇಳಿ
ಮಹಿಳೆಯರಿಗೆ ಕಾರ್ಡ್ ಗಳನ್ನು ವಿತರಿಸಿದರು.
ಅದ್ದೂರಿ ಸ್ವಾಗತ: ಬಪ್ಪೂರು ಹಾಗೂ ತಿಡಿಗೋಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರುಡಾ.ಯತಿಂದ್ರ ಸಿದ್ರಾಮಯ್ಯ ಅವರನ್ನು ಕುರುಕುಂದ ಗ್ರಾಮಕ್ಕೆ ಬೈಕ್ ರ್ಯಾಲಿ ಹಾಗೂ ಡೊಳ್ಳು ವಾದ್ಯಗಳ ಮೂಲಕ ಅದ್ದೂರಿಯಾಗಿ ಸ್ವಾಗತ ಬರಮಾಡಿಕೊಂಡರು.
ಗುಂಡ್ಲು ಪೇಟೆ ಶಾಸಕ ಗಣೇಶ್ ಪ್ರಸಾದ್ ಮಾತನಾಡಿ ಜಾತ್ಯಾತೀತ ಪಕ್ಷ ಅಂದ್ರೆ ಅದು ಕಾಂಗ್ರೆಸ್ .ಎಲ್ಲಾ ವರ್ಗದ ಬಡ ಜನರಿಗೆ ಯೋಜನೆಗಳನ್ನು ನೀಡಿರುವುದು ಕಾಂಗ್ರೆಸ್. ೬೦ ವರ್ಷಗಳ ಸಾಧನೆ ಇಂದು ನಾವು ತಂತ್ರಜ್ಞಾನದಲ್ಲಿ ಮುಂದುವರಿಯುವುದಕ್ಕೆಕಾಂಗ್ರೆಸ್ ಇಂದು ಕಾಂಗ್ರೆಸ್ ಡ್ಯಾಂ, ಕಾಲುವೆ ಶಾಲಾ-ಕಾಲೇಜುಗಳು ಇದು ಕಾಂಗ್ರೆಸ್ ಕೊಡುಗೆ ನಮ್ಮ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ನಾವು ಹೇಳಿರುವ ಯೋಜನೆಗಳು ಜಾರಿ ಯಾಗುತ್ತೆ ಎಂದು ಹೇಳಿದರು.
ಪ್ರಾಸ್ತಾವಿಕ ವಾಗಿ ಶಾಸಕ ಬಸನಗೌಡ ತುರ್ವಿಹಾಳ ಮಾತನಾಡಿ ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಮೊದಲಿಗೆ ಕಪ್ಪು ಹಣ, ಎರಡನೇ ಅವಧಿ ಸರ್ಜಿಕಲ್ ಸ್ಟ್ರೈಕ್, ಪುಲ್ವಾಮಾ ದಾಳಿ ಮೂಲಕ ಅಧಿಕಾರಕ್ಕೆ ಬಂದರು. ಈ ಬಾರಿ ರಾಮಮಂದಿರ ಮೂಲಕ ಮತ ಕೇಳುತ್ತಿದ್ದಾರೆ. ಬಿಜೆಪಿ ಯವರು ಅಧಿಕಾರಕ್ಕೆ ಬರುವ ಪೂರ್ವದಲ್ಲೆ ನಾವು ಶ್ರೀ ರಾಮನನ್ನು ಪೂಜಿಸುತ್ತಿದ್ದಿವಿ ಸ್ವಾಮಿ ಈಗ ರಾಮ ಮಂದಿರ ನಾವು ಕಟ್ಟಿರುವುದು ಎಂದು ಬಿಂಬಿಸುತ್ತಿದ್ದೀರಾ ನಾವು ಕೂಡ ರಾಮನ ಆರಾಧಕರೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮಲ್ಲಿಕಾರ್ಜುನ್ ಗೌಡ, ಕೆಪಿಸಿಸಿ ಸದಸ್ಯ ನಲ್ಲಾ ವೆಂಕಟೇಶ್ವರರಾವ್, ಎಂ.ಈರಣ್ಣ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ನವೀನ್, ಮಹೇಶ್, ಮಹಾಂತಪ್ಪ ಸಾಹುಕಾರ್, ಬಹಿ ರಂಗ ಸಭೆಯ ವೇದಿಕೆಯಲ್ಲಿದ್ದರು ಹಾಗೂ ಸಾವಿರಾರು ಕಾರ್ಯಕರ್ತರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.