ಬಡವರು ಹಾಗೂ ಮಧ್ಯಮ ವರ್ಗದವರ ಬದುಕು ಇಂದು ಸಂಕಷ್ಡಕ್ಕೀಡಾಗಿದೆ :ಸಾತಿ ಸುಂದರೇಶ್
ಸಂಜೆವಾಣಿ ವಾರ್ತೆ
ಮಾನ್ವಿ ಮೇ ೦೨ :- ಪಟ್ಟಣದ ಎಪಿಎಂಸಿ ಉದ್ಭವ ಆಂಜನೇಯ ಹಮಾಲರ ಸಂಘದ ಕಾರ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿ.ಪಿ.ಐ. ರಾಜ್ಯ ಘಟಕದ ಕಾರ್ಯದರ್ಶಿ ಸಾತಿ ಸುಂದರೇಶ್ ಮಾತನಾಡಿ ದೇಶದಲ್ಲಿ ಕಳೆದ ೧೦ ವರ್ಷಗಳ ಕಾಲ ಆಡಳಿತ ನಡೆಸಿದ ಬಿಜೆಪಿ ನೇತೃತ್ವದ ಸರಕಾರದ ಕೋಮುವಾದಿ ಹಾಗೂ ಕಾರ್ಪೊರೇಟ್ ಸಂಸ್ಥೆಗಳ ಪರವಾಗಿರುವ ನೀತಿಗಳಿಂದಾಗಿ ದೇಶದ ಅಭಿವೃದ್ದಿಯಲ್ಲಿ ಬಾರಿ ಹಿನ್ನಾಡೆಯಾಗಿದೆ ಲಾಭದಲ್ಲಿದ ಅನೇಕ ದೇಶದ ಸಾರ್ವಜನಿಕ ವಲಯದ ಉದ್ದಿಮೆಗಳನ್ನು ಕಾರ್ಪೊರೇಟ್ ಕಂಪನಿಗಳಿಗೆ ವಹಿಸಿದ್ದರೆ.ಜಿ.ಎಸ್.ಟಿ ಯಂತಹ ತೆರಿಗೆ ಪದ್ದತಿಯಿಂದಾಗಿ ದೇಶದ ಜರಿಗೆ ಅಗತ್ಯವಾಗಿರುವ ವಸ್ತುಗಳ ಬೆಲೆ ಏರಿಕೆಯಿಂದಾಗಿ ಬಡವರು ಹಾಗೂ ಮಧ್ಯಮ ವರ್ಗದವರ ಬದುಕು ಇಂದು ಸಂಕಷ್ಡಕ್ಕೀಡಾಗಿದೆ. ಕೋಮುವಾದಿ ನೀತಿಯಿಂದಾಗಿ ದೇಶದಲ್ಲಿ ಶಾಂತಿ, ಸೌಹಾರ್ದಕ್ಕೆ ಧಕ್ಕೆಯುಂಟಾಗಿದೆ, ಕಾರ್ಮಿಕರ,ಬಡವರ, ರೈತರ ವಿರೋಧಿಯಾಗಿರುವ ಬಿಜೆಪಿ ಪಕ್ಷವನ್ನು ತಿರಸ್ಕರಸಿ ,ಜನಪರವಾಗಿರುವ ಪಕ್ಷವನ್ನು ಅಧಿಕಾರಕ್ಕೆ ತರುವನಿಟ್ಟಿನಲ್ಲಿ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸಲಾಗುವುದು ಅದ್ದರಿಂದ ಮೇ.೭ ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಜಿ.ಕುಮಾರನಾಯಕ ರವರಿಗೆ ಬೆಂಬಲಿಸಿ ಮತಹಾಕಬೇಕು ಎಂದು ತಿಳಿಸಿದರು.
ಚುನಾವಣಾ ಜಾಗೃತಿಯ ಕರಪತ್ರಗಳನ್ನು ವಿತರಿಸಲಾಯಿತು.
ಎಐಟಿಯುಸಿ ಸಂಘಟನೆಯ ಗೌರವಾಧ್ಯಕ್ಷ ಎಂ.ಬಿ.ಸಿದ್ರಾಮಯ್ಯ ಸ್ವಾಮಿ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.