ಇಂದು ರಾಯಚೂರಿಗೆ ರಾಹುಲ್ ಗಾಂಧಿ ಆಗಮನ-ಕಾರ್ಯಕ್ರಮ ಯಶಸ್ವಿಗೆ ಬಯ್ಯಪೂರು ಕರೆ
ಸಂಜೆವಾಣಿ ವಾರ್ತೆ
ಲಿಂಗಸೂಗೂರು.ಮೇ.೦೨-
ಜನಪರ ಮತ್ತು ಬಡವರ ಪರವಾದ ನಮ್ಮ ಕಾಂಗ್ರೆಸ್ ಪಕ್ಷಕ್ಕೆ ನಿಮ್ಮೆಲ್ಲರ ಬೆಂಬಲ ಇರಲಿ,೨೦೨೪ ರ ಲೋಕಸಭಾ ಚುನಾವಣೆ ನಿಮಿತ್ಯ ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆಯವರು ರಾಯಚೂರು ನಗರಕ್ಕೆ ಆಗಮಿಸುತ್ತಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಯಿಸಲು ವಿಧಾನ ಪರಿಷತ್ ಸದಸ್ಯರಾದ ಶರಣಗೌಡ ಪಾಟೀಲ್ ಬಯ್ಯಪೂರ್ ಕರೆ ಕೊಟ್ಟರು.
ಪಟ್ಟಣದ ಪತ್ರಿಕಾ ಭವನದಲ್ಲಿ ಮಾತನಾಡಿದ ಅವರು ಇಂದು ಸಾಯಂಕಾಲ ೩ ಗಂಟೆಯಿಂದ ೬ ಗಂಟೆಯವರೆಗೆ ರಾಯಚೂರು ನಗರದ ಬಸವೇಶ್ವರ ವೃತ್ತದ ಹತ್ತಿರ ಹಮ್ಮಿಕೊಂಡಿರುವ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮದಲ್ಲಿ ನಮ್ಮ ನಾಯಕರಾದ ರಾಹುಲ್ ಗಾಂಧೀಜಿಯವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಯವರು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಉಪ ಮುಖ್ಯಮಂತ್ರಿ ಡಿ.ಕೆ.ಶಿವುಕುಮಾರ್ ರವರು ಸೇರಿದಂತೆ ಇನ್ನೂ ಅನೇಕ ಜನ ಪಕ್ಷದ ಮುಖಂಡರು ಭಾಗವಹಿಸಲಿದ್ದು. ರಾಯಚೂರು ಮತ್ತು ಕೊಪ್ಪಳ ಲೋಕಸಭಾ ಕ್ಷೇತ್ರದ ಎಲ್ಲ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವೀಗೋಳಿಸಲು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಭೂಪನಗೌಡ ಪಾಟೀಲ್ ಕರಡಕಲ್, ಬಸವರಾಜ್ ಗಣೇಕಲ್, ಶಶಿಧರ್ ಪಾಟೀಲ್, ಗುಂಡಪ್ಪ ನಾಯಕ್, ಏಕಾಂಬಾರಣ್ಣ, ಮಲ್ಲಣ್ಣ ವಾರದ, ಇದ್ದರು.