ಅದ್ದೂರಿ ನಡೆದ ಮುನೇಶ್ವೆರಸ್ವಾಮಿ ಜಾತ್ರೆ
ವಿಜಯಪುರ.ಮೇ೨:ಪಟ್ಟಣದ ಸಮೀಪದ ಹೊಲೇರಹಳ್ಳಿ ಗ್ರಾಮದ ಇತಿಹಾಸ ಪ್ರಸಿದ್ದ ಶ್ರೀ ಮುನೇಶ್ವೆರಸ್ವಾಮಿ ದೇವಾಲಯದ ಜಾತ್ರೆ ಮಹೋತ್ಸವ ಅದ್ದೂರಿಯಾಗಿ ಸಾವಿರಾರೂ ಭಕ್ತ ಸಮೂಹದಲ್ಲಿ ನಡೆಯಿತು.
ಹೊಲೇರಹಳ್ಳಿ ಗ್ರಾಮದ ಸುತ್ತಮುತ್ತಲಿನ ಗ್ರಾಮಗಳಾದ ದೊಡ್ಡಮುದ್ದೇನಹಳ್ಳಿ, ಪಿ.ರಂಗನಾಥಪುರ, ಚಂದೇನಹಳ್ಳಿ, ಪುರ, ಚಿಕ್ಕನಹಳ್ಳಿ, ಗೊಡ್ಲುಮುದ್ದೇನಹಳ್ಳಿ, ನಾರಾಯಣಪುರ, ಕೊಮ್ಮಸಂದ್ರ ಸೇರಿದಂತೆ ದೇವಾಲಯದಲ್ಲಿ ಸಾವಿರಾರು ಭಕ್ತಾಧಿಗಳು ಪೂಜೆ ಸಲ್ಲಿಸಿ ಮುನೇಶ್ವರಸ್ವಾಮಿಗೆ ಹರಕೆ ಹೊತ್ತು ದೇವಾಲಯದ ಮುಂಭಾಗದ ರಸ್ತೆಯಲ್ಲಿ ಸುಡು ಬಿಸಿಲನ್ನು ಲೆಕ್ಕಿಸಿದೆ ಮಹಿಳೆಯರು ಮಕ್ಕಳು ಸೇರಿದಂತೆ ಎಲ್ಲರೂ ತಮ್ಮ ಭಕ್ತಿಯನ್ನು ಅರ್ಪಿಸಿದರು.
ಗ್ರಾಮಗಳಿಂದ ಹರಿದ ಬಂದ ದೀಪಾರತಿ: ದೇವಾಲಯದ ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರರೂ ಮಹಿಳೆಯರು ವಿವಿಧ ಬಗ್ಗೆಯ ಪುಷ್ವಗಳಿಂದ ತಯಾರು ಮಾಡಿ ದೀಪಗಳನ್ನು ಎತ್ತಿಕೊಂಡು ಊರಿನಲ್ಲೆ ಮೆರವಣಿಗೆಯೊಂದಿಗೆ ತಮಟೆ ವಾದ್ಯದೊಂದಿಗೆ ದೇವಾಲಯದ ಬಳಿ ಸಾವಿರಾರು ಮಹಿಳೆಯರು ದೀಪಾ ಆರತಿ ಬೆಳಗಿ ಭಕ್ತಿಯನ್ನು ಸಮರ್ಪಿಸಿದರು.
ಬಾಡೂಟ ಜೋರ್: ಈ ಜಾತ್ರೆಯಲ್ಲಿ ಭಕ್ತರು ಕುರಿ ಕೋಳಿಯನ್ನು ಬಲಿ ನೀಡಿ ಬಾಡೂಟದ ಭಕ್ತಿ ಸೇವೆ ನೆರವೇರಿಸಿದರು.
ವಾಹನ ದಟ್ಟನೆ: ಈ ದೇವಾಲಯದಲ್ಲಿ ಪ್ರತಿವರ್ಷವು ಸಾವಿರರೂ ಭಕ್ತರು ಆಗಮಿಸಿದ ಹಿನ್ನಲೇ ಬಸ್ಸ್ ವ್ಯವಸ್ಥೆಯನ್ನು ಮಾಡಲಾಗಿತ್ತು, ದೇವಾಲಯದ ಬಳಿ ವಾಹನ ದಟ್ಟನೆ ಹೆಚ್ಚದ ಹಿನ್ನಲೇ ಬೇರೆ ಕಡೆಯಿಂದ ಬರಲು ಪೋಲಿಸ್ ವ್ಯವಸ್ಥೆ ಮಾಡಲಾಗಿತ್ತು.
ಪಾನಕ ಮಜ್ಜಿಗೆ ವಿತರಣೆ: ದೇವಾಲಯಕ್ಕೆ ಸಾವಿರರೂ ಭಕ್ತರು ಭಾಗವಹಿಸಿದ ಹಿನ್ನಲೇ ಅಲ್ಲಿನ ಸ್ಥಳೀಯ ಗ್ರಾಮದ ಭಕ್ತರು ಬಿಸಿಲಿ ಹೆಚ್ಚದ ಹಿನ್ನೆಲೆ ಎಲ್ಲಾ ಸಾರ್ವಜನಿಕರಿಗೆ ನೀರು ಮಜ್ಜಿಗೆ ಕೋಸಂಬರಿಯನ್ನು ವಿತರಿಸಿದರು.