ಶಾರ್ಟ ಸಕ್ರ್ಯೂಟ್: ಮೂರು ಅಂಗಡಿಗಳಿಗೆ ಬೆಂಕಿ
ಬಾದಾಮಿ,ಮೇ2: ವಿದ್ಯುತ್ ಶಾರ್ಟ್ ಸಕ್ರ್ಯೂಟ್ ಆಗಿ ಬೆಂಕಿ ಹತ್ತಿ ಮೂರು ಅಂಗಡಿಗಳಿಗೆ ಹಾನಿಯಾದ ಘಟನೆ ಇಲ್ಲಿನ ಸಾಯಿನಗರದಲ್ಲಿ ಮಂಗಳವಾರ ಮದ್ಯರಾತ್ರಿ ನಡೆದಿದೆ.
ಶಾರ್ಟ್ ಸಕ್ರ್ಯೂಟ್ ದಿಂದ ಸಾಯಿನಗರದ ಸಲಿಂ ಬಾಬುಸಾಬ ಬಾಗವಾನ ಇವರ ಸಲೀಂ ಆಟೋ ಸರ್ವಿಸ್ ಬೈಕ್ ಗ್ಯಾರೇಜ್, ಜಹಂಗೀರ್ ಬುಡ್ಡೆ ಸಾಬ್ ನದಾಫ್ ಸಂಗಮ ಗಾದಿ ವರ್ಕ, ಸಂತೋಷ ಬಡಿಗೇರ ಇವರ ಕಾಳಿಕಾದೇವಿ ಫರ್ನಿಚರ್ ವಕ್ರ್ಸ್ ಅಂಗಡಿಗಳಲ್ಲಿ ಬೆಂಕಿ ಹತ್ತಿ ಸುಮಾರು ರೂ.70 ರಿಂದ 80 ಲಕ್ಷದವರೆಗೆ ನಷ್ಟವಾಗಿದೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಸಂಸದ ಪಿ.ಸಿ.ಗದ್ದಿಗೌಡರ ಮತ್ತು ಶಾಸಕ ಭೀಮಸೇನ ಚಿಮ್ಮನಕಟ್ಟಿ ಇವರು ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಲೀಕರಿಗೆ ಸಾಂತ್ವನ ಹೇಳಿ ಸರಕಾರದಿಂದ ನಷ್ಟದ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು.