ಕುರಿಕೋಟ:ಐದು ದಿನಗಳ ಪ್ರವಚನ ಉದ್ಘಾಟನೆ
ಕಲಬುರಗಿ,ಮೇ.2: ಕಮಲಾಪುರ ತಾಲೂಕಿನ ಕುರಿಕೋಟ ಗ್ರಾಮದ ಶ್ರೀಗುರು ಚಿನ್ನದಕಂತಿ ಚಿಕ್ಕವೀರೇಶ್ವರ ಹಿರೇಮಠದಲ್ಲಿ ನಾಡಚೇತನ ಡಾ. ರೇವಣಸಿದ್ಧ ಶಿವಾಚಾರ್ಯರ ಷಷ್ಟಿಪೂರ್ತಿ ಸಮಾರಂಭದ ನಿಮಿತ್ತವಾಗಿ ಐದು ದಿನಗಳ ಕಾಲ ಪ್ರವಚನ
ಹಮ್ಮಿಕೊಳ್ಳಲಾಯಿತು.ಸಾನಿಧ್ಯ ವಹಿಸಿದ ಪೂಜ್ಯ ರೇವಣಸಿದ್ಧ ಶಿವಾಚಾರ್ಯರು ಅತಿಥಿ ಮಹೋದಯರ ಸಮ್ಮುಖದಲ್ಲಿ ಗ್ರಾಮದ ಸಮಸ್ತ ಭಕ್ತರ ಮಧ್ಯೆ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿದರು
ಅತಿಥಿಗಳಾದ ಕೃಷಿ ಪಂಡಿತ ಶರಣಬಸಪ್ಪ ಪೆÇಲೀಸ್ ಪಾಟೀಲ್, ಗ್ರಾಮ ಪಂಚಾಯತಿ ಅಧ್ಯಕ್ಷರಾದ ಸುಮಿತ್ರ ಬಾಯಿ ಬಿ ಸಾಗರ್, ಶಿವಲಿಂಗಯ್ಯ ಮಠಪತಿ, ನಾಗಣ್ಣ ಬಡಿಗೇರ್, ಸಂಗಣ್ಣ ಚಿಲಿಶೆಟ್ಟಿ, ಗುರು ಶಾಂತ, ಸುನಿಲ್ ಸುಲ್ತಾನಪುರ್, ಬಸವರಾಜ ಶೀಲವಂತ ಸೇರಿದಂತೆ ಗ್ರಾಮದ ಅನೇಕ ಜನ ಭಾಗಿಯಾದರು. ಪ್ರವಚನಕಾರರಾದ ಶಿವಲಿಂಗ ಶಾಸ್ತ್ರೀ ಗರೂರ ವೀರೇಶ್ ಯಡ್ರಾಮಿ ಗವಾಯಿ ತಬಲಾವಾದಕ ಜ್ಞಾನೇಶ್ ಬೆಳಕೋಟ ಸಂಗೀತ ಸೇವೆ ಸಲ್ಲಿಸಿದರು.ಅಂಬರ ಮಡ್ಡೆ ನಿರೂಪಿಸಿದರು.