ಶ್ರೀ ಚನ್ನಕೇಶವ ಸ್ವಾಮಿ ಬ್ರಹ್ಮ ರಥೋತ್ಸವ
ಆನೇಕಲ್.ಮೇ.೨:ಹಾರಗದ್ದೆ ಗ್ರಾಮದಲ್ಲಿರುವ ಇತಿಹಾಸ ಪ್ರಸಿದ್ದ ದೇವಾಲಯವಾದ ಶ್ರೀ ಭೂ ನೀಳಾ ಸಮೇತ ಶ್ರೀ ಚನ್ನಕೇಶವ ಸ್ವಾಮಿಯ ಬ್ರಹ್ಮ ರಥೋತ್ಸವ ಅಪಾರ ಭಕ್ತರ ಮತ್ತು ಗ್ರಾಮಸ್ಥರ ಸಮ್ಮುಖದಲ್ಲಿ ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಇನ್ನೂ ಇದೇ ಸಂಧರ್ಭದಲ್ಲಿ ಭಕ್ತರು ರಥದ ಮೇಲೆ ಬಾಳೆ ಹಣ್ಣು ಎಸೆದು ತಮ್ಮ ಭಕ್ತಿಯನ್ನು ಸಮರ್ಪಿಸಿದರು ಮತ್ತು ವೀರಗಾಸೆ ಸೇರಿದಂತೆ ಹಲವು ಕಲಾ ತಂಡಗಳಿಂದ ರಥವು ಗ್ರಾಮದ ಪ್ರಮುಖ ರಸ್ತೆಯಲ್ಲಿ ಹೋಗುತ್ತಿದ್ದಂತೆ ಭಕ್ತರು ಗೋವಿಂದ ಗೋವಿಂದ ಎಂದು ಘೋಷಣೆಗಳನ್ನು ಕೂಗಿದ ದೃಶ್ಯಗಳು ಕಂಡು ಬಂತು. ಹಾಗೆಯೇ ಸ್ವಾಮಿಗೆ ಮತ್ತು ದೇವಾಲಯಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು.
ಇನ್ನೂ ಇದೇ ಸಂಧರ್ಭದಲ್ಲಿ ಖಗ್ಗಪುರಿ ಗುಡ್ ಬಾಯ್ಸ್ ವತಿಯಿಂದ ಅನ್ನ ದಾಸೋಹ ಮತ್ತು ಅರವಂಟಿಕೆ ಕಾರ್ಯಕ್ರಮವನ್ನು ಅಯೋಜಿಸಿದ್ದರು. ಇನ್ನು ಕಾರ್ಯಕ್ರಮದಲ್ಲಿ ಭಕ್ತರು ಹಾರಗದ್ದೆ ಗ್ರಾಮಸ್ಥರು ಭಾಗವಹಿಸಿದ್ದರು.