ಪುರುಷೋತ್ತಮ ಯೋಗ
ಸತ್ತೂರು,ಮೇ.2: ಶ್ರೀಮನ್ ಮಧ್ವಾಚಾರ್ಯ ಮೂಲ ಸಂಸ್ಥಾನ ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರ ಅನುಗ್ರಹದಿಂದ ಭಾರತದಾದ್ಯಂತ ಹಮ್ಮಿಕೊಂಡಿರುವ , ಶ್ರೀಮದ್ ಭಗವದ್ಗೀತಾ 15 ನೇ ಅಧ್ಯಾಯವಾದ ಪುರುಷೋತ್ತಮ ಯೋಗ ಅಭಿಯಾನ ಕಾರ್ಯಕ್ರಮವನ್ನು ಸತ್ತೂರಿನ ನಾರಾಯಣ ಪಾರಾಯಣ ಬಳಗದ ಆಶ್ರಯದಲ್ಲಿ, ಉದಯಗಿರಿಯ ಮೊದಲನೇ ಬಸ್ ಸ್ಟಾಪ್ ಹತ್ತಿರ ಇರುವ, ಪ್ರಕಾಶ ದೇಸಾಯಿ ಅವರ ಮನೆಯಲ್ಲಿ, ಬರುವ ಶನಿವಾರ ಮತ್ತು ಭಾನುವಾರ ಅಂದರೆ ದಿನಾಂಕ 4 ಮತ್ತು 5 ರಂದು ಸಾಯಂಕಾಲ 6 ರಿಂದ 7 ರ ವರೆಗೆ ಜರುಗಲಿದೆ. ವಿಶೇಷ ಉಪನ್ಯಾಸಕರಾಗಿ ಡಾ. ಭೀಮಸೇನಾಚಾರ್ಯ ಮಳಗಿ ಆಗಮಿಸಲಿದ್ದಾರೆ. ಇದಕ್ಕೂ ಪೂರ್ವ, ನಾರಾಯಣಿ ಭಜನಾ ಮಂಡಳಿಯವರಿಂದ ಭಜನೆ ಮತ್ತು ಬಳಗದ ಸದಸ್ಯರಿಂದ ಶ್ರೀ ಹರಿವಾಯು ಗುರುಗಳ ಪಾರಾಯಣದಿಗಳು ನಡೆಯಲಿದೆ . ಸಕಲ ಸದ್ಭಕ್ತರು ಸಕಾಲಕ್ಕೆ ಆಗಮಿಸಲು ಮತ್ತು ಹೆಚ್ಚಿನ ಮಾಹಿತಿಗಾಗಿ ಮೊಬೈಲ ಸಂಖ್ಯೆ 63 61 83 57 10 ನ್ನು ಸಂಪರ್ಕಿಸಲು ಬಳಗದ ಕಾರ್ಯದರ್ಶಿಯಾದ ರಘೋತ್ತಮ ಅವಧಾನಿಯವರು ತಿಳಿಸಿದ್ದಾರೆ.