ನೇರ ಮಾವು ಮಾರಾಟ
ಧಾರವಾಡ.ಮೇ.2: ಧಾರವಾಡದ ಗಾಂಧಿ ಶಾಂತಿ ಪ್ರತಿಷ್ಠಾನ ಕೇಂದ್ರದಲ್ಲಿ ಧಾರವಾಡದ ಮಾವು ಬೆಳೆಗಾರರ ಬಳಗದಿಂದ ಮಾವು ಮಾರಾಟವನ್ನು ಪ್ರಾರಂಭಿಸಲಾಯಿತು. ಮಾರಾಟ ಪ್ರಕ್ರಿಯೆಗೆ ವಿದ್ಯುಕ್ತವಾಗಿ ಚಾಲನೆ ನೀಡಿ ಧಾರವಾಡÀ ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಡಿ. ಪಿ. ಬಿರಾದಾರ ಮಾತನಾಡಿದರು. ಉತ್ತಮ ಗುಣಮಟ್ಟದ ಮಾವಿನ ಹಣ್ಣನ್ನು ನ್ಯಾಯಯುತ ಬೆಲೆಯಲ್ಲಿ ಬೆಳೆಗಾರರಿಂದ ನೇರವಾಗಿ ಬಳಕೆದಾರರರಿಗೆ ತಲುಪಿಸುವ ಮಾವು ಬೆಳೆಗಾರರ ಬಳಗದ ಪ್ರಯತ್ನ ಶ್ಲಾಘನೀಯವಾಗಿದೆ ಎಂದರು. ಈ ಅವಕಾಶವನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳಬೇಕೆಂದು ಕರೆ ನೀಡಿದರು. ಇದು ಸಂಘಟನೆ ಮೂಲಕ ಮಾತ್ರ ಸಾಧ್ಯ. ಕಾರಣ ಈ ನಿಟ್ಟಿನಲ್ಲಿ ಈ ಬಳಗ ಕೇವಲ ಬೆಳೆಗಾರರ ಸಂಘಟನೆಯಾಗದೇ ಬೆಳೆಗಾರ-ಬಳಕೆದಾರ ಸಂಘಟನೆಯಾಗಲಿ ಎಂದು ಸಲಹೆ ನೀಡಿದರು. ಮಾವಿನ ಅಭಿವೃದ್ಧಿಗಾಗಿ ಈ ಸಂಘಟನೆಯನ್ನು ಬಲಪಡಿಸಲು ಬಹಳಷ್ಟು ಅವಕಾಶಗಳಿದ್ದು ಈ ನಿಟ್ಟಿನಲ್ಲಿ ತಾವು ಎಲ್ಲ ರೀತಿಯ ಸಹಾಯ ಸಹಕಾರ ನೀಡುವುದಾಗಿ ತಿಳಿಸಿದರು.
ಧಾರವಾಡ ಜಿಲ್ಲಾ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶÀಕ ಭದ್ರನ್ನವರ ಮಾತನಾಡಿ ಇಲಾಖೆ ವತಿಯಿಂದ ಎಲ್ಲ ರೀತಿಯ ಸಹಕಾರ ಮತ್ತು ಮಾರ್ಗದರ್ಶನವನ್ನು ಬಳಗಕ್ಕೆ ನೀಡಲಾಗುತ್ತಿದ್ದು ಮುಂದೆಯೂ ಇನ್ನೂ ಹೆಚ್ಚಿನ ಮಟ್ಟದ ಸಹಾಯವನ್ನು ನೀಡಲಾಗುವುದೆಂದು ತಿಳಿಸಿದರು. ಸಧ್ಯದಲ್ಲಿಯೇ ಇಲಾಖೆ ವತಿಯಿಂದ ಮಾವು ಮೇಳವನ್ನು ಏರ್ಪಡಿಸಲಾಗುವುದು. ಎಲ್ಲರೂ ಮೇಳದಲ್ಲಿ ಭಾಗವಹಿಸಬೇಕೆಂದು ಕರೆ ನೀಡಿದರು.
ಬಾಗಲಕೋಟ ತೋಟಗಾರಿಕೆ ವಿಶ್ವ ವಿದ್ಯಾಲಯದ ಸ್ಥಳೀಯ ಕುಂಭಾಪೂರ ಕೇಂದ್ರದ ಮುಖ್ಯಸ್ಥ ಡಾ. ಲಕ್ಷ್ಮ್ಮಣ ಕುಕನೂರ ಮಾತನಾಡಿ ಪ್ರಾರಂಭದಿಂದಲೂ ತಾವು ಬಳಗದ ತಾಂತ್ರಿಕ ಮಾಹಿತಿ ಕೊರತೆಯನ್ನು ನೀಗಿಸಲು ಪ್ರಯತ್ನಿಸುತ್ತಿದ್ದು ಬಳಗದ ಸಹಯೋಗದಲ್ಲಿ ಅನೇಕ ಕಾರ್ಯಾಗಾರ ಮತ್ತು ವಿಚಾರ ಗೋಷ್ಠಿಗಳನ್ನು ಏರ್ಪಡಿಸುತ್ತಿದ್ದೇವೆ ಎಂದರು.
ಡಾ. ರಾಜೇಂದ್ರ ಪೋದ್ದಾರ ಪ್ರಾಸ್ತಾವಿಕವಾಗಿ ಮಾತನಾಡಿ ಧಾರವಾಡ ಜಿಲ್ಲೆಯು ಅಮೂಲ್ಯ ನೈಸರ್ಗಿಕ ಸಂಪನ್ಮೂಲಗಳನ್ನು ಹೊಂದಿದ್ದು, ಧಾರವಾಡ ಜಿಲ್ಲೆಗೆ ಹಣ್ಣುಗಳ ರಾಜನೆಂದೇ ಪ್ರಸಿದ್ಧಿಯಾದ ಮಾವು ಬೆಳೆ ಅದರಲ್ಲೂ ಆಪೂಸ ಒಂದು ವರದಾನವಾಗಿದ್ದು ಈ ಬೆಳೆಯ ಸಂಪೂರ್ಣ ಲಾಭ ರೈತರಿಗೆ ದೊರೆಯಬೇಕೆಂದರು. ಈ ನಿಟ್ಟಿನಲ್ಲಿ ಮಾವು ಬೆಳೆಗಾರರ ಬಳಗವನ್ನು ಪ್ರಾರಂಭಿಸಲಾಗಿದೆ ಎಂದರು. ಬಳಗವು ಮಾವಿನ ಸಮಗ್ರ ಅಭಿವೃದ್ಧಿ, ಬೆಳೆಗಾರರಿಂದ ಉತ್ತಮ ಗುಣಮಟ್ಟದ ಮಾವು ಉತ್ಪಾದನೆ, ಬಳಕೆದಾರರರಿಗೆ ಉತ್ತಮ ಗುಣಮಟ್ಟದ ಮಾವು ಸರಬರಾಜು ಮತ್ತು ರೈತ ಬೆಳೆಗಾರರ ಮಾವಿನ ಆದಾಯ ಹೆಚ್ಚಿಸುವ ಗುರಿಗಳನ್ನು ಹೊಂದಿದೆ ಎಂದರು. ಇದಕ್ಕಾಗಿ ಬಳಗದ ವತಿಯಿಂದ ನಿರಂತರವಾಗಿ ಅನೇಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತಿದ್ದು, ಇದೀಗ ಮಾರಾಟಕ್ಕೆ ಒತ್ತು ಕೊಟ್ಟು ನೇರ ಮಾರಾಟ ವ್ಯವಸ್ಥೆಯನ್ನು ಏರ್ಪಡಿಸಲಾಗಿದ್ದು ಇದರಿಂದ ಉತ್ಪಾದಕ ಮತ್ತು ಗ್ರಾಹಕ ಇಬ್ಬರಿಗೂ ಲಾಭ ಎಂದರು.
ಬಳಗದ ಮುಖಂಡರಾದ ಸುಭಾಷ ಆಕಳವಾಡಿಯವರು ಅಧ್ಯಕ್ಷತೆ ವಹಿಸಿ ಮಾತನಾಡಿ ಮುಂಬರುವ ದಿನಗಳಲ್ಲಿ ಸಂಘವನ್ನು ಇನ್ನೂ ಸಶಕ್ತಗೊಳಿಸುವ ಗುರಿಯನ್ನು ಹೊಂದಿದ್ದು, ಎಲ್ಲರೂ ಸಹಾಯ ಸಹಕಾರ ನೀಡಬೇಕೆಂದು ಕೇಳಿಕೊಂಡರು. ಗಂಗಾಧರ ಹೊಸಮನಿ ಸ್ವಾಗತಿಸಿದರು, ಶಿವು ಅಮ್ಮಿನಗಡ ವಂದಿಸಿದರು ಹಾಗೂ ಸುರೇಶ ಕುಲಕರ್ಣಿ ನಿರೂಪಿದರು. ಕಾರ್ಯಕ್ರಮದಲ್ಲಿ ಧಾರವಾಡದ ಅನೇಕ ಗಣ್ಯರು, ವಿಜ್ಞಾನಿಗಳು, ರೈತರು, ಗ್ರಾಹಕರು ಮತ್ತು ಮಕ್ಕಳು ಭಾಗವಹಿಸಿದ್ದರು. ಗಣ್ಯರು ಮಾರಾಟ ಮಳಿಗೆಗಳನ್ನು ವಿಕ್ಷೀಸಿ ಮಾರಾಟಗಾರರಿಗೆ ಮತ್ತು ಬಳಕೆದಾರರಿಗೆ ಶುಭ ಕೋರಿದರು. ಧಾರವಾಡ ಜಿಲ್ಲೆಯ ಹಲವಾರು ಹಳ್ಳ್ಳಿಗಳಿಂದ ಬಂದಿರುವ ಮಾವಿನ ಮಾರಾಟ ಪ್ರಾರಂಭಿಸಲಾಯಿತು. ಪ್ರಮೋದ ಗಾವಕರ್ ಅವರ ತೋಟದಲ್ಲಿ ಬೆಳೆಯಲಾದ ವಿಶಿಷ್ಠವಾದ ಮಿಯಾಝಾಕಿ ಮಾವು ಮತ್ತು 45 ವಿವಿಧ ತಳಿಗಳು ಜನರ ಗಮನ ಸೆಳೆದವು.