ರಸ್ತೆ ಪಕ್ಕದ ತಗ್ಗು ಸರಿಪಡಿಸಲು ಆಗ್ರಹ
ಗುಳೇದಗುಡ್ಡ,ಮೇ.2: ಪಟ್ಟಣದಲ್ಲಿ ಸಂಗಮ ಸಂಕೇಶ್ವರ ರಾಜ್ಯಹೆದ್ದಾರಿಯ ಕಾಮಗಾರಿಯು ನಡೆಯುತ್ತಿದ್ದು, ಈಗ ರಸ್ತೆಯು ಸುಮಾರು ಒಂದು ಅಡಿ ಎತ್ತರವಾಗಿದ್ದು ಇದರಿಂದ ರಸ್ತೆ ಪಕ್ಕದಲ್ಲಿ ಫುಟ್‍ಪಾತ್‍ಗೆ ಬಿಟ್ಟ ಜಾಗ ತಗ್ಗಾಗಿದ್ದು, ಇದರಿಂದ ರಸ್ತೆಯ ಪಕ್ಕದ ಅಂಗಡಿಗಳಿಗೆ ಜನರು ಹೋಗಿ ಬರಲು ತೊಂದರೆಯಾಗುತ್ತಿದೆ. ತಗ್ಗಾದ ರಸ್ತೆಯನ್ನು ಸರಿಪಡಿಸಿ ವ್ಯವಾಹಾರಕ್ಕೆ ಅನುಕೂಲ ಮಾಡಿಕೊಂಡುವಂತೆ ರಸ್ತೆಯ ಪಕ್ಕದ ವ್ಯಾಪಾರಸ್ಥರು ಲೋಕೊಪಯೋಗಿ ಕಿರಿಯ ಅಭಿಯಂತರ ಎ.ಕೆ. ಮಕಾನದಾರ ಅವರಿಗೆ ಮನವಿ ಮಾಡಿದರು.
ರಸ್ತೆ ಕಾಮಗಾರಿ ಸಂಪೂರ್ಣಗೊಂಡ ಬಳಿಕ, ಸಧ್ಯದ ಮಟ್ಟಿಗೆ ಮಣ್ಣುಹಾಕಿ ಎತ್ತರಮಾಡಿ ಜನರ ಸಂಚಾರಕ್ಕೆ ಅನುಕೂಲ ಮಾಡಿಕೊಡುತ್ತೇವೆ. ನಂತರ ಅನುದಾನ ನೋಡಿಕೊಂಡು ಪೇವರ್ಸ್ ಅಳವಡಿಸಲಾಗುವುದು ಎಂದು ಎ.ಕೆ. ಮಕಾನದಾರ ತಿಳಿದರು.
ಈ ಸಂದರ್ಭದಲ್ಲಿ ಅಶೋಕ ಹೆಗಡೆ, ರಾಚಪ್ಪ ಸಾರಂಗಿ, ಪ್ರಕಾಶ ವಾಳದಉಂಕಿ, ಮಂಜು ರಾಜನಾಳ, ಮಂಜುನಾಥ ತೊಗರಿ, ಪ್ರಾಶಂತ ಜವಳಿ ಮತ್ತಿತರರು ಇದ್ದರು.