ಸ್ವಚ್ಛತಾ ಕಾರ್ಮಿಕರಿಗೆ ಸನ್ಮಾನ
ಸಂಜೆವಾಣಿ ನ್ಯೂಸ್
ಮೈಸೂರು: ಮೇ.02:- ವಿಶ್ವ ಕಾರ್ಮಿಕರ ದಿನಾಚರಣೆಯ ಅಂಗವಾಗಿ ಸೈನಿಕ್ ಅಕಾಡೆಮಿ ವತಿಯಿಂದ ಹೂಟಗಳ್ಳಿ ಮತ್ತು ಬೆಳವಾಡಿ ನಗರದಲ್ಲಿ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳುವುದರ ಜೊತೆಗೆ, ಪ್ರಾಮಾಣಿಕ ಮತ್ತು ಶ್ರಮಜೀವಿಗಳು ಎಂದು ನಗರ ಸಭೆ ಹೂಟಗಳ್ಳಿಯಿಂದ ತಿಳಿಸಿರುವ 3 ಪೌರಕಾರ್ಮಿಕರಾದ ಮಹದೇವ್. ಆರ್, ಕಮಲಮ್ಮ ಮತ್ತು ಅಶೋಕ ರವರನ್ನು ಗೌರವಿಸಿ ಸನ್ಮಾನಿಸಲಾಯಿತು.
ನಂತರ ಮಾತನಾಡಿದ ಸೈನಿಕ ಅಕಾಡೆಮಿ ಸಂಸ್ಥಾಪಕರಾದ ಮಾಜಿ ಕಮಾಂಡೋ ಶ್ರೀಧರ್ ಸಿ.ಎಂ ಒಬ್ಬ ಕಸಗುಡಿಸುವ ವ್ಯಕ್ತಿಯಿಂದ ಇಡಿದು ದೊಡ್ಡ ಮಟ್ಟದ ಅಧಿಕಾರಿಗಳ ತನಕನು ಒಬ್ಬ ಕಾರ್ಮಿಕನಾಗಿರುತ್ತಾನೆ, ಕಾರ್ಮಿಕರಿಲ್ಲದೆ ಯಾವುದೇ ಅಭಿವೃದ್ಧಿ, ಬೆಳವಣಿಗೆ ಇರುವುದಿಲ್ಲ, ಎಲ್ಲಾ ಕಾರ್ಮಿಕರನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ, ಅದರಲ್ಲೂ ಈ ತರಹ ವರ್ಷವಿಡೀ ಸ್ವಚ್ಛ ಗೊಳಿಸುವ ಪೌರಕಾರ್ಮಿಕರನ್ನೂ ಗೌರವಿಸಬೇಕು ಎಂದು ಹೇಳಿದರು
ಈ ಸಂದರ್ಭದಲ್ಲಿ ಸೈನಿಕ ಅಕಾಡೆಮಿ ಮೈಸೂರಿನ(ರಿ) ಸಂಸ್ಥಾಪಕರು ಮಾಜಿ ಕಮಾಂಡೋ ಶ್ರೀಧರ್ ಸಿ.ಎಂ. ಸಹ ಸಂಸ್ಥಾಪಕಿ ಅನಿತಾ ಶ್ರೀಧರ್, ಅಧ್ಯಾಪಕರಾದ ಕೆ. ವಿಜಯ್ ಕುಮಾರ್, ಸುನೀತಾ ಹಾಗೂ ಹೂಟಗಳ್ಳಿ ನಗರ ಸಭೆಯ ಹೆಲ್ತ್ ಇನ್ಸ್ಪೆಕ್ಟರ್ ಅನಿಶ್ ರವರು, ಸಿಬ್ಬಂದಿಗಳು, ಪೌರಕಾರ್ಮಿಕರು ಮತ್ತು ಸೈನಿಕ ಅಕಾಡೆಮಿ ಮೈಸೂರಿನ ಎಲ್ಲಾ ಸಿಬ್ಬಂದಿ ವರ್ಗದವರು ಜೊತೆಗೆ ತರಬೇತಿ ಪಡೆಯುತ್ತಿರುವ ಬಾವಿ ಸೈನಿಕರುಗಳು ಉಪಸ್ಥಿತರಿದ್ದರು.