ಶ್ರೀ ಕೃಷ್ಣ ದಾಮದಲ್ಲಿ ಉಚಿತ ಸಾಮೂಹಿಕ ಉಪನಯನ
ಸಂಜೆವಾಣಿ ನ್ಯೂಸ್
ಮೈಸೂರು: ಮೇ.02:-ನಗರದ ಶ್ರೀ ಕೃಷ್ಣ ಟ್ರಸ್ಟ್ ಹಾಗೂ ಶ್ರೀ ಕೃಷ್ಣ ಮಿತ್ರ ಮಂಡಳಿ ವತಿಯಿಂದ ಗುರುವಾರ ಟಿ.ಕೆ ಲೇಔಟ್ ನಲ್ಲಿರುವ ಶ್ರೀ ಕೃಷ್ಣದಾಮದಲ್ಲಿ ಉಚಿತ ಸಾಮೂಹಿಕ ಉಪನಯನ ನಡೆಯಿತು
ಬೆಳಗ್ಗೆ 6 ಗಂಟೆಗೆ ಪ್ರಾರಂಭವಾಗಿ 10:15 ಗಂಟೆಗೆ ಬ್ರಹ್ಮೋಪದೇಶ ನೆರವೇರಿಸಲಾಯಿತು, ನಂತರ ವಟುಗಳಿಂದ ಶೋಭಾ ಯಾತ್ರೆ ಮತ್ತು ಅಶ್ವತ್ಥ ಪೂಜೆ ನೆರೆವೇರಿಸಲಾಯಿತು,
ಉಪನಯನ ಉದ್ದೇಶಿಸಿ ಮಾತನಾಡಿದ ಶ್ರೀ ಕೃಷ್ಣ ಟ್ರಸ್ಟ್ ಉಪಾಧ್ಯಕ್ಷರಾದ ರವಿಶಾಸ್ತ್ರಿ ತ್ರಿಮತಸ್ಥ ವಿಪ್ರ ಸಮುದಾಯದವರ ಅನುಕೂಲಕ್ಕಾಗಿ ಹಲವಾರು ವರ್ಷಗಳಿಂದ ಈ ಉಚಿತ ಉಪನಯನ ನಡೆಸಿಕೊಂಡು ಬರಲಾಗಿದೆ ಎಂದರು,
ವೇದವೆಂದರೆ ಜ್ಞಾನ, ಸಂಸ್ಕೃತಿ, ಪರಂಪರೆಗೆ ಸಾಕ್ಷಿ. ಭಾರತ ಮಾತ್ರವಲ್ಲ; ವಿಶ್ವಮಟ್ಟದಲ್ಲೂ ಮಾನ್ಯತೆ ಗಳಿಸಿದೆ. ವೇದ ಮಂತ್ರಗಳು ವ್ಯಕ್ತಿ ಜೀವನದ ಸಮಗ್ರ ಚಿತ್ರವನ್ನು ನೀಡಬಲ್ಲವು’ ಎಂದು ಹೇಳಿದರು.
ವಿದ್ವಾನ್ ಸುರೇಶ್ ಭಟ್ ರವರು ನೂತನ ವಟುಗಳಿಗೆ ಮಾರ್ಗದರ್ಶನ ನೀಡಿ, ಉಪನಯನದ ಮಹತ್ವ ತಿಳಿಸಿಕೊಟ್ಟರು. ಆನಂತರ ವಟುಗಳಿಗೆ ಮತ್ತು ಪೆÇೀಷಕರಿಗೆ ಪ್ರಸಾದ ವಿತರಿಸಲಾಯಿತು.
ಶ್ರೀ ಕೃಷ್ಣ ಟ್ರಸ್ಟ್ ಉಪಾಧ್ಯಕ್ಷರಾದ ರವಿ ಶಾಸ್ತ್ರಿ ಮತ್ತು ಪಿ ಎಸ್ ಶೇಖರ್, ಶ್ರೀ ಕೃಷ್ಣ ಮಿತ್ರ ಮಂಡಳಿ ಅಧ್ಯಕ್ಷರಾದ ಪಿ ಎಸ್ ರಮೇಶ್, ಶ್ರೀವತ್ಸ ರಾವ್, ರಾಘವೇಂದ್ರ ಪ್ರಸಾದ್, ಶ್ರೀ ಕೃಷ್ಣ ಮಿತ್ರ ಮಂಡಳಿ ಉಪಾಧ್ಯಕ್ಷರು ಪ್ರವೀಣ್ , ಶ್ರೀ ಕೃಷ್ಣ ಟ್ರಸ್ಟ್ ಕಾರ್ಯದರ್ಶಿ ಕೆ ವಿ ಶ್ರೀಧರ್, ಹಾಗೂ ಇನ್ನಿತರರು ಆಗಮಿಸಿದರು