ಗೂಳಿಪುರದಲ್ಲಿ ವಿದ್ಯುತ್ ಶಾರ್ಟ್‍ಸಕ್ಯೂಟ್‍ನಿಂದ ಒಂದು ಎಕರೆ ಕಬ್ಬು ನಾಶ: ಹೆಚ್ಚಿನ ಪರಿಹಾರಕ್ಕೆ ಒತ್ತಾಯ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಮೇ.02- ಜಮೀನಿನ ಮಧ್ಯ ಭಾಗದಲ್ಲಿ ಹಾದು ಹೋಗಿದ್ದ ವಿದ್ಯುತ್ ಲೈನ್‍ನಲ್ಲಿ ಶಾರ್ಟ್‍ಸಕ್ರ್ಯೂಟ್ ಉಂಟಾಗಿ ಒಂದು ಎಕರೆ ಕಬ್ಬಿನ ಫಸಲು ಸಂಪೂರ್ಣವಾಗಿ ಸುಟ್ಟು ಹೋಗಿರುವ ಘಟನೆ ಇತ್ತಿಚೆಗೆ ಗೂಳಿಪುರ ಗ್ರಾಮದ ಸಮೀಪದ ನಡೆದಿದೆ.
ತಾಲೂಕಿನ ಹೆಚ್. ಮೂಕಹಳ್ಳಿ ಗ್ರಾಮದ ನಿವಾಸಿ ರಾಜಮ್ಮ ಅವರಿಗೆ ಸೇರಿದ ಜಮೀನಿನಲ್ಲಿ ಈ ಅವಘಡ ನಡೆದಿದೆ. ಗೂಳಿಪುರ ಎಲ್ಲೆಗೆ ಸೇರಿದ ಸರ್ವೇ ನಂಬರ್ 22/6ರ ಒಂದು ಎಕರೆ ಪ್ರದೇಶದಲ್ಲಿ ಕಷ್ಟಪಟ್ಟು ಬೇಸಿಗೆಯ ನಡುವೆ ಕಬ್ಬು ಬೆಳೆದಿದ್ದರು. ಇನ್ನೇನೂ ಕಟಾವು ಮಾಡಬೇಕೆಂಬ ಎನ್ನುವಷ್ಟರಲ್ಲಿ ಮಧ್ಯಾಹ್ನ 12.30 ಸಮಯದಲ್ಲಿ ಜಮೀನಿನ ಮಧ್ಯೆ ಹಾದು ಹೋಗಿದ್ದು ವಿದ್ಯುತ್ ತಂತಿಯಲ್ಲಿ ಶರ್ಟ್‍ಸಕ್ಯೂಟ್ ಉಂಟಾಗಿ ಬೆಂಕಿ ಕಾಣಿಸಿಕೊಂಡು ಕಬ್ಬು ಸಂಪೂರ್ಣವಾಗಿ ಸುಟ್ಟು ಹೋಗಿದೆ.
ಇದರೊಟ್ಟಿಗೆ ಜಮೀನಿನಲ್ಲಿದ್ದ 40 ತೆಂಗಿನ ಮರು, ನಾಲ್ಕು ತೇಗದ ಮರ, ಡ್ರಿಪ್ ಪೈಪ್, ಬೋರ್‍ವೆಲ್ ಕೇಬಲ್, ಪೈಪ್, ಹನಿನೀರಾವರಿ ಫಿಲ್ಟರ್ ಸಹ ವಿದ್ಯುತ್ ಅವಘಡದಿಂದ ಸಂಪೂರ್ಣವಾಗಿ ಸುಟ್ಟು ಹೋಗಿದ್ದು, ಲಕ್ಷಾಂತರರ ರೂ. ನಷ್ಟವಾಗಿದ್ದು, ಸಂಬಂಧ ಪಟ್ಟ ಸೆಸ್ಕಾಂ ಅಧಿಕಾರಿಗಳು ಸೂಕ್ತ ಪರಿಹಾರ ನೀಡಬೇಕು ಎಂದು ನೊಂದ ರೈತ ಮಹಿಳೆ ರಾಜಮ್ಮ ಒತ್ತಾಯಿಸಿದ್ದಾರೆ.
ಈ ಸಂಬಂಧ ಸಂತೇಮರಹಳ್ಳಿ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹಾಗು ಪೊಲೀಸ್ ಠಾಣೆಗೆ ದೂರು ನೀಡಿದ್ಧಾರೆ.