ಪ್ರಜ್ವಲ್ ರೇವಣ್ಣ ಪ್ರಕರಣ ಬಸವ ನಾಡಿಗೆ ಕಳಂಕ: ಜಿಗ್ನೇಶ್ ಮೇಮಾನಿ
ಸಂಜೆವಾಣಿ ವಾರ್ತೆ,
ವಿಜಯಪುರ,ಮೇ.2: ಪ್ರಜ್ವಲ್ ರೇವಣ್ಣ ಪ್ರಕರಣ ನಡೆದಿದ್ದು, ಜನ್ಮಸ್ಥಳವಾದ ಬಸವ ನಾಡು ಕರ್ನಾಟಕ ರಾಜ್ಯಕ್ಕೆ ಅಷ್ಟೇ ಅಲ್ಲ. ಇದು ಇಡೀ ದೇಶಕ್ಕೆ ಅತ್ಯಂತ ಕಳಂಕಿತ ಪ್ರಕರಣ ಎಂದು ಗುಜರಾತ್ ಕಾಂಗ್ರೆಸ್ ಶಾಸಕ ಜಿಗ್ನೇಶ್ ಮೇಮಾನಿ ಹೇಳಿದರು.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ಪ್ರಕರಣ ಜೆಪಿ ನಡ್ಡಾ, ಅಮಿತಾ ಶಾ, ಮೋದಿ ಎಲ್ಲರಿಗೂ ಇದು ಮೊದಲೇ ಗೊತ್ತಿತ್ತು. ಆದರೂ ಪ್ರಜ್ವಲ್ ಗೆ ಟಿಕೆಟ್ ಕೊಟ್ಟರು. ಪ್ರಜ್ವಲ್ ರೇವಣ್ಣ ಹೆಗಲ ಮೇಲೆ ಕೈಹಾಕಿ ಪ್ರಧಾನಿ ನರೇಂದ್ರ ಮೋದಿ ಪ್ರಚಾರ ಮಾಡಲಾಯಿತು ಎಂದು ದೂರಿದರು.
ದಿಲ್ಲಿಯಲ್ಲಿ ಅಥ್ಲಟಿಕ್ಸ್ ಮೇಲೆ ಅತ್ಯಾಚಾರದ ವಿಚಾರವಾಗಿ ಮಹಿಳೆಯರು ಪ್ರತಿಭಟನೆ ಮಾಡಿದ್ದರು, ಆಗ ಅದನ್ನು ಮೋದಿ ಕೇಳಲಿಲ್ಲ ಎಂದರು.
ಮಣಿಪುರದಲ್ಲಿ ಮಹಿಳೆಯನ್ನು ನಗ್ನ ಮಾಡಿ ಓಡಾಡಿಸಿದರು, ಆಗ ಸಹ ದೇಶದ ಪ್ರಧಾನಿ ಒಂದೇ ಒಂದು ಮಾತು ಆಡಲಿಲ್ಲ. ಮೇಘಾಲಯ ಬಿಜೆಪಿ ಪಾರ್ಟಿಯ ಉಪಾಧ್ಯಕ್ಷ ಓರ್ವ ರೆಸಾರ್ಟ್ ನಡೆಸುತ್ತಿದ್ದ. ಅಲ್ಲಿ ಪೆÇೀಲಿಸರು ರೇಡ್ ಮಾಡಿದಾಗ 18 ವರ್ಷದೊಳಗಿನ 6 ಬಾಲಕಿಯರು ಸಿಕ್ಕರು. ಆರ್ ಎಸ್ ಎಸ್ ಹಾಗೂ ಬಿಜೆಪಿಯ ಮುಖಂಡರು ಬಲಾತ್ಕಾರ ಮಾಡಲು ಆ ರೆಸಾರ್ಟ್ ಬಳಕೆ ಮಾಡುತ್ತಿದ್ದರೆಂದು ಗಂಭೀರವಾಗಿ ಆರೋಪಿಸಿದರು.
ಗುಜರಾತ್ ನಲ್ಲಿ 40 ಸಾವಿರ ಮಹಿಳೆಯರು ನಾಪತ್ತೆ ಆಗಿದ್ದಾರೆ. ಆದರೆ ಅವರು ಎಲ್ಲಿ ಹೋದರು ಅನ್ನುವುದು ಗೊತ್ತಾಗಿಲ್ಲ. ಮೋದಿ ಅವರ 10 ವರ್ಷದ ಆಡಳಿತದಲ್ಲಿ ಸಾವಿರಾರು ಮಹಿಳೆಯರು ನಾಪತ್ತೆಯಾಗಿದ್ದಾರೆ.ಅವರೆಲ್ಲ ಎಲ್ಲಿ ಇದ್ದಾರೆ ಎಂಬುವುದು ಪತ್ತೆ ಇಲ್ಲ ಎಂದರು.
ಲಿಂಗಾಯತರು ಹಾಗೂ ದಲಿತರು ನಿಮ್ಮಷ್ಟಕ್ಕೆ ನೀವು ಜಗಳವಾಡಬಾರದು ಎಂದವರು ತಿಳಿಸಿದರು.
ಅಮಿತಾ ಶಾ ತಮ್ಮ ಮಗನಿಗೆ ಬಿಸಿಸಿಐ ಅಧ್ಯಕ್ಷ ಮಾಡಿದರೆ. ಆದರೆ ಇನ್ನುಳಿದ ಕಾರ್ಯಕರ್ತರಿಗೆ ತಲ್ವಾರ್ ಕೊಟ್ಟು ಹೊಡೆದಾಡಲು ಬಿಡುತ್ತಾರೆ. ಆರ್ ಎಸ್ ಎಸ್ , ಬಿಜೆಪಿಗರು ನಿರುದ್ಯೋಗದ ವಿಚಾರವಾಗಿ ಮಾತನಾಡಲಿ ಎಂದು ಹೇಳಿದರು.
ಗುಜರಾತ್ ಗಿಂತ 100 ಪಟ್ಟು ಸಿದ್ದರಾಮಯ್ಯ ಸರ್ಕಾರ ಉತ್ತಮವಾಗಿದೆ. ಪ್ರಜ್ವಲ್ ರೇವಣ್ಣ ವಿಚಾರವಾಗಿ ಇಡೀ ವಿಶ್ವಕ್ಕೆ ಗೊತ್ತಾಗಲಿ. ಕರ್ನಾಟಕ ರಾಜ್ಯದ ಪ್ರತಿಯೊಂದು ಮಹಿಳೆ ಪ್ರಜ್ವಲ್ ಪ್ರಕರಣ ಖಂಡಿಸಿ ವಿಡಿಯೋ ಮಾಡಿ ಹರಿಬಿಡಿ ಎಂದು ತಿಳಿಸಿದರು.