ಚಾಕುವಿನಿಂದ ಇರಿದು ಕಾರಿನಲ್ಲಿ ಹಾಕಿ ಬೆಂಕಿ ಹಚ್ಚಿ ವ್ಯಕ್ತಿಯ ಬರ್ಬರ ಕೊಲೆ
ಆಳಂದ,ಮೇ.1-ಚಾಕುವಿನಿ0ದ ಇರಿದು ಬಳಿಕ ಕಾರಿನಲ್ಲಿ ಹಾಕಿ ಬೆಂಕಿ ಹಚ್ಚಿ ವ್ಯಕ್ತಿಯೋರ್ವನನ್ನ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಆಳಂದ ಪಟ್ಟಣದ ಹೊರವಲಯದ ಪ್ರಗತಿ ಕಾಲೋನಿಯ ಪಾಚಫೂಲ್ ಹತ್ತಿರ ನಡೆದಿದೆ.
ಯಾದಗಿರಿ ಜಿಲ್ಲೆಯ ಸುರಪುರ ಮೂಲದ ರವಿಕುಮಾರ್ (35) ಕೊಲೆಯಾದ ವ್ಯಕ್ತಿ.
ಆಳಂದ ತಾಲ್ಲೂಕಿನ ಸಾವಳೇಶ್ವರ ಗ್ರಾಮದ ವಿಜಯ್ ಕುಮಾರ್ ಅವರ ಪತ್ನಿ ನೀಲಮ್ಮ ಜೊತೆ ರವಿಕುಮಾರ್ ಅನೈತಿಕ ಸಂಬಂಧ ಹೊಂದಿದ್ದ ಎನ್ನಲಾಗಿದೆ.
ಪತ್ನಿ ತನ್ನ ತಂಗಿಯ ಗಂಡ ರವಿಕುಮಾರ್ ಜೊತೆ ಅನೈತಿಕ ಸಂಬಂಧ ಹೊಂದಿದ ವಿಚಾರ ವಿಜಯ್ ಕುಮಾರ ಅವರಿಗೆ ತಿಳಿದು 3 ವರ್ಷ ಆಗಿತ್ತು, ವಿಜಯಕುಮಾರನ ಹೆಂಡತಿ ನೀಲಮ್ಮ ಗಂಡನಿಗೆ ಹೊಡೆಯಲು ಪ್ಲಾನ್ ಮಾಡಿ ರವಿಕುಮಾರ್‍ನನ್ನು ಕರೆಸಿ ಕಾರಿನಲ್ಲಿ ಗಂಡ ವಿಜಯಕುಮಾರನಿಗೆ ಕೂಡಿಸಿಕೊಂಡು ಯಾರು ಇಲ್ಲದ ಜಾಗದಲ್ಲಿ ಕಾರು ನಿಲ್ಲಿಸಿ ಗಂಡನಿಗೆ ಹೊಡೆಯಲು ನೀಲಮ್ಮ ಮತ್ತು ರವಿಕುಮಾರ ಚಾಕು ತೆಗೆಯುತ್ತಿದ್ದದ್ದನ್ನು ಕಂಡು ಇಬ್ಬರ ಬಳಿ ಇರುವ ಚಾಕುಗಳು ಕಸಿದುಕೊಂಡು ಈ ಬ್ಬರನ್ನು ಚಾಕುವಿನಿಂದ ಹೊಡೆದು ರವಿಕುಮಾರನಿಗೆ ಕಾರಿನಲ್ಲಿ ಹಾಕಿ ಬೆಂಕಿ ಹಚ್ಚಿಕೊಂದಿದ್ದಾನೆ. ಬಳಿಕ ಪತ್ನಿ ನೀಲಮ್ಮಳ ಕೊಲೆಗೂ ಯತ್ನಿಸಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ನೀಲಮ್ಮಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ವಿಜಯಕುಮಾರ್‍ನನ್ನು ಪೆÇಲೀಸರು ಬಂಧಿಸಿದ್ದಾರೆ. ಈ ಸಂಬಂಧ ಆಳಂದ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.