ಅಂಬೇಡ್ಕರ್ ಮೂರ್ತಿಗೆ ಅಪಮಾನ ಪ್ರಕರಣ ಹಿನ್ನೆಲೆಆರೋಪಿ ಕುಟುಂಬದ ಸದಸ್ಯರಿಗೆ ಥಳಿತ: ಮಿಂಚಿನ ಪ್ರತಿಭಟನೆ
ಕಲಬುರಗಿ,ಮೇ.1: ಕೋಟನೂರ್ (ಡಿ) ಸಮೀಪದ ಲುಂಬಿಣಿಉದ್ಯಾನದಲ್ಲಿಕಳೆದ ಜ.23ರಂದು ಬಾಬಾ ಸಾಹೇಬ್‍ಡಾ.ಭೀಮರಾವ್‍ಅಂಬೇಡ್ಕರ್ ಪ್ರತಿಮೆಗೆಅಪಮಾನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನುಮಂಜೂರಾದಆರೋಪಿಯಮನೆಗೆ ನುಗ್ಗಿ ಆತನಕುಟುಂಬದ ಸದಸ್ಯರನ್ನುಕಿಡಿಗೇಡಿಗಳು ಥಳಿಸಿದ ಘಟನೆಖಂಡಿಸಿ ವೀರಶೈವ-ಲಿಂಗಾಯತ ಸಮುದಾಯದಜನರುಇಲ್ಲಿನರಾಷ್ಟ್ರೀಯ ಹೆದ್ದಾರಿ 218 ಮೇಲೆ ಮಿಂಚಿನ ಪ್ರತಿಭಟನೆ ನಡೆಸಿದರು.
ಮಂಗಳವಾರ ಇಲ್ಲಿನ ನ್ಯಾಯಾಲಯ ಆರೋಪಿಗಳಾದ ಸಂಗಮೇಶ್, ಕಿರಣ, ಹನುಮಂತ ಹಾಗೂ ಮನು ಎಂಬ ನಾಲ್ವರಿಗೆಜಾಮೀನು ಮಂಜೂರು ಮಾಡಿದೆ.ಈ ಹಿನ್ನೆಲೆಯಲ್ಲಿಎಲ್ಲ ಆರೋಪಿಗಳು ಕಳೆದ ರಾತ್ರಿ ಕಲಬುರಗಿಯಕೇಂದಕಾರಾಗೃಹದಿಂದ ಬಿಡುಗಡೆಗೊಂಡಿದ್ದರು. ಇದೇವೇಳೆ, ಮಂಗಳವಾರ ಮಧ್ಯರಾತ್ರಿ ಸುಮಾರು 12.50ರ ಆಸುಪಾಸಿನಲ್ಲಿ ಆರೋಪಿ ಸಂಗಮೇಶ್ ಮನೆಗೆ ನುಗ್ಗಿದ ದಲಿತ ಸಮುದಾಯದ ಕೆಲವು ಯುವಕರು ಮನೆಯಲ್ಲಿದ್ದ ಸಂಗಮೇಶ್ ಸಹೋದರ ಅನಿಲ್ ಕುಮಾರ್, ಚಿಕ್ಕಪ್ಪ ಮಹಾದೇವಪ್ಪ, ತಾಯಿ ತಂಗೆಮ್ಮಅವರ ಮೇಲೆ ಹಲ್ಲೆ ನಡೆಸಿದ್ದಲ್ಲದೆ, ಮನೆಯ ಮುಂಭಾಗದಲ್ಲಿ ನಿಂತಿದ್ದಒಂದುಕಾರು, ನಾಲ್ಕು ಬೈಕ್‍ಗಳನ್ನು ಜಖಂಗೊಳಿಸಿ ಪರಾರಿಯಾಗಿದ್ದಾರೆಎನ್ನಲಾಗಿದೆ.
ಈ ಘಟನೆಯಲ್ಲಿತೀವ್ರವಾಗಿಗಾಯಗೊಂಡಿರುವ ಸಂಗಮೇಶ್‍ಕುಟುಂಬದಎಲ್ಲರನ್ನೂ ಕಲಬುರಗಿಯ ಬಸವೇಶ್ವರಆಸ್ಪತ್ರೆಯಲ್ಲಿಚಿಕಿತ್ಸೆಗಾಗಿ ಭರ್ತಿ ಮಾಡಲಾಗಿದ್ದು, ಈ ಘಟನೆವೀರಶೈವ-ಲಿಂಗಾಯತ ಸಮುದಾಯದಲ್ಲಿ ವ್ಯಾಪಕಆಕ್ರೋಶಕ್ಕೆಕಾರಣವಾಗಿದ್ದು, ಕೋಟನೂರ್ (ಡಿ) ಸಮೀಪದರಾಷ್ಟ್ರೀಯ ಹೆದ್ದಾರಿ ಮೇಲೆ ಸಮುದಾಯದನೂರಾರುಯುವಕರು, ಮಹಿಳೆಯರು ಮಿಂಚಿನ ಪ್ರತಿಭಟನೆಕೈಗೊಂಡರು.
ಮತ್ತೊಂದೆಡೆ, ‘ಬಾಬಾ ಸಾಹೇಬರ ಪುತ್ಥಳಿಗೆ ಅಪಮಾನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನ ಪತಿ ಬಂಧನಕ್ಕೆ ಒಳಪಟ್ಟು ವಿಚಾರಣೆಎದುರಿಸುತ್ತಿದ್ದಾರೆ.ಅವರುತಪ್ಪು ಮಾಡಿರುವುದು ಸಾಬೀತಾಗಿ ಶಿಕ್ಷೆಯಾದರೆ ನಮ್ಮದುಯಾವುದೇತಕರಾರುಇಲ್ಲ. ಆದರೆ, ನ್ಯಾಯಾಲಯದಿಂದಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ ಎಂಬ ಕಾರಣಕ್ಕೆಕುಟುಂಬದ ಸದಸ್ಯರ ಮೇಲೆ ಹಲ್ಲೆ ನಡೆಸುವುದುಯಾವ ನ್ಯಾಯ?ನಮ್ಮ ಮನೆಗೆ ನುಗ್ಗಿ ಹೊಡೆದರೂಈವರೆಗೆ ಪೊಲೀಸರುರಕ್ಷಣೆಗೆ ಮುಂದೆ ಬಂದಿಲ್ಲ’ ಎಂದು ಸಂಗಮೇಶ್ ಪತ್ನಿ ಪ್ರಿಯಾಂಕಾ ವಿಷಾದ ವ್ಯಕ್ತಪಡಿಸಿದರು.
ಜೊತೆಗೆ, ವೀರಶೈವ-ಲಿಂಗಾಯತ ಸಮುದಾಯದ ಮಹಿಳೆಯರು ಪ್ರತಿಭಟನೆಯ ನೇತೃತ್ವ ವಹಿಸಿದ್ದರಿಂದ ಕಲಬುರಗಿ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಮೇಲೆ ವಾಹನಗಳ ಸಂಚಾರ ಸಂಪೂರ್ಣಅಸ್ತವ್ಯಸ್ಥಗೊಂಡಿತ್ತು. ಹೀಗಾಗಿ, ಪೊಲೀಸ್‍ಕಮಿಷನರ್‍ಆರ್.ಚೇತನ್ ನೇತೃತ್ವದಲ್ಲಿ ಸ್ಥಳಕ್ಕೆ ಧಾವಿಸಿದ ಪೊಲೀಸ್ ಅಧಿಕಾರಿಗಳು ಸಮಾಧಾನಆಶ್ರಮದಎದುರಿನ ನಾಗನಳ್ಳಿ ರಸ್ತೆ ಮೂಲಕ ವಾಹನಗಳ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕಾಯಿತು.ಆದಾಗ್ಯೂ, ಕೋಟನೂರ್ ಸಮೀಪದಜೇವರ್ಗಿರಸ್ತೆಯಲ್ಲಿ ಸುಮಾರುಎರಡು ಕಿ.ಮೀವರೆಗೆ ವಾಹನಗಳ ದಟ್ಟಣೆಏರ್ಪಟ್ಟು ಪ್ರಯಾಣಿಕರು ಪರದಾಡಬೇಕಾಯಿತು.
ಸರಕಾರದ ವಿರುದ್ಧ ಧಿಕ್ಕಾರ
ಈ ಎಲ್ಲ ವಿದ್ಯಮಾನಗಳ ಮಧ್ಯೆರಾಷ್ಟ್ರೀಯ ಹೆದ್ದಾರಿ ಮೇಲೆ ಕುಳಿತು ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಹಲ್ಲೆಕೋರರನ್ನು ಬಂಧಿಸುವ ಭರವಸೆ ನೀಡುವವರೆಗೆ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದರಲ್ಲದೆ, ಟೈರುಗಳಿಗೆ ಬೆಂಕಿ ಹಚ್ಚಿಆಕ್ರೋಶ ಹೊರಹಾಕಿದರು.
ಬೆಳಗ್ಗೆ ಪ್ರತಿಭಟನೆ ಆರಂಭಗೊಳ್ಳುತ್ತಿದ್ದಂತೆಯೇ ಕಲಬುರಗಿ ನಗರ ಸೇರಿದಂತೆಜಿಲ್ಲೆಯ ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಪ್ರತಿಭಟನಾಕಾರರುರಾಜ್ಯ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.ಚುರುಗುಟ್ಟುತ್ತಿದ್ದ ಬಿಸಿಲಿನಲ್ಲೇ ಪ್ರತಿಭಟನೆ ಮುಂದುವರೆಸಿದರು.
ಪೊಲೀಸ್‍ಕಮಿಷನರ್‍ಆರ್.ಚೇತನ್ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರ ಮನವೊಲಿಸಲು ಯತ್ನಿಸಿದರಾದರೂ ಪ್ರತಿಭನಾಕಾರರು ಓಲೈಕೆಗೆ ಸೊಪ್ಪು ಹಾಕದೆ ಪ್ರತಿಭಟನೆ ಮುಂದುವರೆಸಿದರು.ಈ ವೇಳೆ ಸಂಸದಡಾ.ಉಮೇಶ್‍ಜಾಧವ್ ಮತ್ತು ಪೊಲೀಸ್‍ಕಮಿಷನರ್‍ಚೇತನ್‍ಅವರೊಂದಿಗೆ ಪ್ರತಿಭಟನಾಕಾರರುತೀವ್ರ ಮಾತಿನ ಚಕಮಕಿ ನಡೆಸಿದರು.
ಏತನ್ಮಧ್ಯೆ, ಘಟನಾ ಸ್ಥಳಕ್ಕೆ ಆಗಮಿಸಿದ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ಕಲಬುರಗಿಜಿಲ್ಲಾಧ್ಯಕ್ಷ ಶರಣು ಮೋದಿ ಅವರನ್ನು ಸುತ್ತುವರೆದ ಪ್ರತಿಭಟನಾಕಾರರು ವೀರಶೈವ-ಲಿಂಗಾಯತ ಸಮುದಾಯದ ವ್ಯಕ್ತಿಗಳ ಮೇಲೆ ಪದೇಪದೆ ದಾಳಿ ನಡೆಯುತ್ತಿದ್ದರೂಯಾವುದೇ ಸಕಾರಾತ್ಮಕಕ್ರಮ ಕೈಗೊಳ್ಳುತ್ತಿಲ್ಲ ಎಂದುಆಕ್ರೋಶ ವ್ಯಕ್ತಪಡಿಸಿದರು.
ಈ ಮಧ್ಯೆ ಪ್ರತಿಭಟನಾಕಾರರನ್ನು ಸಮಾಧಾನಪಡಿಸಲು ಯತ್ನಿಸಿದ ಶರಣು ಮೋದಿ, ಸಮುದಾಯದ ಹಿತಕಾಪಾಡುವುದರಜೊತೆಗೆತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿ ಸರಕಾರಕ್ಕೆ ಮೇಲೆ ಒತ್ತಡ ಹೇರುವುದಾಗಿ ಭರವಸೆ ನೀಡಿದರು.
ಸಂಸದ ಜಾಧವ್ ಅಸ್ವಸ್ಥ
ಕೋಟನೂರ್ (ಡಿ) ಸಮೀಪದರಾಷ್ಟ್ರೀಯ ಹೆದ್ದಾರಿ ಮೇಲೆ ವೀರಶೈವ-ಲಿಂಗಾಯತ ಸಮುದಾಯದ ವತಿಯಿಂದ ನಡೆಯುತ್ತಿದ್ದ ಪ್ರತಿಭಟನೆ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಸಂಸದಡಾ.ಉಮೇಶ್‍ಜಾಧವ್‍ಇದ್ದಕ್ಕಿದ್ದಂತೆಅಸ್ವಸ್ಥಗೊಂಡು ಕುಸಿದುಬಿದ್ದ ಘಟನೆ ನಡೆಯಿತು.
ಪ್ರತಿಭಟನಾನಿರತ ಜನರನ್ನು ಓಲೈಸಲು ಸ್ಥಳಕ್ಕೆ ಆಗಮಿಸಿದ ಕೆಲವೇ ಕ್ಷಣಗಳಲ್ಲಿ ಕುಸಿದು ಬಿದ್ದಜಾಧವ್‍ಅವರನ್ನು ಆಸ್ಪತ್ರೆಗೆಕರೆದೊಯ್ಯಲುತಕ್ಷಣ ಸ್ಥಳಕ್ಕೆ ಆಗಮಿಸಿದ 108 ಆಂಬ್ಯುಲೆನ್ಸ್‍ನಲ್ಲಿಯೇ ಜಾಧವ್‍ಅವರಿಗೆ ಪ್ರಾಥಮಿಕಚಿಕಿತ್ಸೆ ನೀಡಲಾಯಿತು.ನಂತರ ಅವರನ್ನು ಜಯದೇವ ಆಸ್ಪತ್ರೆಗೆ ಭರ್ತಿ ಮಾಡಲಾಯಿತು. ಬಿಸಿಲಿನ ಝಳ ಮತ್ತುರಕ್ತದಲ್ಲಿ ಸಕ್ಕರೆ ಅಂಶ ತೀವ್ರವಾಗಿ ಕುಸಿದ ಕಾರಣಕ್ಕಾಗಿ ಅವರುಅಸ್ವಸ್ಥರಾಗಿರುವ ಸಾಧ್ಯತೆಯಿದೆಎನ್ನಲಾಗುತ್ತಿದೆ.
ವೀರಶೈವ-ಲಿಂಗಾಯತ ಸಮಾಜದ ಹಿತಕಾಯುವ ನಿಟ್ಟಿನಲ್ಲಿಯಾವುದೇ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ತಪ್ಪಿತಸ್ಥರ ವಿರುದ್ಧಕ್ರಮ ಕೈಗೊಳ್ಳುವಂತೆ ಸರಕಾರವನ್ನುಒತ್ತಾಯಿಸಲಾಗುವುದು.ಸಮಾಜದ ಹಿತಕ್ಕೆ ಮಹಾಸಭಾ ಬದ್ಧ.