ಬಾವಿ ನೀರಲ್ಲಿ ಮುಳುಗಿ ವಿದ್ಯಾರ್ಥಿಗಳಿಬ್ಬರ ಸಾವು
ವಿಜಯಪುರ,ಮೇ.1: ಜಿಲ್ಲೆಯ ಸಿಂದಗಿ ತಾಲೂಕಿನ ಗೋಲಗೇರಿ ಗ್ರಾಮದಲ್ಲಿ ವಿದ್ಯಾರ್ಥಿಗಳಿಬ್ಬರು ಬಾವಿ ನೀರಿನಲ್ಲಿ ಮುಳುಗಿ ಮಂಗಳವಾರ ಮೃತಪಟ್ಟಿದ್ದಾರೆ.
ಗ್ರಾಮದ ಸಿದ್ದರಾಮ ಸ್ವಾಮೀಜಿ ಕಾಲೇಜಿನ ಪಿಯುಸಿ ವಿದ್ಯಾರ್ಥಿ ಸೋಮಶೇಖರ ಅಶೋಕ ಆಲಮೇಲ (17), ಮಲೀಕ್ ಹಷನಸಾಬ ನದಾಫ್ ( 17) ಮೃತಪಟ್ಟವರು.
ಗೆಳೆಯರೊಂದಿಗೆ ಬಾವಿಯಲ್ಲಿ ಈಜಲು ಹೋದ ವೇಳೆ ಈಜು ಬಾರದೆ ನೀರು ಕುಡಿದು ಉಸಿರುಗಟ್ಟಿ ಈ ದುರ್ಘಟನೆ ನಡೆದಿದೆ
ಕಲಕೇರಿ ಪೆÇೀಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.