ಸನಾತನ ಸಂಸ್ಕøತಿ ರಕ್ಷಣೆ ಚಿಂತನೆ ಅಗತ್ಯ : ರಾಜಕುಮಾರ ನಾಯ್ಕ್
ಔರಾದ್ :ಮೇ.1: ಸನಾತನ ಸಂಸ್ಕೃತಿ ಸಂರಕ್ಷಣೆ ಹಿನ್ನೆಲೆ ನಾವೆಲ್ಲರೂ ಚಿಂತನೆ ಮಾಡುವ ಅಗತ್ಯವಿದೆ ಎಂದು ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ರಾಜಕುಮಾರ್ ನಾಯ್ಕ್ ಹೇಳಿದರು.
ಪಟ್ಟಣದ ಪತ್ರಿಸ್ವಾಮಿ ಶಾಲೆಯಲ್ಲಿ ಭಾನುವಾರ ವಿಶ್ವ-ಹಿಂದೂ ಪರಿಷತ್ ಸಭೆಯಲ್ಲಿ ಮಾತನಾಡಿದ ಅವರು, ದೇಶದ ಹಿತಕ್ಕಾಗಿ, ಜಾತಿ ಮುಕ್ತ ಭಾರತ, ವಿದೇಶಿ ಮುಕ್ತ ಭಾರತ, ವಿಶ್ವಗುರು ಭಾರತ ಆಗಬೇಕಾದರೆ ಪ್ರತಿಯೊಬ್ಬ ವ್ಯಕ್ತಿ ಮತಗಟ್ಟೆಗೆ ಹೋಗಿ ಮತದಾನ ಮಾಡಬೇಕು ಎಂದು ಹೇಳಿದರು.
ಕಾರ್ಯದರ್ಶಿ ಅನೀಲ ಮೇತ್ರೆ ಮಾತನಾಡಿ, ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಬಲಪಡಿಸಲು ಮತದಾನ ಬಹಳ ಮುಖ್ಯ. ಒಬ್ಬರೂ ಮತದಾನದಿಂದ ದೂರ ಉಳಿಯಬಾರದು. ಈ ಹಿಟ್ಟಿನಲ್ಲಿ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಮನೆ ಮನೆಗೆ ತೆರಳಿ ಜನರಿಗೆ ತಿಳಿ ಹೇಳಬೇಕು ಎಂದರು.
ಬಜರಂಗ ದಳದ ತಾಲ್ಲೂಕು ಅಧ್ಯಕ್ಷ ಸೋನು ರಾಠೋಡ್, ಸಾಮಾಜಿಕ ನ್ಯಾಯ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಅಂಬಾದಾಸ ನಳಗೆ ವಿವಿಧ ಗ್ರಾಮಗಳಿಂದ ಆಗಮಿಸಿದ ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಸಭೆಯಲ್ಲಿ ಹಾಜರಿದ್ದರು